ವರದಿ: ಮಲ್ಲಿಕಾರ್ಜುನ ಘೋಸರವಾಡ
    ನಿಪ್ಪಾಣಿ ತಾಲೂಕಿನ ಸೌಂದಲಗಾ ಗ್ರಾಮದ ಸಂತ ನಿರಂಕಾರಿ ಸತ್ಸಂಗ ಭವನದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಜೊಲ್ಲೆ ಚಾರಿಟಿ ಫೌಂಡೇಶನ್ ಭಾರತೀಯ ವೈದ್ಯಕೀಯ ಸಂಸ್ಥೆ ಹಾಗೂ ಸಂತ ನಿರಂಕಾರಿ ಚರಿಟೇಬಲ್ ಫೌಂಡೇಶನ್ ಸಹಯೋಗದಿಂದ ಕೋವಿಡ್ ಸೊಂಕೀತರ ಚಿಕಿತ್ಸೆಗಾಗಿ ನಿರ್ಮಿಸಲಾದ 10ಆಕ್ಸಿಜನೆಟೆಡ್ ಬೆಡ್ ಹಾಗೂ 10ಸಾಮಾನ್ಯ ಹಾಸಿಗೆ ಸಾಮರ್ಥ್ಯದ ನೂತನ ಕೋವಿಡ್ ಆರೈಕೆ ಕೇಂದ್ರವನ್ನು ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ.ಶಶಿಕಲಾ ಜೊಲ್ಲೆಯವರು, ಹಾಗೂ ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಅಣ್ಣಾಸಾಹೇಬ ಜೊಲ್ಲೆ ಯವರು ,ಹಾಗೂ 'ಬಸವಜ್ಯೋತಿ ಯೂಥ್ ಫೌಂಡೇಶನ್ ಅಧ್ಯಕ್ಷರಾದ ಕು. ಬಸವಪ್ರಸಾದ ಜೊಲ್ಲೆ ಯವರು ಉದ್ಘಾಟಿಸಿದರು.
  ಸಂತ ನಿರಂಕಾರಿ ಮಂಡಳಿ (ದೆಹಲಿ ) ಸಮಾಜ ಕಲ್ಯಾಣ ಇಲಾಖೆ ಕಾರ್ಯದರ್ಶಿಗಳಾದ ಶ್ರೀ ಜೋಗಿಂದರ್ ಸುಖಿಜಾರವರು, ಕರ್ನಾಟಕ ವಲಯ ಉಸ್ತುವಾರಿಗಳಾದ ಸುನಿಲ್ ರಾತ್ರಾರವರು ವಿಡಿಯೋ ಸಂವಾದದ ಮೂಲಕ ಈ ಕಾರ್ಯಕ್ರಮಕ್ಕೆ ಅಭಿನಂದನೆ ಸಲ್ಲಿಸಿದರು. ಮುಂದಿನ ದಿನಗಳಲ್ಲಿಯೂ ಜೊಲ್ಲೆ ಉದ್ಯೋಗ ಸಮೂಹ ಸಂಸ್ಥೆಯೊಂದಿಗೆ ಕೈಜೋಡಿಸುವುದಾಗಿ ಭರವಸೆ ನೀಡಿದರು. ಇದೆ ವೇಳೆ ಆರೈಕೆ ಕೇಂದ್ರಗಳಲ್ಲಿ ವೈದ್ಯಕೀಯ ಸಹಕಾರ ನೀಡುತ್ತಿರುವ ಒಂಬ್ಬತ್ತು ಖಾಸಗಿ ವೈದ್ಯರುಗಳಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಿದರು.
 ಈ ಸಂಧರ್ಭದಲ್ಲಿ ತಹಸೀಲ್ದಾರ್ ಪ್ರಕಾಶ ಗಾಯಕವಾಡ, ಅಧಿಕಾರಿಗಳು, ವೈದ್ಯರು, ಸ್ಥಳೀಯ ಮುಖಂಡರು ಹಾಗೂ ಗಣ್ಯರು ಉಪಸ್ಥಿತರಿದ್ದರು.