ತೇರದಾಳದ ಬಸ್ ನಿಲ್ದಾಣ ಹತ್ತಿರದ ಮುಖ್ಯ ರಸ್ತೆಯಲ್ಲಿ ಪೋಲಿಸರು ವಾಹನ ತಪಾಸಣೆ ಮಾಡುತ್ತಿರುವುದು.
ಅನಗತ್ಯವಾಗಿ ಸಂಚಾರ 35ಬೈಕ್ ವಶಕ್ಕೆ
ತೇರದಾಳ : ಮಹಾಮಾರಿ ಕೊರೊನಾ ಹರಡುವುದನ್ನು ತಡೆಗಟ್ಟಲು ವಾಹನಗಳ ಓಡಾಟ ನಿಷೇದವಿದ್ದರು ಸಹ ಪಟ್ಟಣದಲ್ಲಿ ಬುಧವಾರ ಅನಗತ್ಯವಾಗಿ ಸಂಚರಿಸುತ್ತಿದ್ದ 35ಬೈಕ್‍ಗಳನ್ನು ಪೋಲಿಸರು ವಶಪಡಿಸಿಕೊಂಡಿದ್ದಾರೆ.
ರಾಜ್ಯ ಸರಕಾರ ಮೇ.10ರಿಂದ 14ದಿನಗಳ ಕಾಲ ಕಠಿಣ ನಿಯಮಗಳನ್ನೊಳಗೊಂಡ ಲಾಕ್‍ಡೌನ್ ಜಾರಿ ಮಾಡಿದೆ. ಆಸ್ಪತ್ರೆ ಸೇರಿದಂತೆ ತುರ್ತು ಪರಿಸ್ಥಿತಿ ವಾಹನಗಳು ಮಾತ್ರ ಓಡಾಟಕ್ಕೆ ರಾಜ್ಯ ಸರಕಾರ ಅವಕಾಶ ನೀಡಿದೆ. ಆದರೆ ಅನಗತ್ಯವಾಗಿ ಜನರು ತಮ್ಮ ದ್ವಿಚಕ್ರ ವಾಹನವನ್ನು ತಗೆದುಕೊಂಡು ಸಂಚಾರ ಮಾಡುತ್ತಿದ್ದಾರೆ. ಅಂತಹ ವಾಹನಗಳನ್ನು ಇಂದು ಸ್ಥಳೀಯ ಠಾಣಾಧಿಕಾರಿ ವಿಜಯ ಕಾಂಬಳೆ ಅವರ ಮಾರ್ಗದರ್ಶನದಲ್ಲಿ ಹೆಚ್ಚುವರಿ ಪಿಎಸ್‍ಐ ಎಸ್.ಕೆ. ಸೂರ್ಯವಂಶಿ ಅವರ ನೇತೃತ್ವದಲ್ಲಿ 35 ವಾಹನಗಳನ್ನು ವಶಕ್ಕೆ ಪಡೆದುಕೊಂಡರು. ಸಾರ್ವಜನಿಕರಿಗೆ ಸಾಕಷ್ಟು ಬಾರಿ ತಿಳಿ ಹೇಳಿದರು ಯಾರು ಮನೆಯಲ್ಲಿ ಇರುತ್ತಿಲ್ಲ. ಅನಾವಶ್ಯಕವಾಗಿ ತಮ್ಮ ವಾಹನಗಳನ್ನು ತಗೆದುಕೊಂಡು ಹೊರ ಸಂಚರಿಸುತ್ತಿದ್ದಾರೆ.
ಕೊರೊನಾ ತೀವೃವಾಗಿ ಹಬ್ಬುತ್ತಿದೆ ಸಾವುಗಳು ಹೆಚ್ಚಾಗುತ್ತಿದ್ದರು ಜನರಲ್ಲಿ ಭಯವಿಲ್ಲ. ಮಹಾಮಾರಿ ಕೊರೊನಾ ಹರಡದಂತೆ ತಡೆಯಲು ಸರಕಾರ ಹಾಕಿರುವ ನಿಯಮಗಳನ್ನು ಇನ್ನು 12 ದಿನಗಳ ಕಾಲ ಪಾಲಿಸಬೇಕಾಗಿದೆ. ದಯವಿಟ್ಟು ಮನೆಯಲ್ಲಿಯೇ ಇರಿ. ಹೊರಗಿನ ಮಹಾಮಾರಿಯನ್ನು ಮನೆಯೊಳಗೆ ತಗೆದುಕೊಂಡು ಹೋಗಬೇಡಿರಿ ಎಂದು ಪೋಲಿಸ್‍ರು ಮನವಿ ಮಾಡಿಕೊಳ್ಳುತ್ತಿದ್ದಾರೆ. ಆದರೆ ಸಾರ್ವಜನಿಕರು ಇದನ್ನು ಲೆಕ್ಕಿಸದೆ ಪೋಲಿಸರ ಕಣ್ಣು ತಪ್ಪಿಸಿ ಹೊರ ಓಡಾಡುತ್ತಿದ್ದಾರೆ. ಅಂತವರ ವಾಹನಗಳನ್ನು ಇಂದು ಪೋಲಿಸ್‍ರು ತಮ್ಮ ವಶ ಪಡೆದುಕೊಂಡು ಠಾಣೆಯಲ್ಲಿ ಇರಿಸುತ್ತಿದ್ದಾರೆ. ಇನ್ನಾದರು ಸಾರ್ವಜನಿಕರು ಎಚ್ಚತ್ತುಕೊಂಡು ಮನೆಯಲ್ಲಿಯೇ ಉಳಿದು ಮಹಾಮಾರಿ ಹರಡಂತೆ ತಡೆಯಲು ಸರಕಾರದ ನಿಯಮಗಳನ್ನು ಪಾಲಿಸುವುದರ ಜೊತೆಗೆ ಸಹಕರಿಸಬೇಕು ಎಂದು ಎಎಸ್‍ಐ ಎಲ್.ಬಿ.ಮಾಳಿ, ಎಸ್.ಎಮ್. ಬಗಲಿ, ಎಚ್.ಬಿ.ಹುಕ್ಕೇರಿ ಸೇರಿದಂತೆ ಹೋಮಗಾರ್ಡ ಇವರು ತಿಳಿಹೇಳುತ್ತಿದ್ದಾರೆ.

Social Plugin