ರಬಕವಿಯ ಈಶ್ವರ ಸಣಕಲ್ ರಸ್ತೆಯಲ್ಲಿ ದೀಪಾವಳಿ ಹಬ್ಬದ ನಿಮಿತ್ತವಾಗಿ ಆಕಾಶ ಬುಟ್ಟಿಗಳ ಮತ್ತು ಖಾತೆ ಪುಸ್ತಕಗಳನ್ನು ಮಾರಾಟ ಮಾಡುತ್ತಿರುವುದು.
ಆಕಾಶ ಬುಟ್ಟಿ, ಖಾತೆ ಪುಸ್ತಕಗಳ ಮಾರಾಟ ಪ್ರಾರಂಭ
ರಬಕವಿ-ಬನಹಟ್ಟಿ,ನ11: ಅವಳಿ ನಗರಗಳಲ್ಲಿ ದೀಪಾವಳಿ ನಿಮಿತ್ತವಾಗಿ ಆಕಾಶ ಬುಟ್ಟಿಗಳ ಮತ್ತು ಖಾತೆ ಪುಸ್ತಕಗಳ ಮಾರಾಟ ಆರಂಭಗೊಂಡಿದೆ.
ಕೋವಿಡ್-19 ನಿಂದಾಗಿ ಹೇರಲ್ಪಟ್ಟ ಲಾಕ್ಡೌನ್ನಿಂದಾಗಿ ಈ ಭಾಗದ ನೇಕಾರಿಕೆಯ ಉದ್ಯೋದಲ್ಲಿ ಸ್ವಲ್ಪ ಪ್ರಮಾಣದ ಚೇತರಿಕೆ ಕಂಡು ಬರುತ್ತಿದೆ. ಇನ್ನೂ ಹಬ್ಬವು ಎರಡು ದಿನಗಳ ಕಾಲ ದೂರ ಇರುವುದರಿಂದ ಜನರು ಇನ್ನೂ ಖರೀದಿ ಮಾಡಬೇಕಾಗಿದೆ.
ಜನರು ಶುಕ್ರವಾರದಿಂದ ಖಾತೆ ಪುಸ್ತಕ ಮತ್ತು ಆಕಾಶ ಬುಟ್ಟಿಗಳನ್ನು ಖರೀದಿ ಮಾಡಲು ಆರಂಭಿಸುತ್ತಾರೆ.ಇನ್ನೂ ಕೆಲವು ಮೂಹರ್ತವನ್ನು ನೋಡಿಕೊಂಡು ಖರೀದಿ ಮಾಡುತ್ತಾರೆ ಎಂದು ಸ್ಥಳೀಯ ಸಂಜಯ ಅಮ್ಮಣಗಿಮಠ ತಿಳಿಸಿದರು.