ಪೊಲೀಸ್ ಪಾಟೀಲರಿಗೆ ವಸುದೇವ ಭೂಪಾಲಂ ಪ್ರಶಸ್ತಿ
ರಬಕವಿ-ಬನಹಟ್ಟಿ,ಸೆ13: ಬನಹಟ್ಟಿಯವರಾದ ಬಿಆರ್‍ಪಿ ಎಂದೇ ಖ್ಯಾತಿ ಪಡೆದಿರುವ ಹೆಸರಾಂತ ಸಾಹಿತಿ ಪ್ರೊ. ಬಿ.ಆರ್. ಪಾಟೀಲರು ಬರೆದ ಮಹಾವೃಕ್ಷ ಕಾದಂಬರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿಷ್ಠಿತ ವಸುದೇವ ಭೂಪಾಲಂ ಪ್ರಶಸ್ತಿ ನಾಗನೂರು ಶ್ರೀ ಶಿವಬಸವ ಸ್ವಾಮಿಗಳ ಬದುಕನ್ನು ಆಧರಿಸಿದ ಈ ಕಾದಂಬರಿಗೆ ಶ್ರೀಗಳ ಪುಣ್ಯತಿಥಿಯ ದಿನದಂದೇ ಪ್ರಶಸ್ತಿ ಬಂದುದು ಯೋಗಾಯೋಗ.
ಡಾ. ಗುರುಲಿಂಗ ಕಾಪಸೆಯವರು ಇದನ್ನು ಕಾಕತಾಳಿಯವಲ್ಲ. ಇದು ಅನುಭಾವಿಕ ಕಂಪನವೆಂದು ಕರೆದಿದ್ದಾರೆ. ಹಿರಿಯ ಸಾಹಿತಿ ಪ್ರೊ. ಬಿ.ಆರ್. ಪಾಟೀಲರು ಕಾವ್ಯ, ಲಾವಣಿ, ಕಥೆ, ಲಲಿತ ಪ್ರಬಂಧ, ನಾಟಕ, ಅಂಕಣ ಬರಹ, ವಿಮರ್ಶೆ, ಜೀವನ ಚರಿತ್ರೆ ಹೀಗೆ ಎಲ್ಲ ರಂಗಗಳಲ್ಲಿಯೂ ಸುಮಾರು 44 ರಾಜ್ಯ ಹಾಗು ರಾಷ್ಟ್ರಮಟ್ಟದ ಪ್ರಶಸ್ತಿಗಳನ್ನು ಪಡೆದುಕೊಂಡ ಅಪ್ರತಿಮ ವ್ಯಕ್ತಿತ್ವ ಬಿಆರ್‍ಪಿ ಆಗಿದ್ದಾರೆ.