ಬನಹಟ್ಟಿಯ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪದಗ್ರಹಣದ ಡಿಜಿಟಲ್ ಕಾರ್ಯಕ್ರಮದಲ್ಲಿ ಪಕ್ಷದ ಮುಖಂಡರು ಹಾಗು ಕಾರ್ಯಕರ್ತರು ವೀಕ್ಷಣೆ ಸಮಾರಂಭವನ್ನು ಮಾಜಿ ಸಚಿವೆ ಉಮಾಶ್ರೀ ಉದ್ಘಾಟಿಸಿದರು.
ಡಿಕೆಶಿ ಬಲದಿಂದ ಕಾಂಗ್ರೆಸ್‍ನ ಶಕ್ತಿ ಇಮ್ಮಡಿಯಾಗಿದೆ
ರಬಕವಿ-ಬನಹಟ್ಟಿ,ಜು2: ರಾಜ್ಯದಲ್ಲಿ ಕಾಂಗ್ರೆಸ್‍ನ ಬಲ ಎಂದಿಗೂ ಕುಗ್ಗುವದಿಲ್ಲ. ಕಾಂಗ್ರೆಸ್‍ನ ಇತಿಹಾಸವೇ ದೇಶದ ಇತಿಹಾಸ. ಪಕ್ಷ ನಡೆದು ಬಂದ ದಾರಿ, ಯೋಜನೆಗಳು ಈಡೇರಿಸುತ್ತಲೇ ಸ್ವಾತಂತ್ರ್ಯ ಪೂರ್ವದಿಂದಲೂ ಒಗ್ಗಟ್ಟಿನ ಸಂಕೇತದೊಂದಿಗೆ ದೇಶದ ಧ್ವನಿಯಾಗಿ ಕೆಲಸ ನಿರ್ವಹಿಸುತ್ತಿದೆ. ಸದ್ಯ ಡಿ.ಕೆ. ಶಿವಕುಮಾರ ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಕ್ಕೆ ಪಕ್ಷದ ಶಕ್ತಿ ಇಮ್ಮಡಿಯಾಗಿದೆ ಎಂದು ಮಾಜಿ ಸಚಿವೆ ಉಮಾಶ್ರೀ ಹೇಳಿದರು.
ನಗರದ ಪಕ್ಷದ ಕಚೇರಿಯಲ್ಲಿ ಡಿಜಿಟಲ್ ಮೂಲಕ `ಪ್ರತಿಜ್ಞಾ’ ಸ್ವೀಕಾರದ ಡಿಜಿಟಲ್ ತಂತ್ರಜ್ಞಾನ ಮೂಲಕ ನಡೆದ ಕಾರ್ಯಕ್ರಮ ನಂತರ ಅವರು ಮಾತನಾಡಿದರು. ಬೇರುಮಟ್ಟದಲ್ಲಿ ಪಕ್ಷ ಬೆಳೆಸುವಲ್ಲಿ ಸಮರ್ಥರಾಗಿ ಬೆಳೆಸಿ ಇಂದು ಅಧ್ಯಕ್ಷ ಸ್ಥಾನ ಸ್ವೀಕರಿಸಿದ್ದಕ್ಕೆ ರಾಜ್ಯದಲ್ಲಿ ಮಹಾ ಸಂಚಲನ ಉಂಟಾಗಿದೆ ಎಂದರು. 
ಕೇಂದ್ರ ಸರ್ಕಾರವು ದೇಶ ವಿರೋಧಿಯಾಗಿ ಕೊರೊನಾ ನೀತಿ ಸುಗ್ರೀವಾಜ್ಞೆಯನ್ನು ಕಾಂಗ್ರೆಸ್ ಪ್ರತಿಭಟಿಸುತ್ತದೆ. ಬಿಜೆಪಿಯು ರಾಜ್ಯ ಹಾಗು ಕೇಂದ್ರದಲ್ಲಿ ಜನವಿರೋಧ ಆಡಳಿತ ನಡೆಸುತ್ತಿರುವದು ಜನತೆಗೆ ತಿಳಿಯುತ್ತಿದೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಸಂಪೂರ್ಣ ತಿರಸ್ಕರಿಸುವದರೊಂದಿಗೆ ಮತ್ತೆ ಕಾಂಗ್ರೆಸ್ ಆಡಳಿತದ ಚುಕ್ಕಾಣಿ ಹಿಡಿಯಲಿದೆ ಎಂದು ಉಮಾಶ್ರೀ ಹೇಳಿದರು.
ಕಾಂಗ್ರೆಸ್ ಮುಖಂಡ ಬಸವರಾಜ ಶಿಗ್ಗಾಂವಿ ಮಾತನಾಡಿ, ರಾಜ್ಯದಲ್ಲಿ ವಿನೂತನವಾಗಿ ಅಧಿಕಾರ ಪದಗ್ರಹಣ ಮಾಡಿದ ಸುಸಂದರ್ಭ ಇದಾಗಿದೆ. ನೂತನ ಸಾರಥಿಯಾಗಿ ಡಿ.ಕೆ. ಶಿವಕುಮಾರ, ಕಾರ್ಯಾಧ್ಯಕ್ಷರುಗಳಾದ ಸತೀಶ ಜಾರಕಿಹೊಳಿ, ಈಶ್ವರ ಖಂಡ್ರೆ ಹಾಗು ಸಲೀಂ ಅಹ್ಮದ್ ಅವರ ಪ್ರತಿಜ್ಞಾ ಸಮಾರಂಭ ದೇಶದಲ್ಲಿಯೇ ಮಾದರಿಯಾಗುವಲ್ಲಿ ಕಾರಣವಾಗಿದೆ ಎಂದರು. ತೇರದಾಳ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 30 ಸ್ಥಳಗಳಲ್ಲಿ ವೀಕ್ಷಣೆಗೆ ನಿಯೋಜನೆ ಮಾಡಲಾಗಿತ್ತು ಎಂದು ತಿಳಿಸಿದರು.
ಶಂಕರ ಜಾಲಿಗಿಡದ, ರಾಜೇಂದ್ರ ಭದ್ರನ್ನವರ, ಶಂಕರ ಕೆಸರಗೊಪ್ಪ, ಹುಮಾಯೂನ್ ಮಲ್ಲಾ, ಓಂಪ್ರಕಾಶ ಮನಗೂಳಿ, ಬಸವರಾಜ ಬೀಳಗಿ, ಕಿರಣ ಕರಲಟ್ಟಿ, ರಾಹುಲ್ ಕಲಾಲ, ಶಾಂತಾ ಮಂಡಿ, ಹಾರೂನರಶೀದ ಬೇವೂರ, ನಸೀಂ ಮೊಕಾಶಿ, ಸುರೇಶ ಹಿಪ್ಪರಗಿ, ಮಲಕಯ್ಯ ಬಂಗಿ, ಶ್ರೀಶೈಲ ಹಿತ್ತಲಮನಿ, ಹುಜೇಫಾ ಮುಲ್ಲಾ, ಬಸವರಾಜ ಸಿಂಧೆ ಸೇರಿದಂತೆ ಅನೇಕ ಕಾರ್ಯಕರ್ತರು ಇದ್ದರು.

- ನಿಮ್ಮ ಜಾಹೀರಾತುಗಳಿಗಾಗಿ ಸಂಪರ್ಕಿಸಿ +91 9902523698