ರಬಕವಿ-ಬನಹಟ್ಟಿ ತಹಶೀಲ್ದಾರ ಕಾರ್ಯಾಲಯದಲ್ಲಿ ಚೆನ್ನಮ್ಮ ಜಯಂತಿ, ಮಹರ್ಷಿ ವಾಲ್ಮೀಕಿ ಜಯಂತಿ ಮತ್ತು ಕನ್ನಡ ರಾಜ್ಯೋತಸ್ವದ ಕುರಿತು ನಡೆದ ಪೂರ್ವ ಭಾವಿ ಸಭೆಯಲ್ಲಿ ಮಾತನಾಡಿದ ಶಾಸಕ ಸಿದ್ದು ಸವದಿ 

ಕನ್ನಡ ರಾಜ್ಯೋತ್ಸವವನ್ನು ಸರಳವಾಗಿ ಆಚರಿಸಲು ನಿರ್ಧಾರ 
ರಬಕವಿ-ಬನಹಟ್ಟಿ,ಅ20: ಕೊರೊನಾ ಹಿನ್ನಲೆಯಲ್ಲಿ ಎಲ್ಲ ಹಬ್ಬಗಳನ್ನು ಸರಳವಾಗಿ ಆಚರಿಸಲಾಗುತ್ತಿದ್ದು ಕನ್ನಡ ರಾಜ್ಯೋತ್ಸವವನ್ನು ಕೂಡಾ ಸರಕಾರದ ನಿಯಮಾವಳಿಯಂತೆ ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ತೇರದಾಳ ಮತಕ್ಷೇತ್ರದ ಶಾಸಕ ಸಿದ್ದು ಸವದಿ ಹೇಳಿದರು. 
ಅವರು ರಬಕವಿ-ಬನಹಟ್ಟಿ ತಹಶೀಲ್ದಾರ ಕಾರ್ಯಾಲಯದಲ್ಲಿ ಚೆನ್ನಮ್ಮ ಜಯಂತಿ, ಮಹರ್ಷಿ ವಾಲ್ಮೀಕಿ ಜಯಂತಿ ಮತ್ತು ಕನ್ನಡ ರಾಜ್ಯೋತಸ್ವದ ಕುರಿತು ನಡೆದ ಪೂರ್ವ ಭಾವಿ ಸಭೆಯಲ್ಲಿ ಮಾತನಾಡಿದರು. ರಾಜ್ಯೋತ್ಸವನ್ನು ಅದ್ದೂರಿಯಾಗಿ ಆಚರಿಸಲು ಕನ್ನಡ ಪ್ರೇಮಿಗಳ ಆಪೇಕ್ಷೆ ಇದ್ದರೂ ಕೋವಿಡ್-19 ಹಿನ್ನಲೆಯಲ್ಲಿ ಸರಕಾರ ನಿಯಮಾವಳಿಯಂತೆ ಕಾರ್ಯಕ್ರಮ ಹಮ್ಮಿಕೊಳ್ಳಲು ಬರುವುದಿಲ್ಲ. ಸರಕಾರದ ನಿರ್ದೇಶನದಂತೆ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಲಾಗುವುದು ಎಂದರು. 
ಈ ಸಂದರ್ಭದಲ್ಲಿ ಮಾತನಾಡಿದ ತಹಶೀಲ್ದಾರ ಪ್ರಶಾಂತ ಚನಗೊಂಡ, ಅ. 23 ರಂದು ಚೆನ್ನಮ್ಮ ಜಯಂತಿ, ಅ. 31 ರಂದು ಮಹರ್ಷಿ ವಾಲ್ಮೀಕಿ ಜಯಂತಿ ಮತ್ತು ನ. 1 ರಂದು ಕನ್ನಡ ರಾಜ್ಯೋತ್ಸವವನ್ನು ಸರಳವಾಗಿ ಆಚರಿಸಲಾಗುವುದು. ಆ ನಿಟ್ಟಿನಲ್ಲಿ ಚೆನ್ನಮ್ಮ ಜಯಂತಿ ಮತ್ತು ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಕೋವಿಡ್ ಹಿನ್ನಲೆಯಲ್ಲಿ ನಮ್ಮ ಕಛೇರಿಯಲ್ಲಿ ಮುಂಜಾನೆ 9 ಗಂಟೆಗೆ ಸರಳವಾಗಿ ಆಚರಿಸಲಾಗುವುದು. ಕಾರ್ಯಕ್ರಮಕ್ಕೆ ಸಮಾಜದ ಎಲ್ಲ ಮುಖಂಡರು ಪಾಲ್ಗೊಳ್ಳಬಹುದು ಆದರೆ ಕಡ್ಡಾಯವಾಗಿ ಮಾಸ್ಕ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ನ.1 ರಂದು ಬನಹಟ್ಟಿಯಲ್ಲಿ ಕನ್ನಡ ಸಂಘಟನೆಗಳ ಮೂಲಕ ಬೆಳ್ಳಿಗ್ಗೆ 8ಕ್ಕೆ ಹಾಗೂ ರಬಕವಿಯಲ್ಲಿ 9ಕ್ಕೆ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸುವುದರ ಮೂಲಕ ಕನ್ನಡ ರಾಜ್ಯೋತ್ಸವವನ್ನು ಸರಳವಾಗಿ ಆಚರಿಸಲಾಗುವುದು ಎಂದರು. 
ಈ ಸಂದರ್ಭದಲ್ಲಿ ಉಪತಹಶೀಲ್ದಾರ ಎಸ್. ಎಲ್. ಕಾಗಿಯವರ, ಬಸವರಾಜ ಬಿಜ್ಜರಗಿ, ಪಿಎಸ್‍ಐ ರವಿಕುಮಾರ ಧರ್ಮಟ್ಟಿ, ಚಿದಾನಂದ ಸೊಲ್ಲಾಪುರ, ಶಿವಾನಂದ ಬಾಗಲಕೋಟಮಠ, ಧರೆಪ್ಪ ಉಳ್ಳಾಗಡ್ಡಿ, ರಮೇಶ ಮಿಳ್ಳಿಗೇರಿ, ಶ್ರೀಶೈಲ ದಲಾಲ, ಬಿ. ಎಂ. ಡಾಂಗೆ, ಎಫ್. ಬಿ. ತಳವಾರ, ಎಂ. ಎಂ. ಮುಘಳಖೋಡ, ಬಸವರಾಜ ತಾಳಿಕೋಟಿ, ಆನಂದ ಕಂಪು, ಬಾಬಾಗೌಡ ಪಾಟೀಲ, ಕೆ. ಎಚ್. ಮಂಟೂರ, ಎಚ್. ಕೆ. ನಾಯ್ಕ, ಎಸ್. ಎಂ. ವಾಲಿಕರ, ಪಿ. ಎಸ್. ನಾಯಕ, ಬಸವರಾಜ ತೆಗ್ಗಿ, ಪ್ರಭು ಪೂಜಾರಿ, ಪಿ. ಜಿ. ಕಾಖಂಡಕಿ, ಈರಣ್ಣ ಗುಣಕಿ, ಎಲ್. ಆರ್. ಸಂತಿ, ವಿ. ಪಿ. ದೊಡಮನಿ, ಎಸ್. ಎಸ್. ಹಲಗಲಿ, ಕಾಶಿರಾಯ ನಾಯಕ, ರಾಮಣ್ಣ ದಳವಾಯಿ ಸೇರಿದಂತೆ ಅನೇಕರು ಇದ್ದರು.