ಜಗದಾಳ ಗ್ರಾಮದಲ್ಲಿ ಕನಸಿನ ಮನೆ ಕಳೆದುಕೊಂಡ ಹಿರೇಮಠ ವೃದ್ಧ ಕುಟುಂಬ
ರಬಕವಿ-ಬನಹಟ್ಟಿ ತಾಲೂಕಿನ ಜಗದಾಳ ಗ್ರಾಮದ ಹಲವಾರು ಮನೆಗಳು ಭಾರಿ ಮಳೆಗೆ ಕುಸಿದು ಬಿದ್ದಿರುವದು.

ಭಾರಿ ಮಳೆಗೆ ತೀವ್ರ ಹಾನಿ: 200 ಕ್ಕೂ ಅಧಿಕ ಮನೆಗಳು ನೆಲಸಮ
ರಬಕವಿ-ಬನಹಟ್ಟಿ,ಅ18: ತಾಲೂಕಿನಾದ್ಯಂತ ಕಳೆದ ವಾರ ಧಾರಾಕಾರ ಸುರಿದ ಮಳೆಗೆ ಸುಮಾರು 200 ಕ್ಕೂ ಅಧಿಕ ಮನೆಗಳು ಕುಸಿದು ಬಿದ್ದಿವೆ. ಕೆಲ ಕುಟುಂಬಗಳ ರೋಧನೆಯಂತ ಹೇಳತೀರದು.
ಜಗದಾಳ ಗ್ರಾಮದ ವೃದ್ಧ ದಂಪತಿ ಮಹಾಂತಯ್ಯ ಹಾಗು ಚನ್ನಮ್ಮ ಹಿರೇಮಠ ಎಂಬುವರ ಮನೆ ಸಂಪೂರ್ಣ ಕುಸಿದು ಬಿದ್ದ ಪರಿಣಾಮ ಇವರ ಬದುಕನ್ನೇ ಬಯಲು ಮಾಡುವಲ್ಲಿ ಕಾರಣವಾಗಿದೆ.
ವಯೋವೃದ್ಧರಾಗಿರುವ ಇವರಿಗೆ ಮಕ್ಕಳಿಲ್ಲದೆ, ಕುಟುಂಬಕ್ಕೆ ಯಾವದೇ ಆಸರೆಯಿಲ್ಲ. ಮನೆ ಕಳೆದುಕೊಂಡು ಇದೀಗ ಮೂರ್ನಾಲ್ಕು ದಿನ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ. ಕೈಯಲ್ಲಿ ದುಡ್ಡಿಲ್ಲ. ದುಡಿಮೆಗೆ ಶಕ್ತಿಯಿಲ್ಲ. ಹೀಗಿದ್ದಾಗ ಮಾಸಿಕ ಬರುವ ಪಡಿತರ ಆಹಾರ ಧಾನ್ಯದಿಂದಲೇ ಇವರ ಬದುಕು. ಮುಂದಿನ ಭವಿಷ್ಯದ ಚಿಂತೆಯಲ್ಲಿ ತೀವ್ರ ಕಂಗಾಲಾಗುವಲ್ಲಿ ಮಳೆ ಕಾರಣವಾಗಿದ್ದು, ಜಗದಾಳ ಗ್ರಾಮವೊಂದರಲ್ಲಿಯೇ 25 ಕ್ಕೂ ಅಧಿಕ ಮನೆಗಳು ಕುಸಿದು ಬಿದ್ದಿವೆ.