ಮಹತ್ವದ ಪಡೆದ ಬಣ್ಣಗಾರರು
*ದುಡಿಮೆಯಲ್ಲಿ ತಲ್ಲೀಣರಾದ ಕುಟುಂಬಗಳು
-ಮಲ್ಲಿಕಾರ್ಜುನ ತುಂಗಳ
ರಬಕವಿ-ಬನಹಟ್ಟಿ,ನ7: ಕೊರೊನಾ ಅಟ್ಟಹಾಸದಿಂದ ತೀವ್ರ ಜರ್ಜರಿತಗೊಂಡಿದ್ದ ಜವಳಿ ಕ್ಷೇತ್ರದಲ್ಲಿ ಬಣ್ಣ ಹಾಕುವವರ ಕುಟುಂಬಗಳು ಉದ್ಯೋಗ ಅರಸಿ ಅನ್ಯ ಉದ್ಯೋಗದತ್ತ ವಾಲಿದ್ದರು.
ಇದೀಗ ನೇಕಾರಿಕೆಯು ಸಹಜ ಸ್ಥಿತಿಯತ್ತ ಸಾಗಿದ್ದು, ಜವಳಿ ಕ್ಷೇತ್ರದಲ್ಲಿ ಅತ್ಯಂತ ಹೀನಾಯ ಸ್ಥಿತಿಗೆ ತಲುಪಿದ್ದ ಬಣ್ಣಗಾರರ ಬದುಕು ಸ್ವಲ್ಪ ನಿರಾಳತೆಯಿಂದ ಕೂಡುವಲ್ಲಿ ಕಾರಣವಾಗಿದೆ.
ಬಣ್ಣ ಹಾಕುವ ಬಹುತೇಕರು ಹಣಗಂಡಿ, ಚಿಮ್ಮಡ, ರಬಕವಿ-ಬನಹಟ್ಟಿಯವರಾಗಿದ್ದು, ನೂರಾರು ಕುಟುಂಬಗಳಿಗೆ ಇದೀಗ ಉದ್ಯೋಗ ಅರಸಿ ಬರುತ್ತಿದೆ.
ಕೋನ್‍ಗಳು ಸ್ಥಗಿತ: ಮುಂಬಯಿಯಿಂದ ಬಣ್ಣ ಹಾಕುವದರೊಂದಿಗೆ ನೂಲಿನೊಂದಿಗೆ ತಯಾರಾಗಿ ಕಂಪನಿಯಿಂದಲೇ ಆಗಮಿಸುತ್ತಿದ್ದ ಸೀರೆ ತಯಾರಿಕೆಗೆ ಕೋನ್‍ಗಳ ರಫ್ತು ಸಂಪೂರ್ಣ ಸ್ಥಗಿತಗೊಂಡಿದೆ. ಇದರಿಂದಾಗಿ ಈ ಭಾಗದ ನೇಕಾರಿಕೆಯಲ್ಲಿ ಬಣ್ಣ ಹಾಕುವವರು ಮತ್ತಷ್ಟು ಮಹತ್ವ ಪಡೆಯುವಲ್ಲಿ ಕಾರಣವಾಗಿದ್ದು, ಪ್ರತಿ ದಿನ 300 ರಿಂದ 400 ರೂ.ವರೆಗೆ ವೇತನ ದೊರಕುತ್ತಿದೆ. ಇದರಿಂದ ಹಲವಾರು ಕುಟುಂಬಗಳಿಗೆ ಆರ್ಥಿಕ ಸಂಕಷ್ಟ ದೂರು ಮಾಡುವಲ್ಲಿ ಕಾರಣವಾಗಿದ್ದರೆ, ನೈಜ ಉದ್ಯೋಗದತ್ತ ಕಾರ್ಮಿಕರನ್ನು ಕೈಬೀಸಿ ಕರೆಯುವಲ್ಲಿ ಕಾರಣವಾಗುತ್ತಿದೆ.

Social Plugin