ಬನಹಟ್ಟಿಯ ಮಂಗಳವಾರ ಪೇಟೆಯ ಎಲ್ಲಮ್ಮದೇವಿ ದೇವಸ್ಥಾನ ಹತ್ತಿರ ಕಂಟೈನ್ಮೆಂಟ್ ವಲಯ ಮಾಡಿರುವದು.

ರಬಕವಿ-ಬನಹಟ್ಟಿ: ಐವರಿಗೆ ಕೊರೊನಾ ಸೋಂಕು, ಮಹಿಳೆ ಸಾವು

ರಬಕವಿ-ಬನಹಟ್ಟಿ,ಜು28: ಅವಳಿ ಪಟ್ಟಣದಾದ್ಯಂತ ಇಂದು ಐವರಿಗೆ ಕೊರೊನಾ ಸೋಂಕು ಇರುವದು ದೃಢಪಟ್ಟಿದೆ. 45 ವರ್ಷದ ಮಹಿಳೆಯೋರ್ವಳು ಪಾಜಿಟಿವ್‍ನಿಂದ ಸಾವಿಗೀಡಾಗಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 98 ಕ್ಕೇರಿದೆ.
ರಬಕವಿಯ ಮುತ್ತೂರ ಗಲ್ಲಿಯ 75 ವರ್ಷದ ವೃದ್ಧ, ಕಂಠಿ ಬಸವಣ್ಣ ದೇವಸ್ಥಾನ ಹತ್ತಿರದ 62 ವರ್ಷದ ವೃದ್ಧೆ, ಬನಹಟ್ಟಿಯ ಸೋಮವಾರ ಪೇಟೆಯ 38 ಪ್ರಾಯದ ಬಟ್ಟೆ ವ್ಯಾಪಾರಿ, ಬನಹಟ್ಟಿ ಕೆರೆ ರಸ್ತೆಯ 49 ವರ್ಷದ ಪುರುಷ ಹಾಗು ಬಸ್ ನಿಲ್ದಾಣ ಬಳಿಯ ಪಶು ಆಸ್ಪತ್ರೆ ಬಳಿಯ 57 ವರ್ಷದ ವ್ಯಕ್ತಿಗೆ ಕೊರೊನಾ ಸೋಂಕು ದೃಢಪಟ್ಟಿದೆ.