ಕರ್ನಾಟಕದಲ್ಲಿ ಸಿಂಗಂ ಆಗಿದ್ದ ಅಣ್ಣಾಮಲೈ ತಮಿಳುನಾಡಿನಲ್ಲಿ ಬಿಜೆಪಿಯ ಪಯೋನಿಯರ್ ಲೀಡರ್ ಆಗಲು ಹೋದವರು. ಆದರೆ ಹೈಕಮಾಂಡ್ ಮರ್ಜಿಗೆ ರಾಜ್ಯವನ್ನು ಒಪ್ಪಿಸಲು ಒಪ್ಪದ ತಮಿಳರು ಸಿಂಗಂರನ್ನು ತಿರಸ್ಕರಿಸಿದರು.
ಖುಷ್ಬೂ ಸುಂದರ್ ಕಾಂಗ್ರೆಸ್ ನಲ್ಲಿದ್ದಾಗ ಖಂಡತುಂಡವಾಗಿ ಬಿಜೆಪಿಯ ಐಡಿಯಾಲಜಿಗಳನ್ನು ವಿರೋಧಿಸುತ್ತಿದ್ದವರು. ನಿಮಗೆ ನೆನಪಿದ್ದರೇ ಇಂಡಿಯಾ ಟುಡೇಯ ವಿಶೇಷ ಡಿಬೇಟ್ ನಲ್ಲಿ ಬಿಜೆಪಿಯ ಮಾಳವಿಕಾ ಅವಿನಾಶ್ ವರ್ಸಸ್ ಕಾಂಗ್ರೆಸ್ ನ ಖುಷ್ಬೂ ಟಾಕ್ ವಾರ್ ರಿಕಾಲ್ ಮಾಡಿಕೊಳ್ಳಿ. ತಮಿಳರು ನಟಿ ಖುಷ್ಬೂಗೆ ದೇವಸ್ಥಾನ ಕಟ್ಟಿಸಿಕೊಟ್ಟರು ಆದರೆ ಬಿಜೆಪಿಯಿಂದ ನಿಂತ ಒಂದೇ ಕಾರಣಕ್ಕೆ ರಿಜೆಕ್ಟ್ ಮಾಡಿದರು. ಐಟಿ ಇಡಿ ದಾಳಿಯ ಭಯಕ್ಕೆ ತಾನು ಟೀಕಿಸುತ್ತಿದ್ದ ಐಡಿಯಾಲಜಿಯನ್ನೆ ಅಪ್ಪಿಕೊಂಡು ಬಿಜೆಪಿ ಮನೆ ಸೇರಿದ ಖುಷ್ಬು ಸ್ಕೋರ್ ಮಾಡಲಿಲ್ಲ.
ತಮಿಳರು, ಮಿಸ್ಟರ್ ಪರ್ಫೆಕ್ಟ್ ಕಮಲ್ ಹಸನ್ ರ ಅಭಿನಯಕ್ಕೆ ಮಾರು ಹೋದಂತೆ ನೇತಾಗಿರಿಗೆ ಮಣೆ ಹಾಕಲಿಲ್ಲ. ಕೊಯಂಬತ್ತೂರ್ ನಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದ ಕಮಲ್ ಸೋಲುವ ಮೂಲಕ ತಮಗಿನ್ನೂ ರಾಜಕೀಯ ಒಲಿದಿಲ್ಲ ಎನ್ನುವುದನ್ನು ನಿಕ್ಕಿ ಮಾಡಿಕೊಂಡರು.
ಕರ್ನಾಟಕದ ಬ್ಯೂರೋಕ್ರಸಿಯಲ್ಲಿ ಉತ್ತಮ ಹೆಸರು ಮಾಡಿದ್ದ ರತ್ನಪ್ರಭಾರನ್ನು ಹೈಜಾಕ್ ಮಾಡಿಕೊಂಡಿದ್ದ ಬಿಜೆಪಿ ತಿರುಪತಿಯಲ್ಲಿ ತನ್ನ ಅಭ್ಯರ್ಥಿಯನ್ನಾಗಿಸಿತ್ತು. ಆದರೆ ಆಂಧ್ರದಲ್ಲಿ ಅಧಿಕಾರಾರೂಢ ಜಗನ್ ಪ್ರಭೆಯ ಮುಂದೆ ರತ್ನಪ್ರಭೆ ಮಂಕಾದರು. ವೈಎಸ್ಆರ್ ಕಾಂಗ್ರೆಸ್ ನ ಮಡ್ಡಿಲಾ ಗುರುಮೂರ್ಥಿ ವಿರುದ್ಧ ಕರ್ನಾಟಕದ ಮಾಜಿ ಮುಖ್ಯ ಕಾರ್ಯದರ್ಶಿಗೆ ಸೋಲಾಯಿತು.
ಇವೆಲ್ಲಾ ಏನು ಹೇಳುತ್ತವೆ? ವೃತ್ತಿ ಬದುಕಿನಲ್ಲಿ ಏನೇ ಸಾಧಿಸಿದರೂ ರಾಜಕೀಯದಲ್ಲಿ ಅದು ವರ್ಕ್ ಔಟ್ ಆಗಲ್ಲ. ರಾಜಕಾರಣಿಯಾಗಲು ಬೇರೆಯದ್ದೇ ಆದ ತಂತ್ರಗಾರಿಕೆ ಬೇಕು. ರಾಜಕಾರಣಕ್ಕೆ ಅದರದ್ದೇ ಆದ ಪ್ರತ್ಯೇಕ ಪಾಠಶಾಲೆಯಿದೆ. ಎಲ್ಲರೂ ರಾಜಕಾರಣಿಯಾಗಲು ಸಾಧ್ಯವಿಲ್ಲ. ಲೀಡರ್ ಆಗಬೇಕಿದ್ದರೇ ನೂರು ಕೆರೆ ನೀರು ಕುಡಿದು ಕೆಸರು ಮಣ್ಣಿನಲ್ಲಿ ಮಿಂದು ಸಗಣಿ ಗೊಬ್ಬರಗಳಲ್ಲಿ ಮುಳುಗಿ ಉಸಿರಾಡಿ ಬದುಕುವ ಭಂಡತನ ಬೇಕು. ಅದಿದ್ದರೇ ಮಾತ್ರ ಸಿಂಹಾಸನ ಸಿಗತ್ತೆ.

Social Plugin