ತೇರದಾಳದಲ್ಲಿ ಪಿಎಫ್‍ಐ ಸಂಘಟನೆಯ ತೇರದಾಳ ಘಟಕದ ಪದಾಧಿಕಾರಿಗಳು ಕೋವಿಡ್‍ದಿಂದ ಮೃತ ಪಟ್ಟವರ ಶವಸಂಸ್ಕಾರ ಮಾಡುತ್ತಿರುವುದು.
ಶವಸಂಸ್ಕಾರದಲ್ಲಿ ಮಾನವೀಯತೆ ಮೆರೆದ ಪಿಎಫ್‍ಐ ಸಂಘಟನೆ
ತೇರದಾಳ : ಪಟ್ಟಣದ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕೋವಿಡ್‍ದಿಂದಾಗಿ ಮೃತ ಪಟ್ಟವರ ಆಕ್ರಂದನ ಮುಗಿಲು ಮುಟ್ಟುತ್ತಿದ್ದರೆ. ಮೃತರ ಶವ ಸಂಸ್ಕಾರ ಮಾಡಲು ಸಮಾಜದ ಬಾಂಧವರು, ಸಂಭಂದಿಕರು, ನೆಂಟರು ಸೋಂಕಿನ ನಂಜಿಗೆ ಅಂಜಿ ಅಂತ್ಯ ಸಂಸ್ಕಾರಕ್ಕೆ ಸೇರದಿರುವುದು ಮೃತರ ಸಂಭಂಧಿಕರ ದುಃಖ ನಿಜವಾಗಲು ಶೋಚನೀಯ ಸ್ಥಿತಿ. ಇಂತಹ ಸಂದರ್ಭದಲ್ಲಿ ಮೃತರ ಕುಟುಂಬಕ್ಕೆ ಆಶಾ ಕಿರಣವಾಗಿ ನಿಂತಿರುವುದು ಮುಸ್ಲಿಂ ಯುವಕರ ಪಿಎಫ್‍ಐ (ಪಾಪ್ಯೂಲರ ಪ್ರಂಟ್ ಆಫ್ ಇಂಡಿಯಾ ಸಂಘಟಣೆ) ತಂಡ ಶ್ಲಾಘನೀಯ.
ಈ ಸಂಘಟನೆಯು ಕೋವಿಡ್‍ದಿಂದ ಮೃತ ಪಟ್ಟವರ ಶವ ಸಂಸ್ಕಾರವನ್ನು ಅವರ ಧರ್ಮಗಳಿಗನುಸಾರವಾಗಿ ವಿಧಿ-ವಿಧಾನಗಳೊಂದಿಗೆ ಅಂತ್ಯಕ್ರಿಯೆ ಉಚಿತವಾಗಿ ನೆರವೇರಿಸಿ ದಃಖದ ಕಡಲಲ್ಲಿ ಮುಳಗಿದವರಿಗೆ ಸಂಘಟನೆಯ ಮಾನವೀಯತೆಯ ಕಾರ್ಯ ನಿಜವಾಗಲೂ ಮೆಚ್ಚುವಂತದ್ದು. ತೇರದಾಳ ಘಟಕದ ಪಿಎಫ್‍ಐ ಸಂಘಟನೆಯ ಪದಾಧಿಕಾರಿಗಳಾದ ಮುಪ್ತಿ ಸಲೀಂ ಇನಾಮದಾರ, ನಿಸಾರ ಅಹ್ಮದ್ ಅಲಾಸ್ ಮುಂದಾಳತ್ವದಲ್ಲಿ ಇನ್ನುಳಿದ 16 ಜನ ಹೊಂದಿರುವ ಈ ತಂಡ ಪಟ್ಟಣದ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕೋವಿಡ್‍ನಿಂದ ಮೃತ ಪಟ್ಟವರನ್ನು ಆಯಾ ಧರ್ಮಗಳಿಗನುಸಾರವಾಗಿ, ಅವರ ಅವರ ಧರ್ಮದ ವಿಧಿ-ವಿಧನಗಳೊಂದಿಗೆ ಆಯಾ ಧರ್ಮದ ರುದ್ರ ಭೂಮಿಯಲ್ಲಿ ಶವ ಸಂಸ್ಕಾರವನ್ನು ಮಾಡುತ್ತಿದ್ದಾರೆ.
ಈ ಕುರಿತು ಸಂಘಟನೆಯ ಮುಖ್ಯಸ್ಥ ಮುಪ್ತಿ ಸಲೀಂ ಇನಾಮದಾರ ಮಾತನಾಡಿ ನಾವು ಕೇವಲ ಒಂದು ಧರ್ಮದ ಮೃತರ ಶವಸಂಸ್ಕಾರ ಮಾಡದೇ ಇಂತಹ ಕೋವಿಡ್ ಸಂಕಷ್ಟದಲ್ಲಿ ಸಾಂಕ್ರಾಮಿಕ ಮಹಾಮಾರಿಗೆ ಹೆದರಿ ಎಲ್ಲ ಸಂಭಂಧಗಳು ಕಳಚಿ ಹೋಗಿವೆ. ಒಂದೊಂದು ಕುಟುಂಬದಲ್ಲಿ ಮೂರು ಜನರು ಮೃತರಾದರೆ ಆ ಕುಟುಂಬಕ್ಕೆ ದಾರಿ ತೋಚದಂತಾಗುತ್ತದೆ. ಅದಕ್ಕೆ ನಾವು ಮೃತರಾದವರ ಮಾಹಿತಿ ದೂರೆತ ತಕ್ಷಣ ನಾವು ಅಲ್ಲಿಗೆ ಹೋಗಿ ಆ ಕುಟುಂಬದವರಿಗೆ ಧೈರ್ಯ ತುಂಬುವುದರ ಜೊತೆಗೆ ಶವ ಸಂಸ್ಕಾರವನ್ನು ಅವರ ಧರ್ಮದ ವಿಧಿ-ವಿಧಾನಗಳೊಂದಿಗೆ ಮಾಡಿ ಅವರಿಗೆ ಸಾಂತ್ವಾನ ಹೇಳಿ ಬರುತ್ತೇವೆ. ಇಲ್ಲಿಯವರೆಗೆ ನಮ್ಮ ಸಂಘಟನೆಯ ವತಿಯಿಂದ ತೇರದಾಳ ಹಾಗೂ ಸುತ್ತಲಿನ ಗ್ರಾಮಗಳಲ್ಲಿ 14 ಜನರ ಶವ ಸಂಸ್ಕಾರ ಮಾಡಿರುತ್ತೇವೆ. ಆದರೆ ನಾವು ಈ ವರೆಗೆ ಯಾವುದೇ ಧರ್ಮದವರಿಂದ ಹಣವನ್ನು ಪಡೆಯದೇ ಅಂತ್ಯ ಸಂಸ್ಕಾರ ಮಾಡುತ್ತಿದ್ದೇವೆ. ಸ್ಯಾನಿಟೈಜರ್, ಪಿಪಿ ಕಿಟ್‍ಗಳನ್ನು ಪಡೆದುಕೊಂಡು ನಾವು ಸರಕಾರದ ಕೋವಿಡ್ ನಿಯಮಗಳನ್ನು ಪಾಲಿಸುವುದರ ಸುರಕ್ಷತೆಯನ್ನು ಅನುಸರಿಸಿ ಈ ಮಹತ್ವವಾದ ಕಾರ್ಯವನ್ನು ಮಾಡುತ್ತಿದ್ದೇವೆ ಎಂದರು.
ಈ ಮಹಾಮಾರಿ ವೈರಾಣು ಜಗತ್ತಿಗೆ ಹರಡಿರುವುದರಿಂದ ಇದು ಆದಷ್ಟು ಬೇಗನೆ ನಿರ್ಮೂಲನೆಯಾಗಲಿ. ಇದರಿಂದ ಜನರು ನಿರಾಳವಾಗಲಿ ಎಂದು ಆ ಭಗವಂತನಲ್ಲಿ ಪ್ರಾರ್ಥಿಸುತ್ತೇವೆ. ಮಹಾಮಾರಿ ಕೊರೊನಾದಿಂದ ವೈರಾಣುವಿನಿಂದ ಮೃತಪಟ್ಟವರ ಅಂತ್ಯಕ್ರಿಯೆ ನೆರವೇರಿಸಲು ಸಂಘಟನೆಯ ಪದಾಧಿಕಾರಿಗಳ ಮೊ. 7892118396ಕ್ಕೆ ಕರೆ ಮಾಡಬಹುದು ಎಂದು ಅವರು ತಿಳಿಸಿದರು.
Social Plugin