ಕೊರೊನಾ ವೈರಾಣುವಿನ ಈ ಎರಡನೆಯ ಅಲೆ ಎಲ್ಲ ಉಧ್ಯಮಗಳಿಗೆ ಸಂಕಷ್ಟದ ಪರಿಸ್ಥಿತಿಯನ್ನು ತಂದಿಟ್ಟಿದೆ. ಅದರಲ್ಲಿಯೂ ಕನ್ನಡ ಚಿತ್ರರಂಗ ಕಳೆದ ವರ್ಷದ ಸಂಕಷ್ಟದಿಂದ ಇನ್ನೇನು ಉಸಿರು ತೆಗೆದುಕೊಳ್ಳಬೇಕು ಎನ್ನುವಷ್ಟರಲ್ಲಿ ಈ ಎರಡನೆಯ ಅಲೆ ಗಾಯದ ಮೇಲೆ ಬರೆ ಎಳೆದ ಹಾಗೆ ಮಾಡಿದೆ. ಚಿತ್ರ ರಂಗವನ್ನೇ ನಂಬಿ ಬದುಕುತ್ತಿರುವವರ ಪಾಡು ಹೇಳತೀರದಾಗಿದೆ. ಕಳೆದ ವರ್ಷ ವೈರಾಣುವಿನ ಅಟ್ಟಹಾಸ ಇಂದಿನ ಪರಿಸ್ಥಿತಿಯಲ್ಲಿರುವಷ್ಟು ಇದ್ದಿದಿಲ್ಲ ಆದರೆ ಈ ಬಾರಿ ಬೆಡ್, ಇಂಜೆಕ್ಷನ್, oxygen ಹೀಗೆ ಹತ್ತು ಹಲವು ಸಮಸ್ಯೆಗಳ ಜೊತೆ ಆರ್ಥಿಕ ಸಮಸ್ಯೆಯು ಕೂಡಾ ಸೋಂಕಿತರಿಗೆ ಕಾಡುತ್ತಿದೆ.
  ಚಿತ್ರರಂಗದ ಬಗ್ಗೆ ಸದಾ ಕಾಳಜಿಯ ವ್ಯಕ್ತಿತ್ವದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಕಾರ್ಯದರ್ಶಿ ಭಾ. ಮ. ಹರೀಶ್ ರವರು ಈ ಹಿಂದೆ ಚಿತ್ರರಂಗಕ್ಕೆ ಸಹಾಯವಾಗುವ ಕೆಲಸಗಳನ್ನು ಮಾಡಿದ್ದಾರೆ. ಅದರಲ್ಲೂ 'ಎತ್ತಿನ ಹೊಳೆ ಮಹಾದಾಹಿ' ಹೋರಾಟದ ಸಂಧರ್ಭ ಇಡೀ ಚಿತ್ರ ರಂಗವನ್ನು ಹುಬ್ಬಳ್ಳಿಗೆ ಕರೆದುಕೊಂಡು ಹೋಗುವಲ್ಲಿ ಮಹತ್ವದ ಪಾತ್ರವಹಿಸಿದ್ದರು. ಈಗ ಅವರು ಕೋವಿಡ್ ನಿಂದಾಗಿ ಸಂಕಷ್ಟದಲ್ಲಿರುವ ಮಂಡಳಿಯ ಸದಸ್ಯರಿಗೆ ನೆರವು ನೀಡುವ ಬಗ್ಗೆ, ಹಾಗೂ ಚಿತ್ರಕರ್ಮಿಗಳಿಗಾಗಿ ಕೋವಿಡ್ ಕೇಂದ್ರವನ್ನು ಪ್ರಾರಂಬಿಸುವ ಕುರಿತು "ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ" ಗೆ ಪತ್ರದ ಮೂಲಕ ಮನವಿ ಪತ್ರ ಈ ಕೆಳಗಿನಂತಿದೆ.
                ಭಾ.ಮ ಹರೀಶ್
       ಕಾರ್ಯಕಾರಿ ಸಮಿತಿ ಸದಸ್ಯರು
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ
___________________________________________
    ಗೆ 
ಅಧ್ಯಕ್ಷರು / ಪದಾಧಿಕಾರಿಗಳು
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ
ಬೆಂಗಳೂರು

ಇಂದ
ಭಾ.ಮ ಹರೀಶ್
ಕಾರ್ಯಕಾರಿ ಸಮಿತಿ ಸದಸ್ಯರು
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ

ಮಾನ್ಯರೆ, 
ವಿಷಯ : ಕೋವಿಡ್ ನಿಂದಾಗಿ ಸಂಕಷ್ಟದಲ್ಲಿರುವ ಮಂಡಳಿಯ ಸದಸ್ಯರಿಗೆ ನೆರವು ನೀಡುವ ಬಗ್ಗೆ, ಹಾಗೂ ಚಿತ್ರಕರ್ಮಿಗಳಿಗಾಗಿ ಕೋವಿಡ್ ಕೇಂದ್ರವನ್ನು ಪ್ರಾರಂಬಿಸುವ ಬಗ್ಗೆ.

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ನಾನು ನಿಮ್ಮಲ್ಲಿ ಈ ಮೂಲಕ ಕೇಳಿಕೊಳ್ಳುವುದೇನೆಂದರೆ, ಇದಕ್ಕೆ ಮೊದಲೇ ನಾನು ತಮಗೆ ಒಂದು ಪತ್ರವನ್ನು ಬರೆದು ಅದರಲ್ಲಿ ಕೋವಿಡ್ ಮಹಾಮಾರಿಯಿಂದ ತತ್ತರಿಸಿ ಹೋಗಿರುವ ಮಂಡಳಿಯ ಸದಸ್ಯರ ಕುಟುಂಬಕ್ಕೆ ಆರ್ಥಿಕ ನೆರವು ನೀಡುವ ಬಗ್ಗೆ ವಿನಂತಿಸಿದ್ದೆ. ಆದರೆ ಇದುವರೆಗೂ ನನಗೆ ತಮ್ಮಿಂದ ಯಾವುದೇ ಪ್ರತಿಯುತ್ತರ ಬಂದಿರುವುದಿಲ್ಲ. ಹಾಗಾಗಿ ಮತ್ತೆ ಈ ಪತ್ರ ಬರೆಯುವುದರ ಮೂಲಕ ನಿಮ್ಮಲ್ಲಿ ಕೇಳಿಕೊಳ್ಳುವುದೇನೆಂದರೆ ನಾವು ಈಗಾಗಲೇ ಮನವಿ ಮಾಡಿಕೊಂಡಿರುವ ಹಾಗೆ ಭೀಕರ ಸಂಕಷ್ಟದಲ್ಲಿರುವ ಮಂಡಳಿಯ ಸದಸ್ಯರಿಗೆ ಆರ್ಥಿಕವಾಗಿ ನೆರವು ನೀಡಲು ತಾವುಗಳು ಈ ಕೂಡಲೇ ಕ್ರಮವನ್ನು ತೆಗೆದುಕೊಳ್ಳತಕ್ಕದ್ದು. ಜೊತೆಗೆ ಈಗಾಗಲೇ ಚಲನಚಿತ್ರರಂಗದಲ್ಲಿ ಸೇವೆಸಲ್ಲಿಸುತ್ತಿರುವ ಹಲವಾರು ಜನರು ಕೋವಿಡ್ ಪಾಸಿಟೀವ್ ನಿಂದಾಗಿ ಬೆಡ್ ಸಿಗದೇ, ಆಕ್ಸಿಜನ್ ಸಿಗದೇ, ಸೂಕ್ತ ಚಿಕಿತ್ಸೆ ಸಿಗದೇ ಅವರ ಹಾಗೂ ಅವರ ಕುಟುಂಬದವರ ಜೀವಹಾನಿಗಳಾಗುತ್ತಿವೆ. ಅದಕ್ಕಾಗಿ ಚಿತ್ರರಂಗದಲ್ಲಿ ಕೆಲಸ ಮಾಡುವ ಸದಸ್ಯರಿಗೆ ಒಂದು ಪ್ರತ್ಯೇಕವಾಗಿ ಕೋವುಡ್ ಕೇಂದ್ರವನ್ನು ತೆರೆದು ಆ ಮೂಲಕ ಅವರಿಗೆ ಸೂಕ್ತ ಚಿಕಿತ್ಸೆ ದೊರೆಯುವಂತೆ ಮಾಡಲು ತಾವುಗಳು ಈ ಕೂಡಲೇ ಕ್ರಮವನ್ನು ತೆಗೆದುಕೊಳ್ಳಬೇಕೆಂದು ಕೇಳಿಕೊಳ್ಳುತ್ತೇನೆ. ಕೋವಿಡ್ ಕೇಂದ್ರದ ಜಾಗಕ್ಕಾಗಿ ತಾವುಗಳು ಈಗಾಗಲೇ ಸ್ಥಗಿತಗೊಂಡಿರುವ ಬಿಗ್ ಬಾಸ್ ಮನೆ, ಕನ್ನಡ ಚಲನಚಿತ್ರ ಕಲಾವಿದರ ಸಂಘದ ಕಟ್ಟಡ ಮತ್ತು ಕಂಠೀವರ ಸ್ಟುಡಿಯೋವನ್ನು ಬಳಸಿಕೊಳ್ಳಲು ಪ್ರಯತ್ನಿಸಬಹುದು. ತಾವುಗಳು ಈ ಕೂಡಲೇ ಸಂಬಂಧಪಟ್ಟವರೊಂದಿಗೆ ಮಾತನಾಡಿ ಅವರ ಮನವೊಲಿಸಿ ಕೋವಿಡ್ ಕೇಂದ್ರಕ್ಕೆ ಜಾಗವನ್ನು ಗೊತ್ತುಮಾಡಿಕೊಂಡು ನಂತರ ಆದಷ್ಟು ಬೇಗ ಕೋವಿಡ್ ಕೇಂದ್ರವನ್ನು ಪ್ರಾರಂಭಿಸಿ, ಇಂಥ ಭೀಕರ ಪರಿಸ್ಥಿತಿಯಲ್ಲಿ ಸಂಕಷ್ಟಕ್ಕೊಳಗಾಗಿರುವ ಹಲವಾರು ಚಿತ್ರಕರ್ಮಿಗಳ ಬದುಕಿಗೆ ಹಾಗೂ ಜೀವಗಳಿಗೆ ಆಸರೆ ನೀಡಬೇಕೆಂದು ಈ ಮೂಲಕ ಮನವಿ ಮಾಡಿಕೊಳ್ಳುತ್ತೇನೆ.

 ವಂದನೆಗಳೊಂದಿಗೆ,

 ತಮ್ಮ ವಿಶ್ವಾಸಿ 
ಭಾ.ಮ ಹರೀಶ್
______________________________________
   ಚಿತ್ರರಂಗದ ಈ ಘೋರ ಪರಿಸ್ಥಿಯಲ್ಲಿ ಭಾ.ಮ ಹರೀಶ್ ಅವರ ಈ ಮನವಿಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹೇಗೆ ಸ್ಪಂದಿಸಿ ಕಾರ್ಯನಿರ್ವಹಿಸುವುದೆಂದು ನೋಡಬೇಕಿದೆ. ಒಳ್ಳೆಯ ಸಲಹೆಯನ್ನೇ ಕೊಟ್ಟಿರುವ ಅವರಿಗೆ ಅನೇಕ ಚಿತ್ರೋಧ್ಯಮದ ಮಿತ್ರರು ಸಾಥ್ ನೀಡಿದ್ದಾರೆ. ಒಟ್ಟಿನಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ
ಮಂಡಳಿ ನಿರ್ಧಾರ ನೋಡಬೇಕಿದೆ.