ಬನಹಟ್ಟಿಯ ಎಸ್‍ಆರ್‍ಎ ಕಾಲೇಜಿನ ವಿದ್ಯಾರ್ಥಿನಿ ಸಿಇಟಿ ಪರೀಕ್ಷೆಯಲ್ಲಿ ಜಿಲ್ಲೆಗೆ ದ್ವಿತೀಯ ಮತ್ತು ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದ ಸಹನಾ ಹಳಿಂಗಳಿಯನ್ನು ಉಪನ್ಯಾಸಕರು ಸನ್ಮಾನಿಸಿದರು.
ಪಾಲಕರಲ್ಲಿ ಮಕ್ಕಳ ಬಗ್ಗೆ ಕಾಳಜಿ ಇರಲಿ
ರಬಕವಿ-ಬನಹಟ್ಟಿ,ಅ30: ಮಕ್ಕಳ ಭವಿಷ್ಯ ರೂಪಿಸುವಲ್ಲಿ ಪಾಲಕರ ಜವಾಬ್ದಾರಿಯೂ ಕೂಡಾ ಮುಖ್ಯವಾಗಿರುತ್ತದೆ. ಪಾಲಕರಲ್ಲಿ ಮಕ್ಕಳ ಬಗ್ಗೆ ಕಾಳಜಿ ಇದ್ದರೆ ಅವರು ಇನ್ನಷ್ಟು ಹೆಚ್ಚಿನ ಫಲಿತಾಂಶ ನೀಡಬಲ್ಲರು ಎಂದು ಭೌತಶಾಸ್ತ್ರ ಉಪನ್ಯಾಸಕ ಪ್ರೋ.ಕೆ.ಎಚ್.ಸಿನ್ನೂರ ತಿಳಿಸಿದರು.
ಇಲ್ಲಿನ ಎಸ್‍ಆರ್‍ಎ ಕಾಲೇಜಿನ ವಿದ್ಯಾರ್ಥಿನಿ ಸಹನಾ ಹಳಿಂಗಳಿ ಸಿಇಟಿ ಪರೀಕ್ಷೆಯಲ್ಲಿ ಜಿಲ್ಲೆಗೆ ದ್ವಿತೀಯ ಮತ್ತು ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದ ನಿಮಿತ್ತವಾಗಿ ಹಮ್ಮಿಕೊಂಡ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿದ್ಯಾರ್ಥಿಗಳ ಫಲಿತಾಂಶವೇ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಗೆ ಸಹಾಯವಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಸತತ ಅಧ್ಯಯನ ಶೀಲರಾಗುವುದರ ಜೊತೆಗೆ ಆತ್ಮ ವಿಶ್ವಾಸವನ್ನು ಹೊಂದಿರಬೇಕು ಎಂದು ಪ್ರೋ.ಕೆ.ಎಚ್.ಸಿನ್ನೂರ ತಿಳಿಸಿದರು.
ಇದೇ ಸಂದರ್ಭದಲ್ಲಿ ಪೆÇ್ರ.ಬಿ.ನಾಗರಾಜ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಓದುತ್ತಿದ್ದೇವೆ ಎಂಬ ಕೀಳರಿಮೆ ವಿದ್ಯಾರ್ಥಿಗಳಲ್ಲಿ ಇರಬಾರದು. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಲ್ಲಿಯೂ ಕೂಡಾ ಸಾಕಷ್ಟು ಪ್ರತಿಭಾವಂತರು ಇದ್ದಾರೆ ಎಂದರು. ಎನ್.ಆರ್.ಮೀನಾಕ್ಷಿ, ಎಸ್.ಸಿ.ಚಾಂಗ್ಲೇರ್, ಮಂಜುನಾಥ ಆಲಗೂರ, ವಿನೀತ ಹಿರೇಮಠ, ಆಶಾ ಸಜ್ಜನ, ವಿಶ್ವನಾಥ ಕೋಲಾರ, ಶ್ರೀಶೈಲ ಬುದ್ನಿ, ಕುಮಾರ ಸಜ್ಜನ, ಬಸವರಾಜ ಜಂಬಗಿ, ಮಲ್ಲಪ್ಪ ಹಳಿಂಗಳಿ ಸೇರಿದಂತೆ ಅನೇಕರು ಇದ್ದರು.
Social Plugin