ರಬಕವಿ-ಬನಹಟ್ಟಿ ಸಮೀಪದ ಹಳಿಂಗಳಿ ಗ್ರಾಮದ ಭದ್ರಗಿರಿ ಬೆಟ್ಟದಲ್ಲಿ ಬಾಪು ಅಪ್ಪಾ ಹಣಾಣೆ(79) ಸಲ್ಲೇಖನ ಸಮಾದಿ ಮರಣಹೊಂದಿದರು. ಜೈನ ಮುನಿ ಕುಲರತ್ನಭೂಷಣ ಮಹಾರಾಜರು ಇದ್ದರು.
ಹಳಿಂಗಳಿಯಲ್ಲಿ ನಿವೃತ್ತಿ ಹೊಂದಿ ಬಂದ ಯೋಧ ಸಲ್ಲೇಖನ ಮರಣ ಸ್ವಿಕಾರ
ರಬಕವಿ-ಬನಹಟ್ಟಿ,ಅ17: ತಾಲೂಕಿನ ಹಳಿಂಗಳಿ ಭದ್ರಗಿರಿ ಬೆಟ್ಟದಲ್ಲಿ ಅ.15 ರಂದು ಜೈನ ಸಮುದಾಯದ ಹಿರಿಜೀವಿಯೊಬ್ಬರು ಸಲ್ಲೇಖನ ಮರಣ ಸ್ವಿಕರಿಸಿ ಜೀವನದ ಪಯಣ ಮುಗಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಕಾಗವಾಡ ನಗರದಿಂದ ಅ.10 ರಂದು ಹಳಿಂಗಳಿ ಭದ್ರಗಿರಿ ಬೆಟ್ಟದ ಜೈನ ಮುನಿ ಕುಲರತ್ನಭೂಷಣ ಮಹಾರಾಜರ ಸಮ್ಮುಕದಲ್ಲಿ ಸಲ್ಲೇಖನ ವೃತ ಸ್ವಿಕರಿಸಿದ್ದ ಸೇನೆಯಿಂದ ನಿವೃತ್ತಿ ಹೊಂದಿ ಬಂದು ಬಹುದಿನಗಳಿಂದ ಕಾಗವಾಡದಲ್ಲಿಯೇ ವಾಸವಾಗಿದ್ದ ಬಾಪು ಅಪ್ಪಾ ಹಣಾಣೆ(79) ಅ.15 ರಂದು ಮಧ್ಯಾಹ್ನ ಸಲ್ಲೇಖನ ಸಮಾದಿ ಮರಣ ಹೊಂದಿದರು. ಇವರಿಗೆ ಬೆಟ್ಟದ ಮುನಿ ಕುಲರತ್ನಭೂಷಣ ಮಹಾರಾಜರು ಸಲ್ಲೇಖನ ಕೊಟ್ಟಿದ್ದರು. ಮರಣಹೊಂದಿದ ಬಳಿಕ ತೇರದಾಳ ಸರ್ಕಾರಿ ಆಸ್ಪತ್ರೆಯಿಂದ ಇವರ ವೈದ್ಯಕೀಯ ಪರೀಕ್ಷೆ ಕೂಡಾ ನಡೆಯಿತು ಎಂದು ಜೈನ ಸಮುದಾಯದ ಮುಖಂಡರು ಪತ್ರಿಕೆಗೆ ತಿಳಿಸಿದರು.
1941 ರಲ್ಲಿ ಜನಿಸಿದ ಇವರು 1963 ರಲ್ಲಿ ಸೇನೆಗೆ ಸೇರಿ, 1965 ರಲ್ಲಿ ಭಾರತ-ಪಾಕ್ ನಡುವೆ ನಡೆದ ಯುದ್ದದಲ್ಲಿ ಹೋರಾಡಿದ್ದರು ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ.
ಜಾಹಿರಾತು...
Social Plugin