ಬನಹಟ್ಟಿ ಹಳ್ಳಕ್ಕೆ ನಿರ್ಮಿಸಿದ ಬಾಂದರ ತುಂಬಿ ಹರಿಯುತ್ತಿದ್ದು ಬಾಂದರದಲ್ಲಿ ಜನರು ಮೀನು ಹಿಡಿಯುತ್ತಿರುವುದು.
ತುಂಬಿ ಹರಿದ ಬಾಂದಾರ

ರಬಕವಿ-ಬನಹಟ್ಟಿ,ಜು9: ಜಿಎಲ್‍ಬಿಸಿ ಕಾಲುವೆಯ ಮೂಲಕ ನೀರು ಬಿಡುತ್ತಿರುವುದರಿಂದ ಬನಹಟ್ಟಿಯ ವಿಶಾಲವಾದ ಕೆರೆ ತುಂಬಿದ ಪರಿಣಾಮವಾಗಿ ಹಳ್ಳಕೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ.
ಇದರಿಂದಾಗಿ ಹಳ್ಳಕ್ಕೆ ನಿರ್ಮಾಣ ಮಾಡಲಾದ ಬಾಂದಾರ್ ತುಂಬಿ ಹರಿಯುತ್ತಿದ್ದು, ಮೀನುಗಾರರು ಬಾಂದರ್ ದಲ್ಲಿ ಮೀನಿಗಾಗಿ ಗಾಳ ಹಾಕಿದ್ದಾರೆ ಮತ್ತು ಮತ್ತೆ ಕೆಲವರು ಸ್ನಾನಕ್ಕೆ ಮುಂದಾಗಿದ್ದಾರೆ.
ಈ ಬಾಂದರಕ್ಕೆ ನೀರು ಹರಿಯುವುದರಿಂದ ಬಾವಿ ಮತ್ತು ಕೊಳವೆ ಬಾವಿಗಳ ಅಂತರಜಲ ಮಟ್ಟ ಹೆಚ್ಚಾಗುತ್ತದೆ. ಆದರೂ ಈ ಭಾಗದಲ್ಲಿ ಈ ಬಾರಿ ಉತ್ತಮ ಮಳೆಯಾಗುತ್ತಿದ್ದು ಬಾವಿ ಮತ್ತು ಕೊಳವೆ ಬಾವಿಗಳಲ್ಲಿ ನೀರಿನ ಮಟ್ಟ ಕಡಿಮೆಯಾಗಿಲ್ಲ ಎಂದು ರೈತ ಅಪ್ಪು ಪಾಟೀಲ ತಿಳಿಸಿದರು.