ಧಾರ್ಮಿಕ ಕಾರ್ಯಕ್ರಮ ರದ್ದು...
ರಬಕವಿ-ಬನಹಟ್ಟಿ,ಜು19: ರಬಕವಿ ನಗರದ ಬ್ರಹ್ಮಾನಂದ ಆಶ್ರಮದಲ್ಲಿ ಬ್ರಹ್ಮಾನಂದ ಶ್ರೀಗಳ ಹಾಗೂ ಸಿದ್ಧೇಶ್ವರ ಶ್ರೀಗಳ ಸ್ಮರಣಾರ್ಥವಾಗಿ ಶ್ರಾವಣ ಮಾಸದಲ್ಲಿ ಪ್ರತಿ ವರ್ಷ ಆಧ್ಯಾತ್ಮಿಕ ಪ್ರವಚನ ಹಮ್ಮಿಕೊಳ್ಳಲಾಗುತ್ತಿತ್ತು. ಕರೊನಾ ಹಾವಳಿಯಿಂದ ಜನ ಗುಂಪು ಗುಂಪಾಗಿ ಸೇರಬಾರದೆಂಬ ಸರ್ಕಾರದ ಆದೇಶದ ಹಿನ್ನಲೆಯಲ್ಲಿ ಆಶ್ರಮದಲ್ಲಿ ಅಧ್ಯಾತ್ಮಿಕ ಪ್ರವಚನ ನಡೆಸಲಾಗುವುದಿಲ್ಲ. ಭಕ್ತರು ಸಹಕರಿಸಿ ತಮ್ಮ ಮನೆಗಳಲ್ಲಿ ಸತ್ಸಂಗ, ಗ್ರಂಥಗಳ ಪಠಣ ಮತ್ತು ಶ್ರಾವಣ ಮಾಸದ ಪೂಜಾ ವಿಧಿವಿಧಾನಗಳನ್ನು ಆಚರಿಸಬೇಕು ಎಂದು ಶ್ರೀಮಠದ ಶ್ರೀ ಗುರುಸಿದ್ಧೇಶ್ವರ ಶ್ರೀಗಳು ತಿಳಿಸಿದರು.

Social Plugin