*ಸಿಟಿ ಸ್ಕ್ಯಾನ್ ಸೆಂಟರ್‌ನಲ್ಲಿ ದುಪ್ಪಟ್ಟು ಹಣ ವಸೂಲಿ: ಬೀಗ ಜಡಿದ ಅಧಿಕಾರಿಗಳು: ಸಚಿವರಿಂದ ಸೂಕ್ತ ಕ್ರಮ*
-ಮಲ್ಲಿಕಾರ್ಜುನ ತುಂಗಳ :ಮುಖ್ಯ ವರದಿಗಾರರು,ಬಾಗಲಕೋಟೆ.

  ಸರ್ಕಾರವು ಖಾಸಗಿ ಆಸ್ಪತ್ರೆಯ ಸಿಟಿ ಸ್ಕಾö್ಯನ್ ಸೆಂಟರ್‌ಗಳಿಗೆ ದರ ನಿಗದಿ ಮಾಡಿದ್ದರೂ ಆದೇಶಕ್ಕೆ ಕಿಮ್ಮತ್ತಿಲ್ಲದೆ ಬೇಕಾಬಿಟ್ಟಿಯಾಗಿ ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ಸಿಟಿ ಸ್ಕಾö್ಯನ್ ಸೆಂಟರ್ ಮೇಲೆ ಜಮಖಂಡಿ ತಾಲೂಕಾ ವೈದ್ಯಾಧಿಕಾರಿ ಡಾ. ಗೈಬುಸಾಬ ಗಲಗಲಿ ಸ್ಕಾö್ಯನ್ ಸೆಣಟರ್ ಮೇಲೆ ದಾಳಿ ಮಾಡಿ ಬೀಗ ಜಡಿದ ಘಟನೆ ನಡೆದಿದೆ.

 ಸರ್ಕಾರದ ಆದೇಶದಂತೆ ಬಿಪಿಎಲ್ ಕಾರ್ಡುದಾರರಿಗೆ ೧೫೦೦ ರೂ. ನಿಗದಿಯಿತ್ತು. ಇನ್ನುಳಿದವರಿಗೆ ೨೫೦೦ ರೂ. ದರ ನಿಗದಿಪಡಿಸಿದೆ. ಇವೆಲ್ಲ ನಿಯಮ ಗಾಳಿಗೆ ತೂರಿ ೪೦೦೦ ರೂ.ಗಳಷ್ಟು ಹಣ ವಸೂಲಿಗಿಳಿದಿದ್ದರು.

 ರೋಗಿಗಳಿಂದ ವಿಚಾರಣೆ ನಡೆಸಿದ ತಾಲೂಕಾ ಆರೋಗ್ಯ ಕೇಂದ್ರ ಸ್ಕಾö್ಯನ್ ಸೆಂಟರ್‌ಗೆ ಬೀಗ ಜಡಿದು ಕ್ರಮಕ್ಕೆ ಮುಂದಾಗಿದೆ.

ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಮಾತನಾಡಿ, ಯಾವದೇ ಕಾರಣಕ್ಕೂ ಸರ್ಕಾರ ನಿಗದಿಪಡಿಸಿದಕ್ಕಿಂತ ಹೆಚ್ಚಿನ ಹಣ ವಸೂಲಿ ಮಾಡಬಾರದು. ಸರ್ಕಾರದ ಆದೇಶದನ್ವಯ ದರಪಟ್ಟಿಯನ್ನು ಆಸ್ಪತ್ರೆ ಮುಂಭಾಗದಲ್ಲಿ ಪ್ರದರ್ಶಿಸಬೇಕು. 

ಇಂತಹ ಘಟನೆಗಳು ಮರುಕಳಿಸಿದರೆ ಕಠಿಣ ಕ್ರಮ ಜರುಗಿಸಲಾಗುವದೆಂದು ತಿಳಿಸಿದರು.