ಕೊರೊನಾ ವಾರಿಯರ್ಸ್‍ಗೆ ಎನ್-95 ಮಾಸ್ಕ್ ಹಾಗೂ ಸ್ಯಾನಿಟೈಜರ್
ತೇರದಾಳ : ಪಟ್ಟಣದಲ್ಲಿ ಗಲ್ಲಿಗಲ್ಲಿಗಳಲ್ಲಿ ಸಂಚರಿಸಿ ಸೋಂಕಿನ ಲಕ್ಷಣಗಳುಳ್ಳ ವ್ಯಕ್ತಿಗಳ ಕುಟುಂಬಕ್ಕೆ ತೆರಳಿ ಕೋವಿಡ್-19 ಆರೋಗ್ಯ ಕಿಟ್‍ನ್ನು ವಿತರಿಸುತ್ತಿರುವ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ಎನ್-95 ಮಾಸ್ಕ್ ಹಾಗೂ ಸ್ಯಾನಿಟೈಜರ್ ಮತ್ತು ಸೋಂಕಿತರ ವಿವರವನ್ನು ದಾಖಲಿಸಿಕೊಳ್ಳಲು ಒಂದು ಬುಕ್‍ನ್ನು ಪುರಸಭೆಯ ಕಂದಾಯ ಅಧಿಕಾರಿ ಎಫ್.ಬಿ.ಗಿಡ್ಡಿ ವಿತರಿಸಿದರು.
ಸಾರ್ವಜನಿಕರ ಆರೋಗ್ಯವನ್ನು ಕಾಪಾಡಲು ತಮ್ಮ ಕುಟುಂಬವನ್ನೇ ಮರೆತು ಪಟ್ಟಣದ ಗಲ್ಲಿಗಲ್ಲಿಗಳಲ್ಲಿ ಸಂಚರಿಸಿ ಪ್ರತಿಯೊಂದು ಕುಟುಂಬದ ಸರ್ವೆ ಕಾರ್ಯ ಮಾಡುತ್ತಿರುವ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ಮುಂಜಾಗ್ರತ ಕ್ರಮವಾಗಿ ಪುರಸಭೆ ಅಧಿಕಾರಿಗಳು ಹಾಗೂ ಪುರಸಭೆ ಸದಸ್ಯರು ಇಂದು ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರ ಆರೋಗ್ಯದ ಹಿತ ದೃಷ್ಟಿಯಿಂದ ಎನ್-95 ಮಾಸ್ಕ್ ಹಾಗೂ ಸ್ಯಾನಿಟೈಜರ್ ಮತ್ತು ಸೋಂಕಿತರ ಲಕ್ಷಣಗಳು ಇರುವ ವ್ಯಕ್ತಿಗಳ ಕುಟುಂಬದ ಹೆಸರನ್ನು ದಾಖಲಿಸಿಕೊಳ್ಳಲು ಒಂದು ಬುಕ್‍ನ್ನು ವಿತರಿಸಿದರು.
ಕಳೆದ ನಾಲ್ಕು ದಿನಗಳ ಹಿಂದೆ ಶ್ರೀಗುರು ಬ್ರಹ್ಮಾನಂದ ಆಶ್ರಮದಲ್ಲಿ ನಡೆದ ಕೋವಿಡ್ ಆರೋಗ್ಯ ಕಿಟ್ ವಿತರಣೆ ಸಭೆಯಲ್ಲಿ ಕ್ಷೇತ್ರದ ಶಾಸಕರು ಪುರಸಭೆ ಅಧಿಕಾರಿಗಳಿಗೆ ಗುಣಮಟ್ಟದ ಮಾಸ್ಕ್ ಹಾಗೂ ಸ್ಯಾನಿಟೈಸರ್ ಜೊತೆಗೆ ಬುಕ್‍ನ್ನು ಕೊಡುವಂತೆ ಮೌಖಿಕ ಆದೇಶ ಕೊಟ್ಟಿದ್ದರು. ಅದರ ಪ್ರಯುಕ್ತ ಇಂದು ನಾವು ಪುರಸಭೆ ಕೋವಿಡ್ ಅನುದಾನದಲ್ಲಿ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರ ಆರೋಗ್ಯದ ಹಿತ ದೃಷ್ಟಿಯಿಂದ ವಿತರಿಸಲಾಯಿತು. ಹಾಗೂ ಕೋವಿಡ್ ಮಾರ್ಗಸೂಚಿಗಳುಳ್ಳ ಕೈಪಿಡಿಯನ್ನು ಸಹ ವಿತರಿಸಲಾಗಿದೆ ಎಂದು ಪುರಸಭೆ ಕಂದಾಯ ಅಧಿಕಾರಿ ಎಫ್.ಬಿ.ಗಿಡ್ಡಿ ಹೇಳಿದರು.
ಈ ಸಂದರ್ಭದಲ್ಲಿ ಪುರಸಭೆ ಕಂದಾಯ ಅಧಿಕಾರಿ ಎಫ್.ಬಿ.ಗಿಡ್ಡಿ, ಪುರಸಭೆ ಸದಸ್ಯರಾದ ಸಂತೋಷ ಜಮಖಂಡಿ, ಕಾಶೀನಾಥ ರಾಠೋಡ, ಕುಮಾರ ಸರಿಕರ, ಶಂಕರ ಕುಂಬಾರ ಸೇರಿದಂತೆ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಇದ್ದರು.

Social Plugin