ಕೊರೋನಾವನ್ನು ರಾಷ್ಟ್ರೀಯ ತುರ್ತು ಪರಿಸ್ಥಿತಿ ಎಂದು ಘೋಷಿಸಿ, ಎಲ್ಲ ಖಾಸಗಿ ಆಸ್ಪತ್ರೆಗಳನ್ನು ವಶಕ್ಕೆ ತೆಗೆದುಕೊಂಡು, ಎಲ್ಲರಿಗೂ ಉಚಿತ ಚಿಕಿತ್ಸೆ ನೀಡಲು ಪ್ರಧಾನಿ ಮೋದಿಜಿಗೆ ಶ್ರೇಯ ಟಿ.ಎಸ್. ಮನವಿ : -----------------------------------
ಎಲ್ಲರಿಗೂ ನಮಸ್ಕಾರ. ನಾನು ಶ್ರೇಯ ಟಿ.ಎಸ್. ಬೆಂಗಳೂರಿನ ಭಾರತೀಯ ವಿದ್ಯಾ ಭವನ ಶಾಲೆಯಲ್ಲಿ 6ನೇ ತರಗತಿ ಓದುತ್ತಿದ್ದೇನೆ. ಕೊರೋನಾ ಬಗ್ಗೆ ನಾನು ನನ್ನ ಅನಿಸಿಕೆಗಳನ್ನು ಈ ವಿಡಿಯೋ ಮೂಲಕ ಹಂಚಿಕೊಳ್ಳಲು ಬಯಸುತ್ತೇನೆ. ಈ ಬಗ್ಗೆ ಪ್ರಧಾನಿ ಮೋದಿಯವರನ್ನು ಒತ್ತಾಯಿಸಲು ಎಲ್ಲರೂ ಮುಂದಾಗಬೇಕು ಎಂದು ಈ ಮೂಲಕ ವಿನಂತಿಸುತ್ತೇನೆ, --- ಪ್ರೀತಿಯ ಮೋದಿಯವರೆ, ಕಳೆದ 6-7 ವರ್ಷಗಳ ಕಾಲ ನೀವು ತೆಗೆದುಕೊಂಡ ಪ್ರತಿ ನಿರ್ಧಾರವನ್ನೂ ಸಹ ಜನರು ಬೆಂಬಲಿಸಿದ್ದಾರೆ. ಆದರೆ ಈಗ ಜನರು ರಸ್ತೆಗಳಲ್ಲಿ ಕೊರೋನಾದಿಂದ ಸಾಯುತ್ತಿದ್ದಾರೆ. ಜನರು ನಿಮ್ಮ ಹಾಗೂ ನಿಮ್ಮ ಸರಕಾರದ ಬಗ್ಗೆ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ. 2024 ರ ಚುನಾವಣೆಯಲ್ಲಿ ನೀವು ಮತ್ತು ನಿಮ್ಮ ಪಕ್ಷ ಮತ್ತೆ ಗದ್ದುಗೆ ಏರಬೇಕು ಎಂದು ಬಯಸಿದ್ದಲ್ಲಿ ಈಗ ಜನರ ವಿಶ್ವಾಸ ನೀವು ಉಳಿಸಿಕೊಳ್ಳಲೇಬೇಕು. ಇದಕ್ಕಾಗಿ ನೀವು ಈ ಕೆಳಗಿನ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ನನ್ನ ಮನವಿ. 1. ದಯವಿಟ್ಟು ತಕ್ಷಣದಿಂದ ಜಾರಿಗೆ ಬರುವಂತೆ ಕೊರೋನಾವನ್ನು ರಾಷ್ಟ್ರೀಯ ಆರೋಗ್ಯ ತುರ್ತು ಪರಿಸ್ಥಿತಿ ಎಂದು ಘೋಷಿಸಿ. 2. ತಕ್ಷಣ ಎಲ್ಲ ಖಾಸಗಿ ಆಸ್ಪತ್ರೆಗಳನ್ನು, ಅಂಬುಲೆನ್ಸ್, ಆಕ್ಸಿಜನ್ ಘಟಕಗಳು, ರಕ್ತ ನಿಧಿ ಕೇಂದ್ರಗಳನ್ನು ಸರಕಾರದ ವಶಕ್ಕೆ ತೆಗೆದುಕೊಳ್ಳಿ. 3. ತಕ್ಷಣ ಎಲ್ಲ ಕೋವಿಡ್ ರೋಗಿಗಳಿಗೆ ಸರಕಾರದ ವತಿಯಿಂದ ಉಚಿತ ಚಿಕಿತ್ಸೆ ಘೋಷಣೆ ಮಾಡಿ. 4. ಐಸಿಯುಗಳನ್ನು ಪ್ರಭಾವಕ್ಕೆ ಮಣಿದು ಕೊಡುವುದರ ಬದಲು, ರೋಗಿಗಳ ಪರಿಸ್ಥಿತಿ ನೋಡಿಕೊಂಡು ಸರಕಾರವೇ ಐಸಿಯುಗಳನ್ನು ಹಂಚುವ ಕ್ರಮ ತೆಗೆದುಕೊಳ್ಳಿ. 5. ಖಾಸಗಿ ಆಸ್ಪ್ರತೆಯಲ್ಲಿ ಕರೋನಾ ರೋಗಿಗಳಿಗೆ ಉಚಿತ ಚಿಕಿತ್ಸೆ ದೊರೆಯಲಿ. ಇದಕ್ಕೆ ತಗುಲುವ ನ್ಯಾಯ ಸಮ್ಮತ ವೆಚ್ಚವನ್ನು ಸರಕಾರ ಖಾಸಗಿ ಆಸ್ಪತ್ರೆಗಳಿಗೆ ನೀಡಲಿ. ಇದರಿಂದ 4..5 ಲಕ್ಷಕ್ಕೆ ಐಸಿಯುಗಳನ್ನು ಮಾರಿಕೊಳ್ಳುವ ದಂಧೆಗೆ ಕಡಿವಾಣ ಬೀಳುತ್ತದೆ. 6. ಕೋವಿಡ್ ನಿಂದ ಮೃತಪಟ್ಟವರ ಕುಟುಂಬದವರಿಗೆ, ಮೃತರ ಅಂತಿಮ ಸಂಸ್ಕಾರ ನೆರವೇರಿಸಲು ಉಚಿತ ವ್ಯವಸ್ಥೆಯನ್ನು ತಕ್ಷಣ ಮಾಡಿ. 7. ಎಲ್ಲ ಅಂಬುಲೆನ್ಸ್ ಗಳನ್ನು ಸರಕಾರ ತನ್ನ ವಶಕ್ಕೆ ತೆಗೆದುಕೊಂಡು, ಉಚಿತ ಸೇವೆ ಒದಗಿಸಲಿ. ಪ್ರತಿಯಾಗಿ ಅಂಬುಲೆನ್ಸ್ ನವರಿಗೆ ಪ್ರತಿ ಕಿ.ಮಿ.ಗೆ ಇಷ್ಟು ಎಂದು ದರ ನಿಗದಿ ಪಡಿಸಿ, ಸರಕಾರವೇ ನೀಡಲಿ. ಇದರಿಂದ ಒಂದೆರಡು ಕಿ.ಮಿ.ಗಳ ಸೇವೆಗೂ 10-20 ಸಾವಿರ ಸುಲಿಗೆ ಮಾಡುತ್ತಿರುವವರಿಗೆ ಕಡಿವಾಣ ಹಾಕಿದಂತಾಗುತ್ತದೆ. 8. ಇದನ್ನು ಉಲ್ಲಂಘಿಸಿ, ಕಾಳಸಂತೆಯಲ್ಲಿ ದಂಧೆ ಮಾಡುವವರನ್ನು ಬಂಧಿಸಿ, 1 ವರ್ಷ ಜೈಲಿಗೆ ಕಳುಹಿಸಿ. 9. ಆಸ್ಪತ್ರೆಗಳು ಸಹ ಇದನ್ನು ಉಲ್ಲಂಘಿಸಿದರೆ, ಆಡಳಿತ ಮಂಡಳಿಯನ್ನು ಬಂಧಿಸಿ 1 ವರ್ಷ ಜೈಲಿಗೆ ತಳ್ಳಿ ಹಾಗೂ ಆಸ್ಪತ್ರೆಯ ಪರವಾನಿಗೆಯನ್ನು ರದ್ದು ಪಡಿಸಿ. 10. ಇದು ದಂಧೆ ಮಾಡಿ, ಹಣ ಮಾಡುವ ಸಮಯವಲ್ಲ. ಇದು ಜನರ ಜೀವ ಉಳಿಸಲು ಸೇವೆ ಮಾಡುವ ಸಮಯ. 11. ಇದು ಸುಮ್ಮನೆ ಕೂರುವ ಕಾಲವಲ್ಲ. ದೇಶವನ್ನು ರಕ್ಷಿಸಲು ಕಠಿಣ ನಿರ್ಧಾರ ತೆಗೆದುಕೊಳ್ಳುವ ಸಮಯ. 12. ನಾನು ನನ್ನ ಎಲ್ಲ ಸ್ನೇಹಿತರಿಗೆ, ಪತ್ರಕರ್ತರಿಗೆ, ಜನರಿಗೆ, ಶಾಲಾ ಕಾಲೇಜುಗಳವರಿಗೆ, ಶಿಕ್ಷಕರಿಗೆ, ಕೋವಿಡ್ ನಿಂದ ನರಳುತ್ತಿರುವ ಎಲ್ಲರೂ ದಯವಿಟ್ಟು ನಿಮ್ಮಿಂದಾದ ರೀತಿಯಲ್ಲಿ ಈ ಕ್ರಮಗಳನ್ನು ತೆಗೆದುಕೊಳ್ಳಲು ಪ್ರಧಾನಿ ಮೋದಿಯವರನ್ನು ಒತ್ತಾಯಿಸಿ. 13. ಇದಕ್ಕಾಗಿ ಈ ಕೆಳಗಿನ ಹ್ಯಾಷ್ ಟ್ಯಾಗ್ ಗಳನ್ನು ನೀವು ಬಳಸಬಹುದು. #freecoronatreatment #declarenationalhealthemergency #takecontrolofprivatehospitals ನಮಸ್ಕಾರಗಳು ಇಂತಿ ತಮ್ಮ ಶ್ರೇಯ ಟಿ.ಎಸ್ 6ನೇ ತರಗತಿ ಭವನ್ ಬೆಂಗಳೂರು ಪ್ರೆಸ್ ಸ್ಕೂಲ್ ಬೆಂಗಳೂರು
Social Plugin