ಬೀದಿ ಬದಿ ವ್ಯಾಪಾರಸ್ಥರ ಸಾಮಾನ್ಯ ಸಾಲ ಹಾಗೂ ಗುರುತಿನ ಚೀಟಿ ನೀಡುವ ಯೋಜನೆಯ ಪ್ರಗತಿಯನ್ನು ಪರೀಶೀಲಿಸುತ್ತಿರುವ ಪೌರಾಯುಕ್ತ ಶ್ರೀನಿವಾಸ ಜಾಧವ
ಬೀದಿ ಬದಿ ವ್ಯಾಪಾರಸ್ಥರಿಗೆ ಸಾಲ ನೀಡುವ ಯೋಜನೆ ಸದುಪಯೋಗ ಪಡಿಸಿಕೊಳ್ಳಿ
ರಬಕವಿ-ಬನಹಟ್ಟಿ,ನ24: ಪ್ರಧಾನಮಂತ್ರಿ ಬೀದಿ ಬದಿ ವ್ಯಾಪಾರಿಗಳ ಆತ್ಮನಿರ್ಭರ ನಿಧಿ ಯೋಜನೆಯಡಿ ಸಾಮಾನ್ಯ ಸಾಲ ನೀಡುವ ಯೋಜನೆ ಇದಾಗಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ರಬಕವಿ-ಬನಹಟ್ಟಿ ಪೌರಾಯುಕ್ತ ಶ್ರೀನಿವಾಸ ಜಾಧವ ಹೇಳಿದರು.
ಅವರು ನಗರದ ನಗರಸಭೆ ಕಚೇರಿಯಲ್ಲಿ ಭಾರತ ಸರಕಾರದ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಮಂತ್ರಾಲಯವತಿಯಿಂದ ಪ್ರಧಾನಮಂತ್ರಿ ಬೀದಿ ಬದಿ ವ್ಯಾಪಾರಿಗಳ ಆತ್ಮನಿರ್ಭರ ನಿಧಿ ಯೋಜನೆಯಡಿ ಸಾಮಾನ್ಯ ಸಾಲ ಹಾಗೂ ಗುರುತಿನ ಚೀಟಿ ನೀಡುವ ಯೋಜನೆಯಲ್ಲಿ ಫಾರ್ಮಗಳನ್ನು ತುಂಬುತ್ತಿರುವ ನಗರಸಭೆ ಸಿಬ್ಬಂದಿಗಳ ಸ್ಥಳಕ್ಕೆ ಬೇಟ್ಟಿ ನೀಡಿ ಪತ್ರಿಕೆಯೊಂದಿಗೆ ಮಾತನಾಡಿದರು. ಫಲಾನುಭವಿಗಳಿಂದ ಅರ್ಜಿಗಳನ್ನು ಪಡೆದುಕೊಂಡು ಆನಲೈನ ಮೂಲಕ ಸಬ್ಮಿಟ್ ಮಾಡುವ ಕೆಲಸವನ್ನು ನಮ್ಮ ಸಿಬ್ಬಂದಿಗಳು ಮಾಡುತ್ತಿದ್ದು, ಫಲಾನುಭವಿಗಳು ಆಧಾರ ಕಾರ್ಡ, ರೇಷನ್ ಕಾರ್ಡ, ಬ್ಯಾಂಕ ಪಾಸ್‍ಬುಕ್, ಆದಾಯ ಪ್ರಮಾಣ ಪತ್ರ, ಬೀದಿ ಬದಿ ವ್ಯಾಪಾರ ಮಾಡುವ ಪೋಟೋ, 2 ಐಡಿ ಸೈಜ್ ಭಾವಚಿತ್ರ ತೆಗೆದುಕೊಂಡು ಬಂದು ನಗರಸಭೆಯಲ್ಲಿ ನೊಂದಣಿ ಮಾಡಿಸುವುಸದರ ಮೂಲಕ ಯೋಜನೆಯ ಸದುಪಯೋಗ ಪಡಿಸಿಕೊಳ್ಳಿ ಎಂದರು.
ಈ ಸಂದರ್ಭದಲ್ಲಿ ನಗರಸಭೆ ವ್ಯವಸ್ಥಾಪಕರಾದ ಬಿ. ಎಂ. ಡಾಂಗೆ, ಸಮುದಾಯ ಸಂಘಟನಾಧಿಕಾರಿ ಸುನೀಲ ಬಬಲಾದಿ, ಎಸ್. ಬಿ. ಪೋತರಾಜ, ಮಾನಿಂಗ ಮುಘೋಖೋಡ, ಮುಕೇಶ ಬನಹಟ್ಟಿ, ಸಂಗೀತಾ ಕೋಳಿ, ರಾಜಕುಮಾರ ಹೊಸೂರ ಸೇರಿದಂತೆ ಅನೇಕರು ಇದ್ದರು.
Social Plugin