ಎಸ್‍ಪಿಬಿ ನಿಧನಕ್ಕೆ ಗಾಯನ ಮೂಲಕ ಸಂತಾಪ
ರಬಕವಿ-ಬನಹಟ್ಟಿ,ಸೆ27: ದೇಶ ಕಂಡ ಶ್ರೇಷ್ಠ ಗಾಯಕರಲ್ಲಿ ಒಬ್ಬರಾದ ಎಸ್‍ಪಿ ಬಾಲಸುಬ್ರಹ್ಮಣ್ಯಂ ಅವರು ಇಹಲೋಕ ತ್ಯಜಿಸಿದ್ದಾರೆ. ಇವರ ನಿಧನಕ್ಕೆ ಕನ್ನಡಿಗರೆಲ್ಲರೂ ಕಂಬನಿ ಮಿಡಿದಿದ್ದಾರೆ. ತಮ್ಮ ಸುಮಧುರ ಕಂಠದಿಂದ 50 ಕ್ಕೂ ಅಧಿಕ ವರ್ಷಗಳಿಂದಲೂ ಎಲ್ಲ ಮನ ತಣಿಸಿದ ಅದ್ಭುತ ಸಹೃದಯಿ ಗಾಯಕ, ಲೆಜೆಂಡ್ ಎಸ್.ಪಿ. ಬಾಲಸುಬ್ರಹ್ಮಣ್ಯಂ ವಿಧಿವಶವಾಗಿರುವದು ತೀವ್ರ ಬೇಸರ ತರುವಂಥದ್ದು ಎಂದು ಗಾಯಕ ವಿನೋದ ಸುಟ್ಟಟ್ಟಿ ಹೇಳಿದರು.
ನಗರದ ದಿ. ಬಂಗಾರೆವ್ವ ತಟ್ಟಿಮನಿ ಸಮುದಾಯ ಭವನದಲ್ಲಿ ಡಾ. ರಾಜ್ ಮೆಲೋಡಿಸ್ ಹಾಗು ಗಾನಯೋಗಿ ಮೆಲೋಡಿಸ್ ತಂಡದಿಂದ ಎಸ್‍ಪಿಬಿಗೆ ನುಡಿ ನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿ, ಎಸ್‍ಪಿಬಿ ಅವರು ಹಾಡಿದ ಹಾಡುಗಳನ್ನು ದಿನವೊಂದರಂತೆ ಕೇಳಿದರೂ 113 ವರ್ಷಗಳೇ ಬೇಕು. ಇವರ ಕಂಠಸಿರಿಗೆ ಸಾಟಿ ಮತ್ತೊಬ್ಬರು ಇರಲಾರರು. ವಜ್ರದಂತ ಜಲಪಾತವನ್ನೂ ಕೊರೆಯುವ ಶಕ್ತಿ ಎಸ್‍ಪಿಬಿಯವರಿಗಿದೆ ಎಂದು ಹೇಳುವ ಅಭಿಮಾನಿಗಳ ಕೂಟಕ್ಕೆ ತುಂಬಲಾರದ ಹಾನಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ವೇದಿಕೆ ಮೇಲೆ ಶ್ರೀಶೈಲ ದಭಾಡಿ, ಶೇಖರ ಮಾಲಾಪುರ, ಬಾಹುರಾಜ ತುಬಚಿ, ಅಶೋಕ ಬೀಳಗಿ, ಮಲ್ಲಿಕಾರ್ಜುನ ತುಂಗಳ, ವಿಜಯ ಕರಡಿ, ಪ್ರವೀಣ, ಕಿರಣ ಆಳಗಿ, ಅರುಣ ಹಳ್ಯಾಳ, ಸುರೇಶ ಜವಳಗಿ, ರಾಜು ಶೀಲವಂತ, ಬಸವರಾಜ ನುಚ್ಚಿ, ಉಮೇಶ ಶೇಗುಣಸಿ, ಜಗದೀಶ ಕುಂಚನೂರ ಸೇರಿದಂತೆ ಅನೇಕರಿದ್ದರು. ಎಸ್‍ಪಿಬಿಯವರ ಸುಮಧುರ ಗಾಯನ ಮೂಲಕ ಸಂತಾಪ ಸೂಚಿಸಲಾಯಿತು.
ಪತ್ರಕರ್ತರ ನಿಧನಕ್ಕೆ ಸಂತಾಪ: ಜಮಖಂಡಿ ತಾಲೂಕಿನ ಕಾನಿಪ ಸಂಘದ ಉಪಾಧ್ಯಕ್ಷ ಶಿವಾಜಿ ಘೋರ್ಪಡೆ ಹಾಗೂ ಮತ್ತೋರ್ವ ಸಂಪಾದಕ ಇಲಾಹಿ ಮುಲ್ಲಾ ನಿಧನಕ್ಕೆ ರಬಕವಿ-ಬನಹಟ್ಟಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಸಂತಪ ವ್ಯಕ್ತಪಡಿಸಿದೆ.
ಈ ಸಂದರ್ಭದಲ್ಲಿ ಮಾತನಾಡಿದ ರಬಕವಿ-ಬನಹಟ್ಟಿ ಕಾನಿಪ ಅಧ್ಯಕ್ಷ ನೀಲಕಂಠ ದಾತಾರ, ಒಂದೇ ದಿನ ಇರ್ವರು ಸಂಪಾದಕರನ್ನು ಕಳೆದುಕೊಂಡಿದ್ದು ತುಂಬಾ ದುಃಖದ ಸಂಗತಿ. ಸಮಾಜದಲ್ಲಿನ ಅಂಕು ಡೊಂಕುಗಳನ್ನು ತಿದ್ದಿ ತಮ್ಮದೇಯಾದ ಬರವಣೆಗೆ ಮೂಲಕ ಹೆಸರುವಾಸಿಯಾಗಿದ್ದರು. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಅವರ ಕುಟುಂಬಕ್ಕೆ ಅವರ ಅಗಲಿಕೆಯ ದುಃಖವನ್ನು ಸಹಿಸಿಕೊಳ್ಳುವ ಶಕ್ತಿ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಈಶ್ವರ ಕರೋಳಿ, ಮಲ್ಲಿಕಾರ್ಜುನ ತುಂಗಳ, ಪ್ರಕಾಶ ಕುಂಬಾರ, ಗಂಗಯ್ಯ ಹಿರೇಮಠ, ವಿಶ್ವಜ ಕಾಡದೇವರ, ಕಿರಣ ಆಳಗಿ, ಚಂದ್ರಶೇಖರ ತುಂಗಳ, ಬಸವರಾಜ ಜಾಲೋಜಿ, ಚಿದಾನಂದ ಕಾರಜೋಳ, ಶಿವಾನಂದ ಮಹಾಬಳಶೆಟ್ಟಿ, ರಾಮು ಕಾಡಾಪೂರ, ಜೆ. ಯು. ಮೊಹಮ್ಮದ, ರವಿಂದ್ರ ಅಷ್ಟಗಿ, ಮಹಾದೇವ ತೋಟಗೇರ, ಬಸವರಾಜ ಪಟ್ಟಣ, ಎಸ್. ಎಂ. ಮೇಟಿ ಪಾಟೀಲ, ಶಂಬು ಗುಣಕಿ, ಮಾಳು ದುರ್ಗನ್ನವರ, ಮಹಾದೇವ ಕೋಪರ್ಡೆ, ಬಸವರಾಜ ಗಾಯಕವಾಡ ಸೇರಿದಂತೆ ಅನೇಕರು ಇದ್ದರು.

Social Plugin