ಹಿರಿಯ ಕಾರ್ಯಕರ್ತರ ಉಳಿವಿಗಾಗಿ ಸ್ಪರ್ಧೆಯಾಗಿದೆ-ಮಗದುಮ್
*ನಗರಾಧ್ಯಕ್ಷ ಸ್ಥಾನವನ್ನೂ ಸವದಿಯವರೇ ತುಂಬಲಿ
ರಬಕವಿ-ಬನಹಟ್ಟಿ,ಅ26: ತೇರದಾಳ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಹಿರಿಯ ಕಾರ್ಯಕರ್ತರ, ಮುಖಂಡರು ಶಾಸಕರ ನಡುವಳಿಕೆಯಿಂದ ತುಳಿತಕ್ಕೊಳಗಾಗುತ್ತಿದ್ದಾರೆ. ಅವರೆಲ್ಲರ ಪರವಾಗಿ ಹಾಗು ಕೆಲ ಭ್ರಷ್ಟ ಕಾರ್ಯಕರ್ತರಿಂದ ಇಡೀ ಕ್ಷೇತ್ರವೇ ಪಕ್ಷದ ಬಲ ಕಳೆದುಕೊಳ್ಳುವಲ್ಲಿ ಕಾರಣವಾಗುತ್ತಿದೆ. ಇವೆಲ್ಲವನ್ನು ತಡೆಯಲು ಹಾಗು ಪ್ರಾಮಾಣಿಕ ಕಾರ್ಯಕರ್ತರ ಹಾಗು ಪಿಕೆಪಿಎಸ್‍ನ ತಾಲೂಕಿನ ಎಲ್ಲರ ನಾಡಿಮಿಡಿತ ಹಾಗು ಅವರ ಆಶೋತ್ತರಗಳಿಂದ ಬರುತ್ತಿವೆ ಭಾವನೆಗಳಿಂದ ನನಗೆ ಆಶೀರ್ವಾದ ನೀಡಲಿದ್ದು, ಇದೇ ಕಾರಣದಿಂದ ಈ ಬಾರಿ ಮತ್ತೆ ಬಿಡಿಸಿಸಿ ಬ್ಯಾಂಕ್ ಚುನಾವಣೆ ಕಣಕ್ಕಿಳಿದಿದ್ದೇನೆಂದು ಭೀಮಶಿ ಮಗದುಮ್ ಸ್ಪಷ್ಟನೆ ನೀಡಿದರು.
ನಾಮಪತ್ರ ಸಲ್ಲಿಸಿ ನಂತರ ರಬಕವಿ-ಬನಹಟ್ಟಿ ತಾಲೂಕಿನಾದ್ಯಂತ ಪ್ರಚಾರ ಸಂದರ್ಭ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಶಾಸಕರೂ ಬಿಡಿಸಿಸಿ ಬ್ಯಾಂಕ್ ಚುನಾವಣೆ ಕಣಕ್ಕಿಳಿದಿರುವದು ಹಿರಿಯ ಕಾರ್ಯಕರ್ತರಲ್ಲಿ ಅಸಮಾಧಾನವುಂಟು ಮಾಡುವಲ್ಲಿ ಕಾರಣವಾಗಿದೆ. ಸ್ಪರ್ಧೆ ಸಂದರ್ಭ ಪೈಪೋಟಿ ಹಾಗು ಒತ್ತಡಗಳು ಸಹಜ. ನನ್ನನ್ನು ಕಣಕ್ಕಿಳಿಸಲು ಕೆಲವರು ವಿರೋಧಿಸಿದ್ದಾರೆಂದು ತಾವೇ ಅಭ್ಯರ್ಥಿಯಾಗುವದು ಎಷ್ಟು ಸಮಂಜಸ. ಅದರಂತೆ ಸದ್ಯವೇ ರಬಕವಿ-ಬನಹಟ್ಟಿ ನಗರಸಭೆಯ ಅಧ್ಯಕ್ಷ ಗಾದೆಗೂ ತೀವ್ರ ಪೈಪೋಟಿ ಒತ್ತಡಗಳಿವೆ. ಹೀಗಿರುವಾಗ ಅಲ್ಲಿಯೂ ಸಹಿತ ಅವಳಿ ನಗರದ 24 ಸದಸ್ಯರ ಪೈಕಿ ಓರ್ವ ಬಿಜೆಪಿ ಸದಸ್ಯನನ್ನು ರಾಜೀನಾಮೆ ಕೊಡಿಸಿ ತಾವೇ ಅಧ್ಯಕ್ಷರಾಗಲಿ ಎಂದು ಮಗದುಮ್ ಶಾಸಕ ಸಿದ್ದು ಸವದಿ ವಿರುದ್ಧ ಲೇವಡಿ ಮಾಡಿದರು.