ವರದಿ : ವಿಜಯ ವಾಜಂತ್ರಿ
ತೇರದಾಳದ ಬಸ್ ನಿಲ್ದಾಣ ಹತ್ತಿರ ಸುದ್ದಿಗೋಷ್ಟಿಯಲ್ಲಿ ಕಾಂಗ್ರೆಸ್ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ರಾಹುಲ ಕಲೂತಿ ಮಾತನಾಡಿದರು.
ಬಿಜೆಪಿ ನಾಯಕರು ಮಾತಿನಲ್ಲಿ ಹಿಡಿತವಿರಲಿ-ರಾಹುಲ ಕಲೂತಿ
ತೇರದಾಳ : ರಾಷ್ಟ್ರೀಯ ಕಾಂಗ್ರೆಸ್ ನಾಯಕರ ಬಗ್ಗೆ ತುಚ್ಚವಾಗಿ ಮಾತನಾಡಿರುವ ಬಿಜೆಪಿ ನಾಯಕರು ಕ್ಷಮೆ ಕೇಳಬೇಕು ಎಂದು ಕಾಂಗ್ರೇಸ್ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ರಾಹುಲ ಕಲೂತಿ ಹೇಳಿದರು.
  ಪಟ್ಟಣದ ಬಸ್ ನಿಲ್ದಾಣ ಹತ್ತಿರ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಬಾಗಲಕೋಟೆಯಲ್ಲಿ  ಮೊನ್ನೆ ಬಿಜೆಪಿ ನಾಯಕರು ನಡೆಸಿದ ಪತ್ರಿಕಾಗೋಷ್ಟಿಯಲ್ಲಿ ಶಾಸಕರಾದ ಡಾ.ವೀರಣ್ಣ ಚರಂತಿಮಠರವರು ರಾಷ್ಟ್ರೀಯ ನಾಯಕ ರಾಹುಲ ಗಾಂಧಿಯವರ ಬಗ್ಗೆ ತುಚ್ಚವಾಗಿ ಮಾತನಾಡಿದ್ದಾರೆ. ಬಿಜೆಪಿ ನಾಯಕರು ಮಾತಿನಲ್ಲಿ ಹಿಡಿತವಿರಲಿ. ಅವರ ಮಾತುಗಳು ಬಿಜೆಪಿಯವರ ಸಂಸ್ಕøತಿಯನ್ನು ತೋರಿಸುತ್ತಿದೆ. ಬಿಜೆಪಿಯವರು ನಡೆದು ಬಂದ ದಾರಿ ಅದೇ ಆಗಿರಬಹುದು. ಆ ಕಾರಣದಿಂದ ಅವರು ಇಂತಹ ಪದಗಳನ್ನು ಬಳಸಿ ಮಾತನಾಡುತ್ತಾ ಕಾಂಗ್ರೇಸ್ ರಾಷ್ಟ್ರೀಯ ನಾಯಕರಿಗೆ ನಿಂದನೆ ಮಾಡಿದ್ದೀರಿ. ರಾಷ್ಟ್ರೀಯ ಯುವ ಕಾಂಗ್ರೇಸ್ ಎಚ್ಚರಿಕೆಯನ್ನು ನೀಡುತ್ತಿದೆ. ಪ್ರತಿಕ್ರೀಯೆಯನ್ನು ಮರಳಿ ಪಡೆದು ಕ್ಷಮೆ ಕೇಳಬೇಕು. ಕ್ಷಮೆ ಕೇಳದೇ ಹೋದಲ್ಲಿ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟವನ್ನು ಕೈಗೊಳ್ಳುತ್ತೇವೆ. ಕೋವಿಡ್-19 ಕಾರಣದಿಂದಾಗಿ ಕೋವಿಡ್ ನಿಯಮಗಳ ಅನುಸರಿಸಿ ಕಡಿಮೆ ಸಂಖ್ಯೆಯಲ್ಲಿ ಕಾಂಗ್ರೇಸ್ ಕಾರ್ಯಕರ್ತರು ಸೇರಿ ಶಾಂತಿಯುವಾಗಿ ಪ್ರತಿಭಟನೆಯನ್ನು ಹಮ್ಮಿಕೊಂಡು ತಮ್ಮ ಮಾತಿನ ಮೇಲೆ ಹಿಡಿತವಿರಬೇಕು ಹಾಗೂ ನಮ್ಮ ನಾಯಕರಲ್ಲಿ ಕ್ಷಮೆ ಕೇಳಿ ತಮ್ಮ ಮಾತನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಪಡಿಸಿದರು.
     ಈ ಸಂದರ್ಭದಲ್ಲಿ ಪುರಸಭೆ ಆಧಿನಾಥ ಸಪ್ತಸಾಗರ, ಸದಸ್ಯ ಫಜಲ್ ಅತಾರಾಹುತ, ರಾಜೇಸಾಬ ನಗಾರ್ಜಿ, ಮೈಬೂಬ ಜಮಾದಾರ, ಪ್ರವೀಣ ಸುತಾರ, ಸಂಜು ಹಾಡಕಾರ, ದಾದಾ ಅತಾರಾಹುತ, ಇನ್ನೂಸ ಜಮಾದಾರ ಸೇರಿದಂತೆ ಇನ್ನಿತರರು ಇದ್ದರು.