ಇಂದು ಬಹೂತೇಕವಾಗಿ ಸರ್ಕಾರಿ ಆಸ್ಪತ್ರೆಗಳನ್ನು ಹೊರತುಪಡಿಸಿ ಖಾಸಗಿ ಆಸ್ಪತ್ರೆಗಳಲ್ಲಿ ಗರ್ಬಿನಿಯರಿಗೆ ಈ ಸಿಜೇರಿಯನ್ ಮಾಡುವ ವ್ಯವಸ್ಥೆ ಅವ್ಯಾಹತವಾಗಿ ಎಗ್ಗಿಲ್ಲದೆ ನಡೆಯುತ್ತಿದೆ. ಇದೊಂದು ಬಹೂದೊಡ್ಡ ಸಾಮಾಜಿಕ ಪಿಡುಗಾಗಿ ಬ್ರಷ್ಟಾಚಾರದ ಸ್ವರೂಪವನ್ನು ಪಡೆದುಕೊಂಡು ಯಾವ ಅಡೆತಡೆಯು ಇಲ್ಲದೆ ನಡೆಯುತ್ತಿದೆ. ನಾರ್ಮಲ ಡೆಲಿವರಿ ಆದರೆ ಈ ಖಾಸಗಿ ಆಸ್ಪತ್ರೆಗಳಿಗೆ ಯಾವ ಲಾಭವು ಇಲ್ಲವೆಂದು ಪರಿಗಣಿಸಿ ಹಗಲು ದರೋಡೆ ಮಾಡಲು ಠೊಂಕಕಟ್ಟಿ ನಿಂತಿವೆ. ಖಾಸಗಿ ಆಸ್ಪತ್ರೆಗಳಲ್ಲಿ ಒಬ್ಬ ಮಹಿಳೆಗೆ ಸಾಮಾನ್ಯವಾಗಿ ನಾರ್ಮಲ್ ಡೆಲಿವರಿ ಆದರೆ ಅಂದಾಜು ತಗಲುವ ವೆಚ್ಚ 5 ರಿಂದ 10 ಸಾವಿರ ಮಾತ್ರ. ಆದರೆ ಅವರೇನು ಮಾಡುತ್ತಿದ್ದಾರೆ !!!??? ಹೆಂತದ್ದೇ ಗರ್ಬಿನಿ ಕೇಸುಗಳು ಬಂದರು ಇಲ್ಲಸಲ್ಲದ ಸಬೂಬುಗಳನ್ನು ನೀಡಿ ಕತ್ರಿಯನ್ನು ಹಿಡಿದು ಕತ್ತರಿಸಲು ನಿಂತುಬಿಟ್ಟವೆ. ಹಾಗಾದರೇ ಕೋರೋನಾ ಹಾವಳಿಯಿಂದಾಗಿ ಕಳೆದ ನಾಲ್ಕೈದು ತಿಂಗಳಿನಲ್ಲಿ ಬಹೂತೇಕ ಹೇರಿಗೆಗಳಾಗಿದ್ದು ಸರ್ಕಾರಿ ಆಸ್ಪತ್ರೆಗಳಲ್ಲೇ. ಆ ಹೇರಿಗೆಯ ಬಹೂತೇಕ ಪ್ರತಿಶತ 100 ಕ್ಕೆ 99% ಹೇರಿಗೆಗಳು ನಾರ್ಮಲ್ ಡೆಲಿವರಿ. ಇವೆಲ್ಲಾ ಯಾಕಾದವೂ ? ಅಲ್ಲೇಕೆ ಸಿಜೇರಿಯನ್ನ ಆಗಲಿಲ್ಲ ??? ಸ್ನೇಹಿತರೆ ಇದು ಚಿಂತಿಸುವ ವಿಷಯವಲ್ಲವೇ ??? ಒಂದು ಸಾರಿ ಯೋಚಿಸಿ, ಒಂದು ಮಧ್ಯಮ ವರ್ಗದ ಕುಟುಂಬ, ಬಡ ಕುಂಟುಂಬ ಸರಕಾರಿ ಆಸ್ಪತ್ರೆ ಶುಚಿಯಾಗಿಲ್ಲವೆಂದುಕೊಂಡು ಖಾಸಗಿ ಆಸ್ಪತ್ರೆಗಳಿಗೆ ತಮ್ಮ ಮನೆಯ ಹೆಣ್ಣುಮಕ್ಕಳನ್ನು ಸೇರಿಸಿದರೆ 5 ಸಾವಿರದಲ್ಲಾಗುವ ಚಿಕೆತ್ಸೆಯ ವೆಚ್ಚ 50000 ರೂಪಾಯಿಗಳು. ಹಾಗಾದರೇ ಆ ಮಧ್ಯಮ ವರ್ಗದ ಕುಟುಂಬ ಆ ವೆಚ್ಚವನ್ನು ಬರಿಸುವುದಾದರೂ ಹೇಗೆ ? ಅವನಿಗೆ ಹೆರಿಗೆಗೆ ಇಷ್ಟು ಖರ್ಚಾಗುತ್ತದೆ ಎನ್ನುವ ಯಾವ ಅಂದಾಜು ಇರುವುದಿಲ್ಲ. ಮತ್ತದೆ ಸಾಲ, ಮಾನಸಿಕ ಒತ್ತಡ ಕಿರಿಕಿರಿ ... ಪ್ರಸ್ತುತ ಸನ್ನಿವೇಶಗಳನ್ನು ನೋಡುತ್ತಿದ್ದರೆ ಯಾವ ಆಸ್ಪತ್ರೆಗಳಿಗೂ ಸಾಮಾಜಿಕ ಬದ್ಧತೆಗಳಿಲ್ಲ, ಸೇವೆಯ ಕೊಟ್ಟು ಅದಕ್ಕೆ ತಕ್ಕುದಾದ ಮೊತ್ತವನ್ನು ಮಾತ್ರ ಪಡೆಯಬೇಕೆಂಬ ಯಾವ ಮೌಲ್ಯಗಳು ಉಳಿದಿಲ್ಲ. ಅದು ಕೇವಲ ಈಗ ಸಂಪಾದನೆ ಮಾಡಲು ಆರಿಸಿಕೊಂಡ ವ್ಯಾಪಾರದ ವಾಮಮಾರ್ಗವಾಗಿ ಹೋಗಿಬಿಟ್ಟಿದೆ. ಎಲ್ಲಿಯವರೆಗೆ ಇದೇ ವ್ಯವಸ್ಥೆಯಲ್ಲಿ ಜನಸಾಮಾನ್ಯರು ನೋಡುತ್ತ ಕೂರುವುದು ? ಯಾವಾಗ ಇವೆಲ್ಲಾ ಸುಧಾರಿಸುವುದು ? ಇದು ಕೇವಲ ಕೆಲವರದ್ದೆ ಜವಾಬ್ಧಾರಿಯೇ ??? ಎಲ್ಲ ಗರ್ಬಿನಿಯರಿಗೆ ಸಿಜೇರಿಯನ್ನ ಮಾಡುತ್ತ ಹೋದರೆ ಭಾರತದ ಮುಂದಿನ ಭವಿಷ್ಯವೇನು ? ಅದನ್ನು ಮಾಡುವುದರಿಂದ ಅವರಲ್ಲಿ ತಮ್ಮ ದೇಹದಲ್ಲಾಗುವ ದೈಹಿಕ ತೊಂದರೆಗಳನ್ನು, ಮತ್ತು ಮಿತಿಮೀರಿದ ಬೊಜ್ಜನ್ನು ಹೇಗೆ ತಾನೆ ನಿಬಾಯಿಸಿಯಾಳು ? ಅವಳ ದೈಹಿಕ ಸಾಮರ್ಥ್ಯ ಯಾವ ರೀತಿಯಲ್ಲಿ ಕುಂದುತ್ತದೆ ಎನ್ನುವುದು ಅನುಭವಿಸುತ್ತಿರುವ ತಾಯಂದಿರಿಗೆ ಗೊತ್ತು...
*ನಾವೇನು ಮಾಡಬಹುದು*:
1. ಮೊಟ್ಟಮೊದಲನೆಯದಾಗಿ ಗರ್ಬಿನಿಯಾಗಿರುವ ಹೆಣ್ಣುಮಗಳಿಗೆ ಅದರ ಸ್ಥಿತಿಗತಿಗಳ ಸ್ಪಸ್ಟ ಚಿತ್ರಣ ನೀಡಿ ಆಂತರಿಕವಾಗಿ ಸುಸ್ಥಿರ ಮತ್ತು ಸಬಲರಾಗಿರಲು ತಿಳಿಸುವುದು, ಪ್ರತಿನಿತ್ಯದ ಜೀವನಕ್ರಮದಲ್ಲಿ ಗರ್ಬಿನಿ ಮಹಿಳೆಯು ತೆಗೆದುಕೊಳ್ಳುವ ಆಹಾರ ಕ್ರಮ ಮತ್ತು ಯಾವೆಲ್ಲ ವ್ಯಾಯಾಮವನ್ನು ಅನುಸರಿಸಬೇಕು ಎನ್ನುವುದನ್ನು ತೀಳಿಹೇಳುವುದು. 2. ಸರಕಾರಿ ಆಸ್ಪತ್ರೆಗಳಿಗೆ ಬೇಟಿಕೊಟ್ಟಾಗ ನಮ್ಮದೆ ಮನೆ ಎಂಬಂತೆ ವರ್ತಿಸಿ ಶುಚಿಯಾಗಿಡಲು ಪ್ರಯತ್ನಿಸುವುದು. 3. ಸರಕಾರಿ ಆಸ್ಪತ್ರೆಯಲ್ಲಿ ಯಾವುದೋ ಒಂದು ವ್ಯವಸ್ಥೆ ಸರಿಯಾಗಿಲ್ಲವೆಂದು ಪದೇ ಪದೇ ಅದನ್ನೇ ದೂರುತ್ತ ಕಾಲಹರಣ ಮಾಡುವ ಬದಲು ಅದನ್ನು ಸರಿಮಾಡಲು ಯಾವ ಕ್ರಮ ಉತ್ತಮವೆಂದು ಮನಗಂಡು ಸರಿಪಡಿಸಲು ಮುಂದಾಗುವುದು. 4. 20 ನೇಯ ಶತಮಾನದಲ್ಲಿದ್ದೇವೆ, ಅಂತರ್ಜಾಲ ವ್ಯವಸ್ಥೆ ಸಾಕಷ್ಟು ಸುಧಾರಿಸಿದೆ, ಅವ್ಯವಸ್ಥೆಗಳ ಬಗ್ಗೆ ಕೇವಲ ಒಂದು ಟ್ವಿಟ್ ಮಾಡಿದರೂ ಸಂಭಂಧಪಟ್ಟ ಅಧಿಕಾರಿಗಳು ತಕ್ಷಣವೇ ಸ್ಪಂದಿಸುತ್ತಾರೆ. ನಾವದನ್ನೂ ಸರಿಯಾದ ಮಾರ್ಗದಲ್ಲಿ ಉಪಯೋಗಿಸಿ ಸಂಬಂಧಪಟ್ಟವರ ಗಮನಕ್ಕೆ ತರಬಹೂದಲ್ಲ. 5. ಖಾಸಗಿ ವೈಧ್ಯಕೀಯ ಸಂಸ್ಥೇಗಳು ಯಾವೆಲ್ಲಾ ರೀತಿಯಾಗಿ ಜನರನ್ನು ದೋಚುತ್ತಿವೆ, ಜನರು ಯಾವ ರೀತಿಯಾಗಿ ತೊಂದರೆಗಳಿಗೆ ಇಡಾಗುತ್ತಿದ್ದಾರೆ ಎನ್ನುವುದನ್ನು ಸರಕಾರದ ಗಮನಕ್ಕೆ ತಂದು ಕಠಿನ ಕ್ರಮ ಜಾರಿಯಾಗುವಂತೆ ಮಾಡುವುದು. 6. ಯಾವ ಯಾವ ಚಿಕಿತ್ಸೆಗೆ ಎಷ್ಟೇಷ್ಟು ಮೊತ್ತ ತೆಗೆದುಕೊಳ್ಳಬೇಕು ಎನ್ನುವುದನ್ನು ಸರಕಾರದ ನಿರ್ದೇಶನದಂತೆ ರೂಲ'ನ್ನು ಜಾರಿಗೆತಂದು ದರವನ್ನು ನಿಗದಿಪಡಿಸುವುದು. ಹೆಚ್ಚಿನ ಮೊತ್ತವನ್ನು ತೆಗೆದುಕೊಂಡರೆ ದಂಡವನ್ನು ವಿದಿಸುವುದು. ಪದೇಪದೇ ಅದೇ ಪುನರಾವರ್ತಿತವಾಗುತ್ತಿದ್ದರೆ ಅಂತಹ ಆಸ್ಪತ್ರೆಗಳು ಲೈಸನ್ಸ ರದ್ದುಮಾಡುವುದು.
Social Plugin