ಆಲಮಟ್ಟಿ ಹಿನ್ನೀರಾದ ಹಿಪ್ಪರಗಿ ಜಲಾಶಯ ಮುಂಭಾಗದಲ್ಲಿ ಶಾಸಕ ಸಿದ್ದು ಸವದಿ ನೇತೃತ್ವದಲ್ಲಿ 4 ಲಕ್ಷ ಮೀನು ಮರಿ ಬಿಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಆಲಮಟ್ಟಿ ಹಿನ್ನೀರನಲ್ಲಿ 4 ಲಕ್ಷ ಮೀನು ಮರಿ ಬಿಟ್ಟ ಕಾರ್ಯಕ್ರಮ
ರಬಕವಿ-ಬನಹಟ್ಟಿ,ಸೆ13: ಸರ್ಕಾರದ ಯಾವದೇ ಕೆಲಸಗಳಿದ್ದರೂ ಅದಕ್ಕೆ ಸಾರ್ವಜನಿಕರ ಸಹಭಾಗಿತ್ವವಿರಬೇಕು. ಆಗ ಮಾತ್ರ ಯೋಜನೆ ಯಶಸ್ವಿಯಾಗಲು ಸಾಧ್ಯವೆಂದು ತೇರದಾಳ ಶಾಸಕ ಸಿದ್ದು ಸವದಿ ಹೇಳಿದರು.
ತಾಲೂಕಿನ ಹಿಪ್ಪರಗಿ ಜಲಾಶಯದ ಮುಂಭಾಗದಲ್ಲಿ ಮೀನುಗಾರಿಕೆ ಇಲಾಖೆಯಿಂದ ಹಮ್ಮಿಕೊಂಡಿದ್ದ ಮೀನು ಮರಿ ಬಿಡುವ ಕಾರ್ಯಕ್ರಮದಲ್ಲಿ ಆಲಮಟ್ಟಿ ಜಲಾಶಯದ ಹಿನ್ನೀರಿಗೆ ಮೀನು ಮರಿ ಬಿಟ್ಟು ಅವರು ಮಾತನಾಡಿದರು. ಆಲಮಟ್ಟಿ ಜಲಾಶಯ ಹಿನ್ನೀರ ವ್ಯಾಪ್ತಿಯಲ್ಲಿ ಮೀನುಗಾರಿಕೆ ನಿರಂತರವಾಗಿ ನಡೆಯುತ್ತದೆ. ಇತ್ತೀಚಿನ ದಿನಗಳಲ್ಲಿ ಮೀನುಗಳ ಸಂಖ್ಯೆ ಕಡಿಮೆಯಾಗಿತ್ತು. ಅಲ್ಲದೆ ಹರಿಯುವ ನೀರಿನಲ್ಲಿ ಮಾತ್ರ ಮೀನಿನ ಸಂತಾನೋತ್ಪತ್ತಿಯಾಗುತ್ತದೆ. ಹಿನ್ನೀರಿನಲ್ಲಿ ಮೀನಿನ ಸಂತಾನೋತ್ಪತ್ತಿ ಅಷ್ಟೊಂದು ಪ್ರಮಾಣದಲ್ಲಿ ಆಗಲ್ಲ. ಹೀಗಾಗಿ ಇಲಾಖೆಯಿಂದ ಬೇರಡೆಯಿಂದ ಮೀನಿನ ಮರಿಗಳನ್ನು ತಂದು ಬಿಡಲಾಗುತ್ತಿದೆ ಎಂದರು.
ಮೀನುಗಾರಿಕೆ ಇಲಾಖೆಯಿಂದ ಒಟ್ಟು 4 ಲಕ್ಷ ಮರಿಗಳನ್ನು ತರಲಾಗಿದ್ದು, ಪ್ರತಿಯೊಂದು ಮರಿಗಳು 80 ಎಂ.ಎಂ. ಗಾತ್ರದಿಂದ 3 ಇಂಚಿನವರೆಗೆ ಇದ್ದು 3 ರಿಂದ ನಾಲ್ಕು ತಿಂಗಳಲ್ಲಿ ಸುಮಾರು 4 ರಿಂದ 6 ಕೆಜಿ ತೂಕದವರೆಗೆ ಈ ಮರಿಗಳು ಬೆಳೆಯುತ್ತವೆ. ಇದರಿಂದ ಈ ಭಾಗದಲ್ಲಿ ಮೀನುಗಾರರು, ಮೀನು ತಿನ್ನುವವಗೂ ಅನುಕೂಲವಾಗಲಿದೆ ಎಂದರು.
ಮೀನುಗಾರಿಕೆಯೂ ಈಗ ದೊಡ್ಡ ಉದ್ಯಮವಾಗಿ ಬೆಳೆಯುತ್ತಿದೆ. ಜಲಾಶಯದ ಹಿನ್ನೀರಿನಲ್ಲಿ ಮೀನಿನ ಮರಿ ಬಿಡುವದರಿಂದ ಈ ಭಾಗದಲ್ಲಿ ಮೀನುಗಳ ಸಂಖ್ಯೆ ವೃದ್ಧಿಯಾಗಲಿದೆ. ಆಲಮಟ್ಟಿ ಜಲಾಶಯದ ಹಿನ್ನೀರಿನ ಮೀನುಗಳಿಗೆ ಬೇಡಿಕೆಯೂ ಹೆಚ್ಚಿದೆ ಎಂದರು.
ಜಿಪಂ ಸದಸ್ಯ ಪುಂಡಲೀಕ ಪಾಲಭಾಂವಿ, ಲಕ್ಕಪ್ಪ ಪಾಟೀಲ, ತಾಪಂ ಸದಸ್ಯೆ ಚನ್ನವ್ವ ಹೊಸಮನಿ, ಶಂಕರೆಪ್ಪ ಕಿತ್ತೂರ, ಚಿದಾನಂದ ಗೆಲಗೊಂಡ, ದಯಾನಂದ ಧರಿಗೊಂಡ, ಶಂಕರ ಹುನ್ನೂರ ಹಾಗು ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
Social Plugin