ಕನ್ನಡ ಚಿತ್ರ ರಂಗದಲ್ಲಿ  ತಮ್ಮದೇ ಆದ ವಿಶಿಷ್ಟ, ವಿಭಿನ್ನ ಶೈಲಿಯಲ್ಲಿ ಚಿತ್ರ ನಿರ್ದೇಶಿಸಿ ಜೊತೆಗೆ ನಟಿಸಿ ಗೆದ್ದು ರಿಯಲ್ ಸ್ಟಾರ್ ಎಂದು ಅಭಿಮಾನಿಗಳಿಂದ ಬಿರಿದು ಪಡೆದ ಉಪೇಂದ್ರ ರವರು ಇಂದಿನ ಈ ಮಟ್ಟಕ್ಕೆ ಬಂದು ತಲುಪುವ ಮುಂಚೆ ಬಡತನದ ಕಷ್ಟದ ದಿನ ಅನುಭವಸಿ ಬಂದವರು. ತಮ್ಮದೇ ಆದ ಶ್ರಮದ ಮೇಲೆ ಇಂದು ಕನ್ನಡದ ದೊಡ್ಡ ಸ್ಟಾರ್ ಆಗಿದ್ದಾರೆ. ನಿರ್ದೇಶನದಲ್ಲಂತು ಭಾರತೀಯ ಸಿನಿರಸಿಕರ ಗಮನ ಸೆಳೆದಂತವರು. ಈಗ ಕೆಲವು ವರ್ಷದ ಹಿಂದೆ ಅವರು ಪ್ರತಿಯೊಬ್ಬರಿಗಿರುವ  ರಾಜಕೀಯದ ಕುರಿತು ಬದಲಾವಣೆಯನ್ನು ತಮ್ಮದೇ ಶೈಲಿಯಲ್ಲಿ ಬದಲಾಯಿಸಲು 'ಉತ್ತಮ ಪ್ರಜಾಕೀಯ' ಪಕ್ಷ ಪ್ರಾರಂಭಿಸಿದ್ದರು. ಆ ಸಮಯದಲ್ಲೇ ಅವರು ತಮ್ಮ ಪ್ರಜಾಕಿಯದ ಉದ್ದೇಶ ಎಲ್ಲಾ ಅಭಿಮಾನಿಗಳಿಗೆ ಜನರಿಗೆ ಹಾಗೂ ರಾಜಕೀಯದವರಿಗೆ  ಹೇಳಿದ್ದಾರೆ. ಪ್ರಜಾಕೀಯದ ಸಲಹೆ ರಾಜಕೀಯ ಪಕ್ಷಗಳು ಕೂಡ ಪಾಲಿಸಿ ಎಂದೆ ಹೇಳಿದ್ದಾರೆ. ಅವರದೇ ಮಾತುಗಳಲ್ಲಿ "ನಾನೇ ಮಾಡ್ಬೇಕು, ನಾನು ಮಾಡುತ್ತಿದ್ದೇನೆ, ನನ್ನಿಂದನೇ ಬದಲಾವಣೆ ಅಲ್ಲಾ, ಇಲ್ಲಿ ನನ್ನ ಹಾಗೆ ಅನೇಕರ ವಿಚಾರಗಳಿಗೆ ಒಂದು ವೇದಿಕೆ ಅಷ್ಟೇ"  ಎಂದಿದ್ದಾರೆ. ಅವರು ಮೊದಲಿನಿಂದಲೂ ಅನೇಕ ಜನರಿಗೆ ಸಹಾಯ ಹಸ್ತ ಚಾಚಿದಂತವರು. ಈ ಕೊರೊನಾ 2ನೇ ಅಲೆಯಲ್ಲಿ..... ಅವರು ಮಾಡುತ್ತಿರುವ ಕೆಲಸ ಕೆಲವು ರಾಜಕೀಯ ಪಕ್ಷದ ಕಾರ್ಯಕರ್ತರಿಗೆ ಹಾಗೂ ಕೆಲವು ವ್ಯಕ್ತಿ ಗಳಿಗೆ ಏನಾಗಿದೆಯೋ ಉಪೇಂದ್ರ ರವರ ಮೇಲೆ ಸಾಮಾಜಿಕ ಜಾಲತಾಣಗಳ ಮೂಲಕ ಅವರ ಕೆಲಸಗಳ ಕುರಿತು ಕಾಲೆಳೆಯುವದನ್ನು ಶುರುಮಾಡಿದ್ದಾರೆ. ಯಾವುದೇ ಒಳ್ಳೆಯ ಕೆಲಸ ಮಾಡುವವರಿಗೆ ಇದು ಸರ್ವೇ ಸಾಮಾನ್ಯ ಕಾಲು ಎಳೆಯುವವರು ಇದ್ದೆ ಇರುತ್ತಾರೆ.  ಅವರ ಉಪ್ಪಿ2ಚಿತ್ರದ ಹಾಡೇ ಇದೆ 'ಎಲ್ಲರ ಕಾಲ ಏಳಿತದೆ ಕಾಲ' ಹಾಗಾಗಿದೆ. ಈಗ ವಿಷಯಕ್ಕೆ ಬರೋಣ ಕನ್ನಡ ಚಿತ್ರರಂಗ ಒಂದು ಜೇನುಗೂಡು ಇದ್ದಂತೆ ಸಣ್ಣ-ಪುಟ್ಟ ಮನಸ್ಥಾಪಗಳು ಮಾಮಾಲಿ ಅವು ಇದ್ದೆ ಇರುತ್ತವೆ ಕೊನೆಯೇ ಇಲ್ಲಾ. ಆದರೆ ಒಳ್ಳೆಯ ಕೆಲಸಗಳಿಗೆ ಎಂತಹ ಸಂಧರ್ಭದಲ್ಲೂ ಎಲ್ಲರೂ ಸಾಥ್ ನೀಡಿವುದು ನಮ್ಮ ಕನ್ನಡ ಚಿತ್ರರಂಗದ ವಿಶೇಷ. ಈಗ ಉಪೇಂದ್ರರವರು ಮಾಡುತ್ತಿರುವ ಸಹಾಯದಿಂದ ಚಿತ್ರರಂಗದ ಕಾರ್ಮಿಕರು, ಕಲಾವಿದರು, ಅನೇಕ ರೈತರು ಅಲ್ಲದೇ ಕೊರೊನಾ ವಾರಿಯರ್ಸ್, ಬಡವರಿಗೆ ಸಹಾಯವಾಗುತ್ತಿದೆ. ತಮ್ಮಷ್ಟಕ್ಕೆ ತಾವು ಒಂದು ಚಾರಿಟೇಬಲ್ ಟ್ರಸ್ಟ್ ಮುಖೇನ ಈ ಕೆಲಸ ನಡೆದು ಕೊಂಡು ಹೋಗುತ್ತಿರುವ ಈ ಸಂದರ್ಭದಲ್ಲಿ ರಾಜ್ಯದ ಜನರ ಗಮನ ಸೆಳೆದಿರುವುದಂತು ಸತ್ಯ. ಇವರ ಈ ಕೆಲಸಕ್ಕೆ ಅನೇಕರು ಪ್ರಶಂಸಿದ್ದಾರೆ. ಅಷ್ಟೇ ಅಲ್ಲದೇ ಅವರ ಈ ಕಾರ್ಯಕ್ಕೆ ಜೊತೆಯಾಗಿದ್ದಾರೆ. 
   ಒಂದು ಒಳ್ಳೆಯ ಕೆಲಸ ಮಾಡುತ್ತಿರುವ ಉಪೇಂದ್ರರವರು ಯಾರು ಏನೇ ಅಂದರು ತಲೆ ಕೆಡಿಸಿಕೊಳ್ಳದೆ ತಮ್ಮ ಕೆಲಸ ಮಾಡುತ್ತ ಜನ ಸೇವೆ ಮಾಡಲಿ ಎಂಬುದೇ ಜನರ ಆಶಯ. ತಮ್ಮ ವಿಚಾರ ಹಲವು ಜನರ ವಿಚಾರ ಸಮಾನವಾಗಿರುವವರಿಗೆ ಅರ್ಥವಾಗುವವು. ಉಳಿದಂತೆ ಗಾದೆ ಮಾತೆ ಇದೆ "ನಾಯಿ ಬೊಗಳಿದರೆ ದೇವ ಲೋಕ ಹಾಳಾಗುವುದಿಲ್ಲ" ಇಂತಹ ಸಂಧರ್ಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಮಾತನಾಡುವುದಕ್ಕಿಂತ ಉಪೇಂದ್ರರಿಗಿಂತ ಒಂದು ಕೈ ಜಾಸ್ತಿ ಸಹಾಯ ಮಾಡುತ್ತೇನೆ ಎಂದು ಮಾಡಿ ತೋರಿಸಬೇಕು. ಅದು ಬಿಟ್ಟು ಕಮ್ಮಿಯಲ್ಲಿ ಸಿಗುವ ಡೇಟಾ ಉಪಯೋಗಿಸಿ ಸಾಮಾಜಿಕ ಜಾಲತಾಣಗಳಲ್ಲಿ ಭಾಷಣ ಮಾಡಿದರೇನು ಫಲ. ಒಳ್ಳೆಯವರು, ಒಳ್ಳೆಯ ಕೆಲಸಗಳಿಗೆ ಸಹಕರಿಸುತ್ತಾರೆ ವಿನಃ ಅಸೂಯೆ ಪಡುವುದಿಲ್ಲ.
   ಇನ್ನೂ ಕೆಲ ವ್ಯಕ್ತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡ ಚಿತ್ರರಂಗದ ನಾಯಕರ ಕುರಿತು ಬೇಕಾಬಿಟ್ಟಿ ಮಾತನಾಡುವುದು ಅತೀಯಾಗಿದೆ. ಇಂತಹ ವ್ಯಕ್ತಿಗಳು ಮೊದಲು ತಿಳಿದುಕೊಳ್ಳಬೇಕಾದ ವಿಷಯ ನೀವು ಯಾರ ಬಗ್ಗೆ ಮಾತನಾಡುತ್ತಿದ್ದೀರಿ ಅವರ ಬಗ್ಗೆ ಪೂರ್ಣ ತಿಳಿದುಕೊಂಡು ಮಾತನಾಡಿ ಸುಮ್ಮನೆ ಒಬ್ಬರು ಹೆಸರು ಮಾಡಿರುವವರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಮಾತನಾಡಿ ಬಿಟ್ಟಿ ಪ್ರಚಾರ ಪಡೆಯುವುದನ್ನು ಬಿಡಿ. ಸಾಧ್ಯವಾದರೆ ಅವರು ಸಹಾಯ ಮಾಡಿದ ಜನರ ಬಳಿ ಹೋಗಿ ಕೇಳಿ ಇಲ್ಲವೇ ಅವರಿಗಿಂತ ಜಾಸ್ತಿ ಸಹಾಯ ಮಾಡಿ ತೋರಿಸಿ ಅದು ಬಿಟ್ಟು ಪುಗಸಟ್ಟೆ ಸಾಮಾಜಿಕ ಜಾಲತಾಣಗಳಲ್ಲಿ ಕೂಗಾಡಿದರೇನು ಫಲ ಅಸೂಯೆ ಪಡಬೇಡಿ. ಒಬ್ಬರನೊಬ್ಬರು ತೇಜೋವದೆ ಮಾಡದೆ ಸಾಮಾಜಿಕ ಜಾಲತಾಣವನ್ನು ಒಳ್ಳೆಯ ಕೆಲಸಗಳಿಗೆ ಉಪಯೋಗಿಸಿ.
 ✍️ಮಾತನಾಡುವವರು ಮಾತನಾಡಲಿ ಬಿಡಿ. ಆನೆ ನಡೆದಿದ್ದೇ ದಾರಿ. ಕೈಲಾಗದವರು ಮೈ ಪರಚಿಕೊಂಡoತೆ. ಈ ಲೇಖನ ಒಳ್ಳೆಯ ಕೆಲಸ ಮಾಡುವ  ಯಾರೇ ಇರಲಿ ಅದು ಸ್ಟಾರ್ ನಟರೆ ಇರಲಿ ಸಾಮಾನ್ಯ ವ್ಯಕ್ತಿಯೇ ಇರಲಿ ಅವರ ಪರ ಸದಾ "ಸ್ವರೂಪ ಸಂದರ್ಶನ" ಇರುತ್ತದೆ.