ದ್ವಿತೀಯ ಸಂಪರ್ಕಿತರ ಪರೀಕ್ಷೆ ನೆಗೆಟಿವ್
ಬನಹಟ್ಟಿ, ನಾವಲಗಿ ಗ್ರಾಮ ನಿರಾಳ
ರಬಕವಿ-ಬನಹಟ್ಟಿ,ಜು1: ಈಚೆಗೆ ಒಂದೇ ಕುಟುಂಬದ 6 ಜನರಿಗೆ ಒಕ್ಕರಿಸಿದ ಕೊರೊನಾ ಸೋಂಕಿತರ ಸಂಪರ್ಕಕ್ಕೆ ಹೊಂದಿದ್ದ 55 ಜನರನ್ನು ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿತ್ತು.
ಕಳೆದ ಜೂನ್ 21 ರಿಂದ ಸರದಿಯಂತೆ ಕ್ವಾರಂಟೈನ್ ಮಾಡಲಾಗಿದ್ದವರ ಪೈಕಿ ಎಲ್ಲ 55 ಜನರ ಗಂಟಲು ದ್ರವ ಹಾಗು ರಕ್ತದ ಮಾದರಿಯನ್ನು ಸ್ವ್ಯಾಬ್ ಪರೀಕ್ಷೆಗೆ ಕಳಿಸಲಾಗಿ ಎಲ್ಲರ ವರದಿ ನೆಗೆಟಿವ್ ಬಂದಿದೆ. ಸದ್ಯ 55 ಜನರಲ್ಲಿ ಏಳು ಜನರನ್ನು ಕ್ವಾರಂಟೈನ್‍ನಿಂದ ಮುಕ್ತಗೊಳಿಸಿದ್ದು, ಇನ್ನುಳಿದ 48 ಜನರನ್ನು ಜುಲೈ 4 ರ ನಂತರ ಇನ್ನುಳಿದ ಕೆಲವರ ವರದಿ ನಂತರ ಮುಕ್ತಗೊಳಿಸುವ ಲೆಕ್ಕಾಚಾರದಲ್ಲಿ ತಾಲೂಕಾಡಳಿತದ್ದಾಗಿದೆ.
ಇನ್ನೆರಡು ದಿನಗಳಲ್ಲಿ ಉಳಿದವರ ಸ್ವ್ಯಾಬ್ ಪರೀಕ್ಷೆ ವರದಿ ಬರಲಿದ್ದು, ಬನಹಟ್ಟಿ ಹಾಗು ನಾವಲಗಿ ಗ್ರಾಮಗಳಲ್ಲಿ ಆತಂಕ ಸೃಷ್ಟಿಸುವಲ್ಲಿ ಕಾರಣವಾಗಿತ್ತು. ಇದೀಗ ಎಲ್ಲರದ್ದೂ ನೆಗೆಟಿವ್ ಉತ್ತರ ದೊರಕುತ್ತಿರುವ ಹಿನ್ನಲೆ ಸಂಪೂರ್ಣ ನಿರಾಳತೆ ಹೊಂದುವಲ್ಲಿ ಕಾರಣವಾಗಿದೆ.

Social Plugin