ಕೇಂದ್ರ ಸರಕಾರದ ವಿವಿಧ ಧೋರಣೆಗಳನ್ನು ವಿರೋಧಿಸಿ ಕಪ್ಪು ಪಟ್ಟಿ ಧರಿಸಿ ಸೋಮವಾರ ಬನಹಟ್ಟಿ ಹೆಸ್ಕಾಂ ಕಛೇರಿ ಎದಿರು ನೌಕರರು ಹಾಗೂ ಅಧಿಕಾರಿಗಳು ಸಾಂಕೇತಿಕ ಪ್ರತಿಭಟನೆ ನಡೆಸಿದರು. 

ಹೆಸ್ಕಾಂ ನೌಕರರು ಹಾಗೂ ಅಧಿಕಾರಿಗಳಿಂದ ಸಾಂಕೇತಿಕ ಪ್ರತಿಭಟನೆ
ರಬಕವಿ-ಬನಹಟ್ಟಿ,ಅ6: ಕರ್ನಾಟಕ ವಿದ್ಯುತ ಪ್ರಸರಣ ನಿಗಮ ನೌಕರರ ಸಂಘ ವತಿಯಿಂದ ಕೇಂದ್ರ ಸರಕಾರದ ವಿದ್ಯುತ್ ಕ್ಷೇತ್ರದ ಖಾಸಗೀಕರಣ ವಿರೋಧಿಸಿ ಕಪ್ಪು ಪಟ್ಟಿ ಧರಿಸಿ ಸೋಮವಾರ ಬನಹಟ್ಟಿ ಹೆಸ್ಕಾಂ ಕಛೇರಿ ಎದಿರು ನೌಕರರು ಹಾಗೂ ಅಧಿಕಾರಿಗಳು ಸಾಂಕೇತಿಕ ಪ್ರತಿಭಟನೆ ನಡೆಸಿದರು. 
ಈ ಸಂದರ್ಭದಲ್ಲಿ ಮಾತನಾಡಿದ ಹೆಸ್ಕಾಂ ಶಾಖಾಧಿಕಾರಿ, ಎಸ್. ಜಿ. ಕಲಕಂಬ, ಕೇಂದ್ರ ಸರಕಾರದ ಪ್ರಸ್ತಾಪಿತ ವಿದ್ಯುತ್ ಕಂಪನಿಗಳ ಖಾಸಗೀಕರಣವನ್ನು ಬಲವಾಗಿ ವಿರೋಧಿಸುತ್ತೇವೆ. ವಿದ್ಯುತ್ ಕ್ಷೇತ್ರದಲ್ಲಿ ಖಾಸಗೀಕರಣ ಮಾಡುತ್ತಿರುವುದು ಕಾರ್ಮಿಕ ವಿರೋಧಿ ನೀತಿಯಾಗಿದ್ದು ಹಾಗೂ ರೈತರು/ಜನಸಾಮಾನ್ಯರಿಗೂ ಹೊರೆಯಾಗುವುದರಿಂದ ಕೇಂದ್ರ ಸರಕಾರದ ಈ ಧೋರಣೆಯನ್ನು ಸಂಘಟನೆ ವಿರೋಧಿಸುತ್ತದೆ ಎಂದರು.
ಈ ಸಂದರ್ಭದಲ್ಲಿ  ಹಿರಿಯ ಸಹಾಯಕರಾದ ಕೆ. ಜಿ. ಬಿದರಿ, ಕಿರಿಯ ಅಭಿಯಂತರರಾದ ಮಹಾಂತೇಶ ಪಾಟೀಲ, ರಾಜೇಸಾಬ ಪಿ. ಡಿ., ಪಿ. ಆರ್. ಗೋಡಿ ಹಾಗೂ ಸಿಬ್ಬಂದಿಗಳು ಇದ್ದರು.