ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುವುದು ಸರಿಯಲ್ಲ : ಉಮಾಶ್ರೀ
ರಬಕವಿ-ಬನಹಟ್ಟಿ,ಅ13: 2019ನೇ ಸಾಲಿನ ಸಪ್ಟಂಬರನಲ್ಲಿ ನಡೆದ ಎನ್‍ಸಿವಿಟಿಯ ಐಟಿಐ ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶ ಇದುವರೆಗೂ ಪ್ರಕಟಗೊಂಡಿಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ಬಹಳಷ್ಟು ತೊಂದರೆಯಾಗುತ್ತಿದೆ. ಸರಕಾರ ಇಂತಹ ಸಮಸ್ಯೆಯನ್ನು ಆದಷ್ಟು ಬೇಗನೆ ಬಗೆ ಹರಿಸಬೇಕು ಎಂದು ಮಾಜಿ ಶಾಸಕಿ ಊಮಾಶ್ರೀ ಹೇಳಿದರು.
ಅವರು ಪತ್ರಿಕೆ ಜೊತೆಗೆ ಮಾತನಾಡಿ, ಒಟ್ಟಾರೆ 14000 ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದು, ಈ ಕುರಿತು ಪ್ರಧಾನ ಕಾರ್ಯದರ್ಶಿಯವರಿಗೂ ದೂರವಾಣಿ ಮೂಲಕ ವಿವರಣೆ ಕೊಟ್ಟಿದ್ದೇನೆ. ಹಾಗೂ ಫ್ಯಾಕ್ಸ್ ಮೂಲಕ ಪತ್ರ ಬರೆದಿದ್ದೇನೆ. ಈ ವಿಷಯಕ್ಕೆ ಸಂಬಂದಿಸಿದಂತೆ ಅಪ್ಲಿಯೇಟ್ ಆಗಿರುವ ಮತ್ತು ಆಗಿರದ ಹಾಗೂ ಕೆಲವು ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳು ಇಲಾಖೆಯ ಅನುಮೋದನೆ ಪಡೆದಿದ್ದು, ಇನ್ನೂ ಕೆಲವು ಸಂಸ್ಥೆಯ ವಿದ್ಯಾರ್ಥಿಗಳು ಅನುಮೋದನೆ ಪಡೆಯದೇ ಇದ್ದು, ಇವರುಗಳಲ್ಲಿ ಸುಮಾರು 769 ಜನ ಕಾನೂನಿನ ಮೊರೆಹೋಗಿರುತ್ತಾರೆ. ಕಾರಣ ಈ ವಿಷಯ ಗೊಂದಲದ ಗೂಡಾಗಿ ಸಮಸ್ಯೆ ಬಗೆ ಹರಿಸದೇ ಇದ್ದ ಕಾರಣ ಪರೀಕ್ಷಾ ಫಲಿತಾಂಶ ಘೋಷಿಸದೇ ತಟಸ್ಥವಾಗಿ ಉಳಿದಿದೆ.
ಕಾರಣ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಹಾಗೂ ಖಾಸಗಿ ಅನುಮೋದಿತ ಕೈಗಾರಿಕಾ ಸಂಸ್ಥೆಗಳು, ಸರಕಾರದ ನಿಯಮಗಳ ಪ್ರಕಾರ ವಿದ್ಯಾರ್ಥಿಗಳ ಅನುಮೋದನೆ ಪಡೆದಿರುತ್ತವೆ. ಆದರೆ ಈ ಗೊಂದಲದಲ್ಲಿ ಇವರ ಫಲಿತಾಂಶ ಕೂಡಾ ಬಂದಿಲ್ಲ.
ಕಾರಣ ಇಂತಹ ಸಂದರ್ಭದಲ್ಲಿ ಸರಕಾರ ಲಕ್ಷ ಕೊಡಬೇಕು. ಮಕ್ಕಳ ಭವಿಷ್ಯವನ್ನು ಎತ್ತಿ ಹಿಡಿಯಬೇಕು. ಈ ರೀತಿ ಗೊಂದಲಗಳನ್ನು ಸೃಷ್ಠಿ ಮಾಡಿ, ಮಕ್ಕಳ ಭವಿಷ್ಯದ ಜೊತೆ ಚಲ್ಲಾಟವಾಡುವುದು ಸರಿಯಲ್ಲ. ಕಾರಣ ಈಗಿಂದಿಗಲೇ ಸಂಬಂಧಪಟ್ಟ ಮಂತ್ರಿಗಳು, ಅಧಿಕಾರಿಗಳು ಎಚ್ಚೆತ್ತುಕೊಂಡು ಫಲಿತಾಂಶವನ್ನು ಕೊಡಬೇಕು ಎಂದು ಅವರು ಒತ್ತಾಯಿಸಿದರು.



Social Plugin