ತೇರದಾಳದ ಪುರಸಭೆ ಪೌರ ಕಾರ್ಮಿಕರಿಗೆ ಶ್ರೀಅಲ್ಲಮಪ್ರಭು ಚಿತ್ರ ತಂಡದಿಂದ ಒಂದು ದಿನದ ಮದ್ಯಾನ ಊಟದ ವ್ಯವಸ್ಥೆಯನ್ನು ಮಾಡಿದ್ದರು.
ತೇರದಾಳದ ಪೋಲಿಸ್ ಠಾಣೆಯ ಸಿಬ್ಬಂದಿಯವರಿಗೆ ಶ್ರೀಅಲ್ಲಮಪ್ರಭು ಚಿತ್ರದ ನಿರ್ಮಾಪಕ ಮಹಾವೀರ ಪ್ರಭುಗಳು ಮಧ್ಯಾನದ ಊಟದ ಪೊಟ್ಟಣಗಳನ್ನು ವಿತರಿಸಿದರು.
ಕೊರೊನಾ ವಾರಿಯರ್ಸ್ ಗೆ ಶ್ರೀಅಲ್ಲಮಪ್ರಭು ಚಿತ್ರ ತಂಡದಿಂದ ಊಟದ ವ್ಯವಸ್ಥೆ
ತೇರದಾಳ : ಸಾರ್ವಜನಿಕರ ರಕ್ಷಣೆಯ ಸಲುವಾಗಿ ತಮ್ಮ ಕುಟುಂಬವನ್ನೆಲ್ಲ ಮರೆತು ಹಗಲಿರುಳು ಮಹಾಮಾರಿ ಕೊರೊನಾ ಹರಡುವುದನ್ನು ತಡೆಯುವಲ್ಲಿ ಶ್ರಮಿಸುತ್ತಿರುವ ಪ್ರಂಟ್ ಲೈನ್ ಕೊರೊನಾ ವಾರಿಯರ್ಸ ಗಳಿಗೆ ಹಾಗೂ ಪಟ್ಟಣವನ್ನು ಸ್ವಚ್ಚವಾಗಿಡುವ ಪೌರ ಕಾರ್ಮಿಕರಿಗೆ ಬಸವಜಯಂತಿ ನಿಮಿತ್ಯ ಅಮರಜ್ಯೋತಿ ಪಿಕ್ಚರ್ಸ್‍ರವರ "ವ್ಯೋಮಕಾಯ ಸಿದ್ಧ ಶ್ರೀಅಲ್ಲಮಪ್ರಭು" ಚಿತ್ರ ತಂಡದಿಂದ ಒಂದು ದಿನದ ಮಧ್ಯಾನದ ಊಟದ ವ್ಯವಸ್ಥೆಯನ್ನು ಮಾಡಿದರು.
ಲಾಕ್‍ಡೌನ್‍ದಿಂದಾಗಿ ಪಟ್ಟಣದಲ್ಲಿನ ಎಲ್ಲ ಅಂಗಡಿ ಮುಂಗಟ್ಟಗಳು, ಹೊಟೇಲ್‍ಗಳು ಬಂದ್ ಆಗಿದ್ದು ಈ ವಾರಿಯರ್ಸ್‍ಗಳಿಗೆ ಎಲ್ಲಿಯೂ ಒಂದು ಕಪ್ ಚಹಾ ಹಾಗೂ ಕುಡಿಯಲು ನೀರು ಸಹ ಸಿಗದೇ ಇರುವುದನ್ನು ಅರಿತು ಒಂದು ದಿನವಾದರೂ ಇವರಿಗೆ ಊಟ ಹಾಗೂ ಕುಡಿಯಲು ಶುದ್ಧವಾದ ನೀರಿನ ಬಾಟಲಿಗಳನ್ನು ವ್ಯವಸ್ಥೆ ಮಾಡಿದರೆ ಅಷ್ಠಾದರೂ ಅವರಿಗೆ ನೆಮ್ಮದಿ ಸಿಗಬಹುದೇನು ಎಂದು ಅರಿತು ಬನಹಟ್ಟಿಯ ಪೋಲಿಸ್ ಠಾಣೆಯ ಸಿಬ್ಬಂದಿಗಳಿಗೆ, ರಬಕವಿಯ ಕೋವಿಡ್ ಸೆಂಟರ್‍ಗಳಲ್ಲಿರುವ ವೈರಾಣು ಸೋಂಕಿತರಿಗೆ ಹಾಗೂ ಅಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರುಗಳಿಗೆ ಮತ್ತು ಪಟ್ಟಣದ ಪೋಲಿಸ್ ಠಾಣೆಯ ಸಿಬ್ಬಂದಿ ಮತ್ತು ಪುರಸಭೆಯ ಪೌರ ಕಾರ್ಮಿಕರಿಗೆ ಒಂದು ಸಿಹಿಯಾದ ಊಟದ ಜೊತೆಗೆ ಮಸಾಲಿ ರೈಸ್‍ನ್ನು ಹಾಗೂ ಶುದ್ಧ ಕುಡಿಯುವ ನೀರಿನ ಬಾಟಲಿಯನ್ನು ವ್ಯವಸ್ಥೆಯನ್ನು ಮಾಡಿದ್ದರು.
ತಮ್ಮೇಲ್ಲ ಕುಟುಂಬಗಳನ್ನು ಮರೆತು ಹಗಲಿರುಳು ಸಾರ್ವಜನಿಕರ ರಕ್ಷಣೆಯ ಸಲುವಾಗಿ ಹೋರಾಡುತ್ತಿರುವುದು ಶ್ಲಾಘನೀಯ. ನಿಮ್ಮ ರಕ್ಷಣೆ ಹಾಗೂ ನಿಮ್ಮ ಕುಟುಂಬಗಳ ರಕ್ಷಣೆ ಮಾಡಿಕೊಳ್ಳುವದರ ಜೊತೆಗೆ ಸಾರ್ವಜನಿಕರ ರಕ್ಷಣೆ ಮಾಡಬೇಕಾಗಿರುವುದು ಅಷ್ಟೇ ಮುಖ್ಯವಾಗಿದೆ, ಅಲ್ಲದೇ ಇನ್ನೂ ಕೊರೊನಾ ಮಹಾಮಾರಿಯಿಂದ ಬಳಲುತ್ತಿರುವವರಿಗೆ ಇನ್ನೂ ಸೇವೆ ಮಾಡುವ ಉತ್ಸಾವನ್ನು ಚಿತ್ರ ತಂಡ ಹೊಂದಿದೆ ಎಂದು ಶ್ರೀಅಲ್ಲಮಪ್ರಭು ಚಿತ್ರದ ನಿರ್ಮಾಪಕ ಮಹಾವೀರ ಪ್ರಭುಗಳು ಮತ್ತು ಮಾಧವಾನಂದ ಪತ್ರಿಕೆಗೆ ತಿಳಿಸಿದರು.
ಈ ಸಂದರ್ಭದಲ್ಲಿ ವಿಜಯಕುಮಾರ ಹಲಕುರ್ಕಿ, ಸಾಗರ ಸಪ್ತಸಾಗರ, ಅಮರ ಹನಗಂಡಿ, ಬಿ. ಡಿ. ಹಿರೇಮೇತ್ರಿಯವರು ಸೇರಿದಂತೆ ಇನ್ನಿತರರು ಇದ್ದರು.

Social Plugin