ಬೆಂಗಳೂರಿನಲ್ಲಿ ನೇಕಾರ ಸಮಸ್ಯೆ ಕುರಿತು ಸಿಎಂ ಬಿ. ಎಸ್. ಯಡಿಯೂರಪ್ಪ ನವರಿಗೆ ನೇಕಾರ ಸಂಘದ ರಾಜ್ಯ ಅಧ್ಯಕ್ಷ ಶಿವಲಿಂಗ ಟಿರಕಿ, ಶಿವಶಂಕರ ಶಿವಾಚಾರ್ಯರು ಸೇರಿದಂತೆ ಅನೇಕರು ಮನವಿ ಸಲ್ಲಿಸಿದರು.
ನೇಕಾರ ಸೌಲಭ್ಯಕ್ಕೆ ಸಿಎಂ ಸಮ್ಮತಿ; ನೇಕಾರ ನಿಗಮದ ಅಧ್ಯಕ್ಷ ಸ್ಥಾನವನ್ನು ನೇಕಾರರಿಗೆ ಕೊಡಿ ಶಿವಶಂಕರ ಶಿವಾಚಾರ್ಯ ಒತ್ತಾಯ;
ರಬಕವಿ-ಬನಹಟ್ಟಿ,ನ24: ರಾಜ್ಯದ ಪ್ರತಿ ನೇಕಾರರ ಸಮಸ್ಯೆಗೂ ನಾನು ಸ್ಪಂದಿಸುತ್ತೇನೆ, ನನಗೆ ನೇಕಾರರು ರೈತರು ಎರಡು ಕಣ್ಣುಗಳು ಇದ್ದಹಾಗೆ ಅವರ ಅಭಿವೃದ್ಧಿಗಾಗಿ ಸರ್ಕಾರ ಸದಾ ಸಿದ್ದ ಎಂದು ಸಿಎಂ ಬಿ ಎಸ್ ಯಡಿಯೂರಪ್ಪ ತಿಳಿಸಿದರು.
ಮಂಗಳವಾರ ವಿಧಾನಸೌಧದ ಅವರ ಕಚೇರಿಯಲ್ಲಿ ನೇಕಾರ ಮುಖಂಡರು ಹಾಗೂ ರಾಜ್ಯದ ಸ್ವಾಮಿಜಿಗಳ ಮನವಿಗೆ ಸ್ಪಂದಿಸಿ ಅವರು ಮಾತನಾಡಿದರು.
ಕಳೆದ ಎರಡು ದಿನಗಳಿಂದ ಬೆಂಗಳೂರಿನ ಪ್ರೀಡಂ ಪಾರ್ಕನಲ್ಲಿ ವೃತ್ತಿಪರ ನೇಕಾರರಿಗೆ ಸೌಲಭ್ಯಗಳು ಒದಗಿಸುವಂತೆ ಒತ್ತಾಯಿಸಿ ನೂರಾರು ನೇಕಾರರು ವಿಧಾನಸೌಧ ಚಲೋ ಪ್ರತಿಭಟನೆ ನಂತರ ಇಂದು ನೇಕಾರ ಮುಖಂಡರನ್ನು ಹಾಗೂ ರಾಜ್ಯದ ಕೆಲ ಮಠಾಧೀಶರ ನೇತೃತ್ವದಲ್ಲಿ ಸಮಾಲೋಚನೆ ನಡೆಸಿ ಸಿಎಂ ಭರವಸೆ ನೀಡಿದರೆಂದು ರಾಜ್ಯ ನೇಕಾರ ಸಂಘಧ ಅಧ್ಯಕ್ಷ ಶಿವಲಿಂಗ ಟಿರಕಿ ತಿಳಿಸಿದರು.
ನೇಕಾರರಿಗೆ ಆಗುತ್ತಿರುವ ತಾರತಮ್ಯ ನೀತಿಯನ್ನು ಸರಿಪಡಿಸಬೇಕು, ಈಗಿರುವ ಯೋಜನೆಗಳು ಸಮರ್ಪಕವಾಗಿ ತಲುಪಲು ಕೂಡಲೇ ಜಾರಿಯಾಗಬೇಕು. ಕಟ್ಟಡ ಕಾರ್ಮಿಕರಿಗಿರುವ ಸೌಲಭ್ಯಗಳನ್ನು ನೇಕಾರರಿಗೂ ಜಾರಿಮಾಡಬೇಕು ಎಂಬ ಅನೇಕ ಬೇಡಿಕೆಗೆ ಸಿಎಂರವರು ಸ್ಪಂದಿಸಿದ್ದಾರೆಂದು ಅವರು ತಿಳಿಸಿದರು.
ನಂತರ ಹಳೆ ಹುಬ್ಬಳ್ಳಿ ವೀರಬಿಕ್ಷಾವರ್ತಿ ಮಠದ ಪೂಜ್ಯ ಶ್ರೀ ಶಿವಶಂಕರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ನೇಕಾರ ನಿಗಮದ ಅಧ್ಯಕ್ಷ ಸ್ಥಾನವನ್ನು ನೇಕಾರ ಸಮುದಾಯಕ್ಕೆ ಕೊಡದೆ ಇರುವುದು ನಮಗೆ ವಂಚನೆಯಾಗಿದೆ ಎಂದು ನೇರವಾಗಿ ಸಿಎಂ ಎದರಿಗೆ ಆರೋಪಿಸಿದಾಗ, ಸಿಎಂ ಇದಕ್ಕೆ ಉತ್ತರ ನೀಡಿ ನ್ಯಾಯವದಗಿಸುವುದಾಗಿ ನೇಕಾರ ಮತ್ತು ರೈತರಪರವಾಗಿದ್ದೇನೆಂದು ಸಮರ್ಥಿಸಿಕೊಂಡು ನ್ಯಾಯ ಒದಗಿಸುವ ಭರವಸೆ ನೀಡಿದರು. ಸ್ವಾಮೀಜಿಗಳ ಹಾಗೂ ಸಮುದಾಯದೊಂದಿಗೆ ನಾನು ಸದಾ ಇರುತ್ತೇನೆಂದರು.
ಪೂಜ್ಯ ಶ್ರೀ ಘನಲಿಂಗ ಸ್ವಾಮೀಜಿಯವರು ಮತ್ತು ಶ್ರೀ ರೇವಣಸಿದ್ದ ಸ್ವಾಮಿಗಳು ಮುಖ್ಯಮಂತ್ರಿಯವರಿಗೆ ಸನ್ಮಾನಿಸಿ ಗೌರವಿಸಿದರು.
ನೇಕಾರ ಸಮಸ್ಯೆಗಳನ್ನು ಪರಿಹಾರ ಮಾಡಲು ಕೆಲ ಸಮಯ ಕೇಳಿ ಸ್ಪಂದಿಸಿದ ಸಿಎಂ ರವರಿಗೆ ನೇಕಾರ ಪರವಾಗಿ ಅಭಿನಂದನೆಗಳು.. ಶಿವಲಿಂಗ ಟಿರಕಿ. ನೇಕಾರ ಸಂಘದ ರಾಜ್ಯ ಅಧ್ಯಕ್ಷರು.

Social Plugin