ಎಸ್‍ಎಸ್‍ಎಲ್‍ಸಿ ಪರೀಕ್ಷಾ ಕೇಂದ್ರಕ್ಕೆ ಒತ್ತಾಯ
ರಬಕವಿ-ಬನಹಟ್ಟಿ ತಾಲೂಕಿನಲ್ಲಿಯೇ ಎಸ್‍ಎಸ್‍ಎಲ್‍ಸಿ ಪರೀಕ್ಷಾ ಕೇಂದ್ರಕ್ಕೆ ಅನುಮತಿ ನೀಡಬೇಕೆಂದು ಸ್ಥಳೀಯ ವಿದ್ಯಾರ್ಥಿಗಳು ಸ್ಥಳೀಯ ತಹಶೀಲ್ದಾರರಿಗೆ ಮನವಿ ಅರ್ಪಿಸಿದರು.
ಇಲ್ಲಿನ ತಹಶೀಲ್ದಾರ ಕಚೇರಿ ಆವರಣದಲ್ಲಿ ತಹಶೀಲ್ದಾರ ಪ್ರಶಾಂತ ಚನಗೊಂಡರಿಗೆ ಮನವಿ ಅರ್ಪಿಸಿ ಮಾತನಾಡಿದ ವಿದ್ಯಾರ್ಥಿಗಳು, ಮೊದಲೇ ಕೊರೊನಾ ಹಾವಳಿ ಹಾಗು ಪರಿಪೂರ್ಣ ಪ್ರಮಾಣದಲ್ಲಿ ಬಸ್‍ಗಳಿಲ್ಲದೆ ತೀವ್ರ ಪರದಾಡುವಂತಾಗಿದೆ. ಇವೆಲ್ಲವನ್ನು ಪರಿಗಣನೆಗೆ ತೆಗೆದುಕೊಂಡು ಶಿಕ್ಷಣ ಇಲಾಖೆ ಹಾಗು ಬಾಗಲಕೋಟೆ ಜಿಲ್ಲಾಧಿಕಾರಿಗಳು ತಾಲೂಕಿಗೆ ಸಂಬಂಧ ಪರೀಕ್ಷಾ ಕೇಂದ್ರ ನೀಡಬೇಕೆಂದು ಮನವಿ ಮಾಡಿದರು.
ಇದೇ ಸಂದರ್ಭ ನಗರಸಭಾ ಸದಸ್ಯ ಓಂಪ್ರಕಾಶ ಮನಗೂಳಿ, ಅಶೋಕ ಹುಲ್ಲೆನ್ನವರ, ಮಾಂತು ಗೌಡಪ್ಪನವರ, ಆನಂದ ಕೋಳೂರ, ಭಾರತಿ ಗಳಗಂಟಿ, ಲಕ್ಷ್ಮಣ ಮಹಿಷವಾಡಗಿ, ಪ್ರಭು ತಿರಕಪಡಿ, ಶ್ರೀಶೈಲ ಗುಣದಾಳ, ಬಸವರಾಜ ಹಟ್ಟಿ ಸೇರಿದಂತೆ ಅನೇಕರಿದ್ದರು.
ಜಾಹಿರಾತುದಾರರು...
Social Plugin