ರಬಕವಿ-ಬನಹಟ್ಟಿ,ಅ21: ಕಾಲುವೆ ರಸ್ತೆ ದುರಸ್ತಿಗೆ ರೈತರಿಂದ ಮನವಿ *ದುರಸ್ಥಿ ಮಾಡಲು ಮುಂದಾದ ಡಾ. ನಾಡಗೌಡ  

 
ರಬಕವಿಯ ನೀರಾವರಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಜೆ.ಡಿ. ರಾಠೋಡರಿಗೆ ರಸ್ತೆ ದುರಸ್ಥಿಗಾಗಿ ಮನವಿ ಅರ್ಪಿಸಿದರು.


ಜಾಹಿರಾತುದಾರರು : ಗಂಗೋತ್ರಿ ನರ್ಸರಿ. ಬೆಳಗಾವಿ ರೋಡ ಚಿಕ್ಕೋಡಿ, ಮಾಲಿಕರು : ಕಲ್ಮೇಶ. ಶೇಡಬಾಳ. ಎಲ್ಲ ತರಹದ ತೋಟಗಾರಿಕೆಯ ಸಸಿಗಳು ಸಿಗುತ್ತವೆ ಹಾಗೂ ಸುಪ್ರಸಿದ್ಧ ಗಾರ್ಡನ್ ತಯಾರಕರು.ಸಂಪರ್ಕಿಸಿ : 9482919983.... 9535719053...ಜಾಹಿರಾತುದಾರರು ; ಇನಾಮದಾರ ಡಿಜಿಟಲ್ ಸೌಂಡ್ ಸರಕಾರಿ ಕನ್ನಡ ಶಾಲೆ ಹಿಂದೆ ತೇರದಾಳ ಮಾಲಿಕರು : ಸರವರ್‍ಖಾನ್. ಡಿ. ಇನಾಮದಾರ ಎಲ್ಲ ತರಹದ ಸೌಂಡ್ ಸಿಸ್ಟಿಮ್‍ಗಳಿಗಾಗಿ ಸಂಪರ್ಕಿಸಿ : 9036074811.. 9118206411...ಜಾಹಿರಾತುದಾರರು : ಮಾಳಿ ಆಟೋಮೋಬೈಲ್ಸ, ಎಲ್ಲ ತರಹದ ದ್ವೀಚಕ್ರ ವಾಹನಗಳ ಬಿಡಿ ಭಾಗಗಳ ಮಾರಾಟಗಾರರು, ಮಾಲಿಕರು ಶ್ರೀ ರವಿಕುಮಾರ ಮಾಳಿ. ಗಂಗಾಧರ ಮಠದ ಹತ್ತಿರ,ಕಲ್ಲಟ್ಟಿ ,ತೇರದಾಳ...ಸಂಪರ್ಕಿಸಿ 9845984515ಜಾಹಿರಾತುದಾರರು : ಶ್ರೀ ಬಸವಪ್ರಭು ಸೂಪರ್ ಮಾರ್ಕೇಟ, ಎಲ್ಲ ತರಹದ ಕಿರಾಣಿ ವಸ್ತುಗಳಿಗಾಗಿ ಸಂಪರ್ಕಿಸಿ, ಮಾಲಿಕರು ಶ್ರೀ ಜಗದೀಶ ಎಸ್.ಮುಕುಂದ ,ಐ.ಸಿ.ಐ.ಸಿ.ಐ ಬ್ಯಾಂಕ ಹತ್ತಿರ ತೇರದಾಳ.ಸಂಪರ್ಕಿಸಿ. 9448960175ಜಾಹಿರಾತುದಾರರು : ಜಡಿ ಹಾರ್ಡವೇರ್ ,ಎಲ್ಲ ತರಹದ ಹಾರ್ಡವೇರ್,ಫ್ಲೈವುಡ್,ಹಾಗೂ ಡೋರ್ಸಗಳಿಗಾಗಿ ಸಂಪರ್ಕಿಸಿ 9008064547,8123556540 

 ಕಾಲುವೆ ರಸ್ತೆ ದುರಸ್ತಿಗೆ ರೈತರಿಂದ ಮನವಿ *ದುರಸ್ಥಿ ಮಾಡಲು ಮುಂದಾದ ಡಾ. ನಾಡಗೌಡ 

ರಬಕವಿ-ಬನಹಟ್ಟಿ,ಅ21: ಕಳೆದ 10 ವರ್ಷಗಳಿಂದ ಹೊಸೂರು ಗ್ರಾಮದ 27ನೇ ವಾರ್ಡಿನ ಕಾಲುವೆ ರಸ್ತೆ ಕಾಮಗಾರಿ ಹಾಗು ಸುಧಾರಣೆ ಕ್ರಮ ಕೈಗೊಳ್ಳದ ಕಾರಣ ಈ ಭಾಗದ ರೈತರಿಗೆ ತಮ್ಮ ಹೊಲಗಳಿಗೆ ತೆರಳಲು ತೀವ್ರ ಸಮಸ್ಯೆ ಎದುರಾಗುತ್ತಿದೆ ಎಂದು ರೈತರು ಶುಕ್ರವಾರ ರಬಕವಿಯ ನೀರಾವರಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಿಗೆ ಮನವಿ ನೀಡಿದರು. ಸುಮಾರು ಒಂದುವರೆ ಕಿ.ಮೀ.ನಷ್ಟು ಕಾಮಗಾರಿಗೆ ಹಲವಾರು ಬಾರಿ ಮನವಿ ಮಾಡಿದರೂ ಯಾವದೇ ಪ್ರಯೋಜನವಾಗಿಲ್ಲ. ಮಳೆಗಾಲ ಕಾರಣ ರೈತರ ಭೂಮಿಗಳಿಗೆ ತೆರಳಲು ತೀವ್ರ ಸಮಸ್ಯೆಯುಂಟಾಗುತ್ತಿದೆ. ತಕ್ಷಣವೇ ಕಾಮಗಾರಿ ನಡೆಸಬೇಕೆಂದು ಮನವಿ ಮಾಡಿದರು. ಇದಕ್ಕೂ ಮೊದಲು ಸಮಾಜ ಸೇವಕರಾದ ರಬಕವಿಯ ತ್ರಿಶಲಾದೇವಿ ನೇತ್ರ ಆಸ್ಪತ್ರೆ ವೈದ್ಯ ಡಾ. ಪದ್ಮಜೀತ ನಾಡಗೌಡಾ ಪಾಟೀಲರಿಗೆ ಈ ಭಾಗದ ರೈತರು ಮನವಿ ಮೂಲಕ ಕೆಲಸ ನಿರ್ವಹಿಸುವಂತೆ ಮನವಿ ಮಾಡಿದ್ದರು. ಇದಕ್ಕೆ ಪೂರಕವಾಗಿ ಡಾ. ನಾಡಗೌಡ ಸ್ಥಳೀಯ ನೀರಾವರಿ ಇಲಾಖೆಗೆ ಮನವಿ ಪತ್ರದ ಮೂಲಕ ಕಾಲುವೆ ರಸ್ತೆ ದುರಸ್ಥಿ ಅಥವಾ ಗರಸು ಹಾಕುವಲ್ಲಿ ಅನುಮತಿ ನೀಡಬೇಕೆಂದು ಪತ್ರದ ಮುಖೇನ ತಿಳಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ಯಾವದೇ ಉತ್ತರ ನೀಡಿಲ್ಲ. ಒಟ್ಟಾರೆ ಈ ಭಾಗದ ರೈತರಿಗೆ ಸುಗಮವಾಗಿ ತೆರಳಲು ರಸ್ತೆ ನಿರ್ಮಾಣವಾಗಬೇಕಿದೆ. ಇದಕ್ಕೆ ಸಂಬಂಧ ಬೇಗನೇ ಕಾಮಗಾರಿ ಪ್ರಾರಂಭಿಸಬೇಕೆಂದು ಒತ್ತಾಯಿಸಿದ್ದಾರೆ. ಇದೇ ಸಂದರ್ಭ ನಿಂಗಪ್ಪ ಗೌಡಪ್ಪನವರ, ಸಂಗಪ್ಪ ಗೌಡಪ್ಪನವರ, ಶ್ರೀಶೈಲ ಮೇಟಿ, ಕಲ್ಲಪ್ಪ ಅರಕೇರಿ, ಜಗದೀಶ ರೇವಣಿ, ವಿನಾಯಕ ಪೂಜಾರಿ, ರಾಘವೇಂದ್ರ ಗೋಠೆ, ಸತೀಶ ರೇವಣಿ, ಸಿದ್ದಪ್ಪ ಜಗದಾಳ, ನಂಜುಂಡಿ ಬಿರಡಿ ಸೇರಿದಂತೆ ಅನೇಕ ರೈತರಿದ್ದರು .

ಜಾಹಿರಾತು...