ಬನಹಟ್ಟಿಯಲ್ಲಿ ಡಿ.ಕೆ. ಶಿವಕುಮಾರ ಅಧಿಕಾರ ಸ್ವೀಕಾರದ ಡಿಜಿಟಲ್ ಕಾರ್ಯಕ್ರಮದಲ್ಲಿ ಡಾ. ಪದ್ಮಜೀತ ನಾಡಗೌಡ ಪಾಟೀಲ ಮಾತನಾಡಿದರು.
-ಬನಹಟ್ಟಿಯ ಭದ್ರನ್ನವರ ಸಮುದಾಯ ಭವನದಲ್ಲಿ ಪ್ರತಿಜ್ಞಾ ದಿನ ಕಾರ್ಯಕ್ರಮ ನಿಮಿತ್ತ ತೇರದಾಳ ಕ್ಷೇತ್ರದ ಕಾರ್ಯಕರ್ತರು ವೀಕ್ಷಣೆ ನಡೆಸಿದರು.
ಕಾಂಗ್ರೆಸ್ ಚುಕ್ಕಾಣಿ ಹಿಡಿದ ಡಿಕೆಶಿಯಿಂದ ಆನೆಬಲ
ರಬಕವಿ-ಬನಹಟ್ಟಿ,ಜು2: ದೇಶದಲ್ಲಿಯೇ ಐತಿಹಾಸವಾಗಿ ಡಿಜಿಟಲ್ ಮೂಲಕ ಪದಗ್ರಹಣ ಕಾರ್ಯಕ್ರಮದ `ಪ್ರತಿಜ್ಞಾ ದಿನ’ ಕಾರ್ಯಕ್ರಮವು ದೇಶವಷ್ಟೇ ಅಲ್ಲದೆ ಇಡೀ ಜಗತ್ತಿಗೇ ಮಾದರಿಯಾಗುವ ನಿಟ್ಟಿನಲ್ಲಿ ಪ್ರಪ್ರಥಮ ಬಾರಿಗೆ 20 ಲಕ್ಷಕ್ಕೂ ಅಧಿಕ ಜನರು ಡಿಜಿಟಲ್ ಮೂಲಕ ವೀಕ್ಷಣೆ ಮಾಡಿ ಭೂತ್ ಮಟ್ಟದಲ್ಲಿ ಕಾರ್ಯಕ್ರಮ ನಿಯೋಜನೆ ಮಾಡಿರುವದು ನಿಜಕ್ಕೂ ಮಾದರಿ. ರಾಜ್ಯದಲ್ಲಿ ಕಾಂಗ್ರೆಸ್‍ನ ಸಾರಥಿಯಾದ ಡಿ.ಕೆ. ಶಿವಕುಮಾರ ಅವರಿಂದ ಬೇರುಮಟ್ಟದ ಕಾರ್ಯಕರ್ತರ ಪಡೆಗೆ ಆನೆಬಲ ಬಂದಂತಾಗಿದೆ ಎಂದು ಕಾಂಗ್ರೆಸ್ ಧುರೀಣ ಡಾ. ಪದ್ಮಜೀತ ನಾಡಗೌಡಾ ಪಾಟೀಲ ಹೇಳಿದರು.
ಇಂದು ನಗರದ ಭದ್ರನ್ನವರ ಸಮುದಾಯ ಮಂಟಪದಲ್ಲಿ ಏರ್ಪಡಿಸಿದ್ದ ಪ್ರತಿಜ್ಞಾ ಪದಗ್ರಹಣದ ಡಿಜಿಟಲ್ ಕಾರ್ಯಕ್ರಮ ನಂತರ ಅವರು ಮಾತನಾಡಿದರು. ಡಿ.ಕೆ. ಶಿವಕುಮಾರರ ಅಧಿಕಾರ ಸ್ವೀಕಾರ ಅಷ್ಟೇ ಅಲ್ಲ ದೇಶ ಹಾಗು ರಾಜ್ಯದಲ್ಲಿ ಕಾಂಗ್ರೆಸ್ಸಿಗೆ ಭದ್ರಬುನಾದಿಯಾಗುವ ಸಂಕೇತವಾಗಿದೆ ಎಂದರು.
ಪಕ್ಷದ ಮುಖಂಡ ಶಂಕರ ಸೊರಗಾಂವಿ ಮಾತನಾಡಿ, ಒಗ್ಗಟ್ಟಿನ ಮಂತ್ರದೊಂದಿಗೆ ಪಕ್ಷದ ರಾಜ್ಯ ಕಾರ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಡಿ.ಕೆ. ಶಿವಕುಮಾರ ಪಕ್ಷಕ್ಕೆ ಹೊಸ ಆಯಾಮ ಸೃಷ್ಟಿಸುವ ಮೂಲಕ ಯುವಕರ ಪಡೆಗೆ ಸ್ಪೂರ್ತಿದಾಯಕ ಹಾಗು ಹಿರಿಯರ ವಿಶ್ವಾಸದೊಂದಿಗೆ ಮುಂಬರುವ ಚುನಾವಣೆಯಲ್ಲಿ ವಿಪಕ್ಷಗಳಿಗೆ ನಡುಕ ಹುಟ್ಟಿಸಿದ್ದಾರೆಂದರು. ವಿಪಕ್ಷವಾದ ಬಿಜೆಪಿ ಹಲವಾರು ಲಾಭಿ ನಡೆಸಿ ಅವರ ಮೇಲೆ ಸಿಬಿಐ, ಐಡಿಯಂತಹ ಇಲಾಖೆಗಳನ್ನು ಛೂ ಬಿಟ್ಟು ಕಿರುಕುಳ ನೀಡಿದರೂ ಯಾವದಕ್ಕೂ ಜಗ್ಗದೆ ರಾಷ್ಟ್ರೀಯ ಕಾಂಗ್ರೆಸ್ ಮುಖಂಡರ ವಿಶ್ವಾಸದೊಂದಿಗೆ ರಾಜ್ಯದಲ್ಲಿ ಪಕ್ಷ ಬಲವರ್ಧನೆಗೆ ಮತ್ತಷ್ಟು ಗಟ್ಟಿ ಧ್ವನಿಯಾಗಿ ನಿಂತಿದ್ದು ಹೆಮ್ಮೆ ಎಂದರು.
ಯುವ ಮುಖಂಡ ಗಂಗಪ್ಪ ಮಂಟೂರ ಮಾತನಾಡಿ, ರಾಜ್ಯದ ಯುವಕರ ಪಡೆಯ ಕನಸು ಇದೀಗ ನನಸಾಗಿ ಡಿ.ಕೆ. ಶಿವಕುಮಾರ ಅಧಿಕಾರ ಸ್ವೀಕಾರದಿಂದ ಪಕ್ಷದಲ್ಲಿ ಹೊಸ ಸಂಚಲನ ಸೃಷ್ಟಿಯಾಗಿದೆ ಎಂದರು.
ಯೋಜನಾ ಪ್ರಾಧಿಕಾರ ಮಾಜಿ ಅಧ್ಯಕ್ಷ ದುಂಡಪ್ಪ ಕರಿಗಾರ, ಭೀಮಶಿ ಪಾಟೀಲ, ಚಿದಾನಂದ ಗಾಳಿ, ಹುಮಾಯೂನ್ ಮುಲ್ಲಾ, ಮಲಕಯ್ಯ ಬಂಗಿ, ಚಿದಾನಂದ ಮಟ್ಟಿಕಲ್ಲಿ, ಶ್ರೀಕಾಂತ ಮದುಮಕ್ಕಳನವರ, ಕುಬೇರ ಸಾರವಾಡ, ವಿಶ್ವನಾಥ ಚಿಂಚಖಂಡಿ, ಚನಮಲ್ಲಪ್ಪ ಮೂಲಿಮನಿ, ಶಂಕರ ಪಾಟೀಲ ಸೇರಿದಂತೆ ಅನೇಕರಿದ್ದರು.
- ನಿಮ್ಮ ಜಾಹೀರಾತುಗಳಿಗಾಗಿ ಸಂಪರ್ಕಿಸಿ +91 9902523698

Social Plugin