ತೇರದಾಳದಲ್ಲಿ ಕೋವಿಡ್ ನಿಯಮ ಮರೆತು ಸಂತೆ ಸೇರಿದ ಜನರು.
ತೇರದಾಳ : ಪಟ್ಟಣದ ಪೇಠ ಭಾಗದಲ್ಲಿ ಮುಂಜಾನೆ ಜನರ ಗುಂಪು. ಸರಕಾರದ ಕೋವಿಡ್ ಮಾರ್ಗಸೂಚಿಗಳನ್ನು ಗಾಳಿಗೆ ತೂರಿ ಸಾರ್ವಜನಿಕರು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೆ ತರಕಾರಿ ಖರೀದಿ ಮಾಡಲು ಮುಗಿ ಬಿದ್ದಿರುವುದು.
ತರಕಾರಿ ಖರೀದಿಗೆ ಜನರು ಇಂದು ಮುಂಜಾನೆ ಗುಂಪು ಗುಂಪಾಗಿ ಬಂದು ಸಾಮಾಜಿಕ ಅಂತರವನ್ನು ಮರೆತು ತರಕಾರಿ ತಗೆದುಕೊಳ್ಳಲು ಮುಗಿ ಬೀಳುತಿದ್ದಾರೆ. ಮಹಾಮಾರಿ ಕೊರೊನಾ ತಡೆಗಟ್ಟಲು ಕಠಿಣ ಮಾರ್ಗಸೂಚಿ ಇದ್ದರು ಜನರು ಇದಾವುದನ್ನು ಲೆಕ್ಕಿಸದೇ ತಮ್ಮ ಖರೀದಿಯಲ್ಲಿ ತೊಡಗಿದ್ದಾರೆ. ಲಾಕಡೌನದಿಂದಾಗಿ ಜನರ ಜೀವನ, ಬದುಕು ಸಾಗಿಸಲು ದುಸ್ತರವಾಗದಿರಲಿ ಎಂದು ಸರಕಾರ ಮುಂಜಾನೆ 6ಗಂಟೆಯಿಂದ 10ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಿತ್ತು. ಆದರೆ ಜನರು ಮಾತ್ರ ಇಲ್ಲಿ ಈ ಅವಧಿಯಲ್ಲಿ ಸಾಮಾಜಿಕ ಅಂತರವನ್ನು ಮರೆತು ಮಾರುಕಟ್ಟೆಯಲ್ಲಿ ಮುಗಿ ಬೀಳುತ್ತಿದ್ದಾರೆ. ಇದರಿಂದ ಜನರಿಗೆ ಮತ್ತಷ್ಟು ಕೊರೊನಾ ವೈರಾಣುವಿನ ಆತಂಕ ಹೆಚ್ಚಾಗಿದೆ. ಸೋಂಕಿತರ ಪ್ರಮಾಣ ಹೆಚ್ಚಾಗುತ್ತಿದೆ. ಅಷ್ಟೇ ಸಾವಿನ ಸಂಖ್ಯೆಯು ಹೆಚ್ಚಾಗುತ್ತಿದೆ ಜನರು ಮಾತ್ರ ಇದಾವುದನ್ನು ಲೆಕ್ಕಿಸದೇ ಮಾರುಕಟ್ಟೆಯಲ್ಲಿ ತರಕಾರಿ ಖರೀದಿ ಮಾಡುತ್ತಿದ್ದಾರೆ. ಈಗಲೇ ಎಚ್ಚತ್ತು ಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಕೊರೊನಾಘಾತವನ್ನು ಎದುರಿಸಬೇಕಾಗುತ್ತದೆ. ಪರಿಸ್ಥಿತಿ ಕೈಮೀರಿ ಹೋಗುವುದಕ್ಕಿಂತ ಮುಂಚೆಯೇ ಎಚ್ಚತ್ತುಕೊಂಡು ಜನರು ಸರಕಾರದ ಮಾರ್ಗಸೂಚಿಗಳನ್ನು ಪಾಲಿಸುವುದರ ಜೊತೆಗೆ ಅಮೂಲ್ಯವಾದ ಜೀವ ಉಳಿಸಿಕೊಳ್ಳಲು ಸರಕಾರದ ಜೊತೆಗೆ ಕೈಜೋಡಿಸಬೇಕಾಗಿದೆ.

Social Plugin