ಅಮ್ಮಾ, ಅವ್ವೆ, ಅಬ್ಬೆ, ಅಂಬಾ ಎಂದು ಎಂದು ಕರೆಸಿಕೊಳ್ಳುವ ತಾಯಂದಿರ ದಿನವಂತೆ, ಅಂದರೆ ಅಮ್ಮನ ದಿನ ಎಂದು ಕರೆಯಲಾಗುತ್ತದೆ. ಇದು ಮೇ ತಿಂಗಳ ಎರಡನೇ ಭಾನುವಾರ ಬರುವ ದಿನ. 1908ರಿಂದ ಈ ದಿನವನ್ನು ಅಮ್ಮಂದಿರ ದಿನ ಎಂದು ಆಚರಿಸಿಕೊಂಡು ಬರಲಾಗುತ್ತಿದೆ. ಅಮೇರಿಕಾದ ಅನ್ನಾ ಜಾರ್ವಿಸ್ Anna Jarvisಎನ್ನುವ ಮಿಶನರಿಯೊಬ್ಬರು ಅಲ್ಲಿ ಸೇವಾಕಾರ್ಯ ಮಾಡುತ್ತಿದ್ದರು. ಆಕೆಯ ತಾಯಿ 1905ನೇ ಇಸವಿಯಲ್ಲಿ ಮರಣ ಹೊಂದುತ್ತಾರೆ. ಆ ತಾಯಿಗೆ ಬೇರೆ ಮಕ್ಕಳಿಲ್ಲದ ಕಾರಣ ಅಂತ್ಯಕ್ರಿಯೆಗಳನ್ನು ಕ್ರೈಸ್ತ ವಿಧಿವಿಧಾನಗಳಿಂದ ಈ ಮಿಷನರಿಯೇ ನೆರವೇರಿಸುತ್ತಾರೆ. ಆ ಮರಣದಿನದ ನೆನಪಿಗಾಗಿ ಅಮ್ಮನ ಮೇಲಿನ ಪ್ರೀತಿ ಮತ್ತು ಚರ್ಚಿನ ಆದೇಶದಂತೆ 1908ರಿಂದ ಮೇ ತಿಂಗಳ ಎರಡನೇ ಭಾನುವಾರದಿಂದ ಈ ಹಬ್ಬವನ್ನು ಆಚರಿಸಿಕೊಂಡು ಬಂದರು. ಮುಂದೆ ಪ್ರತಿ ವರ್ಷ ಆದಿನವನ್ನು ಅವರು ಅಮ್ಮನ ದಿನ ಎಂದು ಆಚರಿಸಿದರು. ಅಂದರೆ ನಮ್ಮಲ್ಲಿ ವರ್ಷಕ್ಕೊಮ್ಮೆ ನಡೆಸುವ ಶ್ರಾದ್ಧಕರ್ಮದಂತೆ. ನಮ್ಮಲ್ಲಿ ಪಿಂಡ ಪ್ರದಾನವಾಗುತ್ತದೆ ಅಲ್ಲಿ ಕೇಕ್ ಕತ್ತರಿಸಿ ಆಚರಿಸಬಹುದು. ಅವರ ಆಚರಣೆಗೆ ಬೇಸರವಿಲ್ಲ. ಆದರೆ ನಮ್ಮಲ್ಲಿ ಇದರ ಆಚರಣೆ ಆ ದಿನವೇ ಬೇಕಾ ?. ಇದರ ಹಿನ್ನೆಲೆ ಹೀಗಿರಬೇಕಾದರೆ ನಾವು ಜೀವಂತ ಇರುವ ತಾಯಿಗೆ ಆಚರಿಸುವುದು ನನಗಂತೂ ಸರಿ ಅನ್ನಿಸಲಿಲ್ಲ.
ನಮ್ಮ ಆಚರಣೇಗಳು ಅನೇಕ ಇವೆ ಅವುಗಳನ್ನೇ ಶಿಸ್ತುಬದ್ಧವಾಗಿ ಆಚರಿಸೋಣ. ನಮಗೆ ಈ ಪ್ರಕೃತಿಯೂ ತಾಯಿ, ನಾವು ಮಾತನಾಡುವುದು ತಾಯಿಯಿಂದ ಆಕೆಯನ್ನು ವಾಗ್ದೇವತೆ ಎನ್ನುತ್ತೇವೆ. ನಾವು ಕಲಿಯುವ ವಿದ್ಯೆ ಸರಸ್ವತಿ ಎಂದು ತಾಯಿಯ ಸ್ಥಾನವನ್ನೆ ಕೊಡುತ್ತೇವೆ. ಯುದ್ಧದಲ್ಲಿ ಗೆದ್ದಾಗ ವಿಜಯ ಲಕ್ಷ್ಮೀ ಎನ್ನುತ್ತೇವೆ. ಹೀಗೇ ನಮ್ಮ ಪ್ರತಿ ಉಸಿರೂ ಅಮ್ಮನದ್ದು. ನೀರನ್ನು ನಾವು ತಾಯಿ ಎಂದು ಕರೆಯುತ್ತೇವೆ, ಗೋವು ಅಮೃತದಂತಹ ಹಾಲು ಕೊಡುತ್ತದೆ. ಪಂಚಾಮೃತ ಸಿಗುವ ಆ ತಾಯಿಗೆ ಗೋ ಮಾತೆ ಎನ್ನುತ್ತೇವೆ. ನಮಗೆ ಕಷ್ಟವಾದಾಗ, ನೋವಾದಾಗ ನೆನಪಾಗುವುದು ಅಮ್ಮ ಅಥವಾ ಅಪ್ಪ ಇವೆರಡನ್ನೂ ಬಿಟ್ಟರೇ ದೇವಾ ಎನ್ನುತ್ತೇವೆ. ನಾವು ವಯಸ್ಸಿಗೆ ಬಂದಾಗ ವಿವಾಹವಾಗಿ ಕರೆದುಕೊಂಡು ಬರುವ ಮಡದಿಯೂ ತಾಯಿ ಸಮಾನಳೇ. ನಾವು ಆಶ್ರಯ ಪಡೆದಿರುವ ಈ ಭೂಮಿಯನ್ನು ನಾವು ಗುರುತಿಸುವುದು ಅಮ್ಮ ಅಥವಾ ತಾಯಿಯಿಂದ. ತಾಯಿಯನ್ನು ದುರ್ಗೆಯಾಗಿ, ಲಕ್ಷ್ಮಿಯನ್ನಾಗಿ ನೋಡುವ ನಾವು ಹೆತ್ತಮ್ಮ ವಯಸ್ಸಾದ ನಂತರ ವೃದ್ಧಾಶ್ರಮದಲ್ಲಿ ಬಿಡುವ ವರ್ಷಕ್ಕೊಮ್ಮೆ ಹೋಗಿ ನೋಡಿ ಬರುವ ಸಂಸ್ಕೃತಿಯ ವರ್ಷಕ್ಕೊಮ್ಮೆ ನೆನೆಯುವುದಕ್ಕಿಂತ ದಿನವೂ ನೆನೆಯಬೇಕು. ಅವಳೊಡನೆ ಬದುಕಬೇಕು. ಅವಳು ನಮ್ಮ ಉಸಿರು ಇರುವ ತನಕ ನಮ್ಮ ಜೊತೆಯೇ ಇರುವವಳಾಗಿರಬೇಕು ದೈಹಿಕವಾಗಿ ಸಾಧ್ಯವಾಗದಿದ್ದರೂ ಬಾವನಾತ್ಮಕವಾಗಿಯಾದರೂ ಇರಲೇ ಬೇಕು. ಆ ಸ್ಥಾನ ಅವಳಿಗೆ ಸಲ್ಲಬೇಕು. ಜೀವಂತ ಅಮ್ಮನಿರುವಾಗ ಇಂತಹ ಅಪದ್ಧಗಳು ಸರಿಯಲ್ಲ ಅನ್ನಿಸಿತು ಬರೆದೆ. ಯಾರಿಗಾದರೂ ಮನಸ್ಸಿಗೆ ಬೇಸರವಾಗಿದ್ದರೆ ದಯವಿಟ್ಟು ಬೇಸರಿಸಿಕೊಳ್ಳದಿರಿ.
ನಾವು ಸಾಧ್ಯವಿದ್ದವರು ದಿನಕ್ಕೊಮ್ಮೆ ಶ್ರೀ ಸೂಕ್ತವನ್ನೋ ದುರ್ಗಾ ಸೂಕ್ತವನ್ನೋ ಹೇಳಿದರೆ ಆಗ ದಿನವೂ ತಾಯಿಯ ಸ್ಮರಣೆಯಾಗುತ್ತದೆ.
ಮನಸಃ ಕಾಮಮಾಕೂತಿಂ ವಾಚಃ ಸತ್ಯಮಶೀಮಹಿ |
ಪಶೂನಾಂ ರೂಪಮನ್ನಸ್ಯ ಮಯಿ ಶ್ರೀಃ ಶ್ರಯತಾಂ ಯಶಃ ||
ನಾವು ಮನಸ್ಸಿನಲ್ಲಿ ಬಯಸ್ಸಿದ್ದನ್ನೆಲ್ಲಾ ಕೊಡುವ, ನಮ್ಮ ಸಂಕಲ್ಪ ಸಿದ್ದಿಯನ್ನು ಇಡೇರಿಸುವ, ನಮಗೆ ಸಂತೋಷವನ್ನು ಕೊಡುವ, ನಮ್ಮ ಮಾತುಗಳಲ್ಲಿ ಸತ್ಯವನ್ನು ಹೊರಬರುವಂತೆ ಮಾಡುವ, ಗೋವು ಮೊದಲಾದ ನಮ್ಮ ಐಶ್ವರ್ಯವನ್ನು ವರ್ಧಿಸುವ, ದವಸ ಧಾನ್ಯಗಳು ಸದಾಕಾಲ ನಮ್ಮಲ್ಲಿರುವಂತೆ ಮಾಡುವ, ಸಂಪತ್ತು ಕೀರ್ತಿಯನ್ನು ನಮಗೆ ಒದಗಿಸಿಕೊಡುವ ಆ ಶ್ರೀದೇವತೆಯನ್ನು ದಿನವೂ ನಾವು ಸ್ಮರಿಸಲೇ ಬೇಕಲ್ಲವೇ ?
#ಅಮ್ಮಾ_ನಿನ್ನನೆನೆಯುತ್ತಾ

Social Plugin