ಸೊಂಟದ ಕೆಳಗಿನ ಮಾತುಗಳು….
- - - - - - - - -
ಮುಖ ಚಹರೆ ಗುರುತಿಸುವ AI (ಆರ್ಟಿಫೀಷಿಯಲ್ ಇಂಟೆಲಿಜೆನ್ಸ್) ತಂತ್ರಜ್ಞಾನಕ್ಕೆ ಆರು ತಿಂಗಳಿಗೊಂದು ನವರಾತ್ರಿ. ಬಣ್ಣ ಬಣ್ಣದ ವೇಷ ಧರಿಸಿ ಅದು ಬಂದಾಗಲೆಲ್ಲ, ನಮ್ಮ ಜನ ಮುಗಿಬಿದ್ದು ಅದರಲ್ಲಿ ತಮ್ಮ ಮುಖ ತೂರಿಸಿ, ತಮ್ಮ ಅವತಾರ ನೋಡಿಕೊಳ್ಳುವ ಚಟಕ್ಕೆ ಬಿದ್ದುಬಿಡುತ್ತಾರೆ.

ಈ ಎಲ್ಲ ಚಿತ್ರಗಳಲ್ಲೂ ಸೊಂಟಕ್ಕಿಂತ ಕೆಳಗೆ ಬಿಡಿ, ಮುಖಕ್ಕಿಂತ ಕೆಳಗೆ ಅವರಿಗೆ ನೀವು ಬೇಕಾಗಿಲ್ಲ. ಹಾಗಾಗಿ ಎಲ್ಲರಿಗೂ ಕತ್ತಿಗಿಂತ ಕೆಳಗೆ ಒಂದೇ ಟ್ರೀಟ್‌ಮೆಂಟ್!

ನೀವು ನಿಮ್ಮ ಮುಖವನ್ನು ಈ ಫೇಸ್‌ಬುಕ್ಕಿಗೆ ಹೊರತಾದ ಆಪ್ಲಿಕೇಷನ್‌ಗಳಿಗೆ ಕೊಟ್ಟಾಗ, ಅವರು ನಿಮ್ಮ ಮುಖದ ಡಿಜಿಟಲ್ ಚಿತ್ರವಿಚಿತ್ರ ರೂಪವೊಂದನ್ನೇನೋ ನಿಮಗೆ ಕೊಡುತ್ತಾರೆ. ಆದರೆ, ಅದರ ಜೊತೆಗೆ,

೧. ನಿಮ್ಮ ಫೇಸ್ ಬುಕ್ ಪ್ರೊಫೈಲಿನಲ್ಲಿ ನಿಮ್ಮ ಬೇಸಿಕ್ ಮಾಹಿತಿಗಳನ್ನು (ನೀವೆಷ್ಟು ಕೊಡುತ್ತೀರೋ ಅಥವಾ ಫೇಸ್‌ಬುಕ್ ಎಷ್ಟಕ್ಕೆ ಅವಕಾಶ ಮಾಡಿಕೊಡುತ್ತದೆಯೋ ಅಷ್ಟು) ಪಡೆಯುತ್ತಾರೆ.
೨. ನಿಮ್ಮ ಮುಖದ ಚಹರೆಯನ್ನು ಸ್ವತಃ ತಾವು ಬಳಸಿಕೊಳ್ಳುತ್ತಾರೆ ಅಥವಾ ಬೇರಾವುದೋ ಫೇಷಿಯಲ್ ರೆಕಾಗ್ನಿಷನ್ ತಂತ್ರಜ್ಞಾನ ಅಭಿವೃದ್ಧಿ ಮಾಡುತ್ತಿರುವ ಸಂಸ್ಥೆಗೆ ಮಾರುತ್ತಾರೆ ಹಾಗೂ ಕಾಸು ಮಾಡಿಕೊಳ್ಳುತ್ತಾರೆ.
೩. ನಿಮ್ಮ ಮುಖದ ಸ್ವರೂಪ, ಭಾವನೆಗಳು ಇತ್ಯಾದಿಗಳನ್ನು ಬಳಸಿಕೊಂಡು, ನಿಮ್ಮನ್ನೇ ಆಳಬಲ್ಲ ತಂತ್ರಜ್ಞಾನವೊಂದು ನಾಳೆಗೆ ತಯಾರಾಗುತ್ತದೆ.

ಸೋಷಿಯಲ್ ಮೀಡಿಯಾದಲ್ಲಿ ಜಗಳಾಡಿ, ಟ್ರಾಲ್ ಮಾಡಿ, ಬೇಕಾದ್ದು ಮಾಡಿಕೊಳ್ಳಿ, ಆದರೆ ಇಂತಹ ಮನುಷ್ಯತ್ವದ ಮೇಲೆ ಪ್ರಭುತ್ವ ಸ್ಥಾಪಿಸುವ ತಂತ್ರಜ್ಞಾನಗಳಿಗೆ ಪ್ರೋತ್ಸಾಹ ಕೊಡದಿದ್ದಷ್ಟೂ ಕ್ಷೇಮ. ಅಷ್ಟರ ಮಟ್ಟಿಗೆ ಈ ಜಗತ್ತು ಬದುಕುವುದಕ್ಕೆ ಸಹನೀಯ ಆಗಿ ಉಳಿಯುತ್ತದೆ. ಯೋಚನೆ ಮಾಡಿ.

#facerecognition #AI