ರಬಕವಿಯ ಈಶ್ವರ ಸಣಕಲ್ ರಸ್ತೆಯ ಬಟ್ಟೆ ಅಂಗಡಿ ಎದರು ಕಂಟೈನ್ಮೆಂಟ್ ವಲಯ ನಿರ್ಮಿಸಿರುವದು.
ರಬಕವಿ: ಕಂಟೈನ್ಮೆಂಟ್ ವಲಯ ತೆರವಿಗೆ ಒತ್ತಾಯ
ರಬಕವಿ-ಬನಹಟ್ಟಿ,ಜು24: ಕಳೆದ ಮೂರು ದಿನಗಳ ಹಿಂದೆ ರಬಕವಿ ಈಶ್ವರ ಸಣಕಲ್ ರಸ್ತೆಯ ವೀರಭದ್ರ ದೇವಸ್ಥಾನ ಪಕ್ಕದ ಬಟ್ಟೆ ವ್ಯಾಪಾರಿಯೋರ್ವರಿಗೆ ಕರೊನಾ ಪಾಜಿಟಿವ್ ಬಂದ ಹಿನ್ನಲೆಯಲ್ಲಿ ಪ್ರಮುಖ ರಸ್ತೆಯ ಅರ್ಧ ಭಾಗವನ್ನು ಕಂಟೈನ್ಮೆಂಟ್ ವಲಯ ಮಾಡಿದ್ದು ಸಾರ್ವಜನಿಕರಿಗೆ ತುಂಬಾ ತೊಂದರೆಯಾಗಿದೆ ಎಂದು ಸ್ಥಳಿಯರು ಆರೋಪಿಸಿದ್ದಾರೆ.
ರಸ್ತೆಗೆ ಹೊಂದಿಕೊಂಡಂತೆ ಇರುವ ಪಕ್ಕದ ಕಂಬಳಿ ಬಜಾರ ಗಲ್ಲಿಯಲ್ಲಿ ಕಳೆದವಾರ ಮಹಿಳೆಯೋರ್ವಳಿಗೆ ಸೋಂಕು ತಗುಲಿ ಸಾವನ್ನಪ್ಪಿದ್ದರಿಂದ ಎರಡೂ ಕಡೆಗಳಲ್ಲಿ ರಸ್ತೆ ಬಂದಾಗಿದೆ. ಇದರಿಂದ ಪ್ರಮುಖ ಮಾರುಕಟ್ಟೆ ಸಂಪರ್ಕ ಕಡಿತವಾಗಿದ್ದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗಿದೆ. ಸಂಬಂಧಿಸಿದ ಅಧಿಕಾರಿಗಳು ಕೂಡಲೆ ಸೋಂಕಿತ ವ್ಯಕ್ತಿಯ ಬಟ್ಟೆ ಅಂಗಡಿಯ ಒಂದು ಭಾಗವನ್ನು ಮಾತ್ರ ಸೀಲ್‍ಡೌನ್ ಮಾಡಬೇಕೆಂದು ಒತ್ತಾಯಿಸಿದ್ದಾರೆ.
“ವೈರಸ್ ತೀವ್ರವಾಗಿ ತಾಲೂಕಿನಾಧ್ಯಂತ ಹರಡುತ್ತಿದ್ದು, ಜನರಲ್ಲಿ ಜಾಗೃತಿ ಮೂಡಿಸುವ ದೃಷ್ಟಿಯಿಂದ ಮತ್ತು ವೈರಸ್ ಹರಡದಂತೆ ತಾಲೂಕಿನಾಧ್ಯಂತ ಅನೇಕ ಮುಂಜಾಗೃತ ಕ್ರಮ ಜರುಗಿಸಲಾಗಿದೆ. ಒಟ್ಟು 21 ದಿನದವರೆಗೂ ಈ ಸೀಲ್‍ಡೌನ ಮುಂದುವರೆಯುತ್ತದೆ.” ಪ್ರಶಾಂತ ಚನಗೊಂಡ. ತಹಸೀಲ್ದಾರ. ರಬಕವಿ ಬನಹಟ್ಟಿ.