ಹದಗೆಟ್ಟ ಪಟ್ಟಣದ ಮುಖ್ಯ ರಸ್ತೆ.....
ವರದಿ : ಕೆ.ಎಸ್. ರಂಗಸ್ವಾಮಿ.
ತೇರದಾಳ; ಕಳೆದ ಸುಮಾರು ತಿಂಗಳುಗಳಿಂದ ತೇರದಾಳ ಪಟ್ಟಣದ ಮುಖ್ಯ ರಸ್ತೆಯು ಹದಗೆಟ್ಟು ಹೋಗಿದ್ದು ಸಾರ್ವಜನಿಕರು ಸಂಚರಿಸಲು ಪರದಾಡುತ್ತದ್ದಾರೆ. ಈ ರಸ್ತೆಯು ತೇರದಾಳ ಪಟ್ಟಣದ ಪ್ರವೇಶಕ್ಕೆ ಮುಖ್ಯರಸ್ತೆಯಾಗಿದ್ದು, ಹೀಗಾಗಿ ಇಲ್ಲಿ ಪ್ರತಿ ದಿನ ಸುಮಾರು ನೂರಾರು ವಾಹನಗಳು ಸಂಚರುಸುತ್ತವೆ. ಸಾರ್ವಜನಿಕರು,ಶಾಲೆಯ ಮಕ್ಕಳು,ಸರಕಾರಿ ಕಚೇರಿಗೆ ಬರುವ ಸಾರ್ವಜನಿಕರು ನಿರಂತರವಾಗಿ ಸಂಚರಿಸುತ್ತಿರುವದರಿಂದ ಈ ರಸ್ತಯನ್ನು ಕೂಡಲೇ ದುರಸ್ತಿಮಾಡಬೇಕೆಂದು ಸಾರ್ವಜನಿಕರು ತಿಳಿಸುತ್ತಿದ್ದಾರೆ.ಪಟ್ಟಣದಲ್ಲಿರುವ ಸರಕಾರಿ ಕಚೇರಿಗಳಾದ ವಿಶೇಷತಹಶಿಲ್ದಾರ ಹಾಗೂ ಉಪನೋಂದನಿ ಕಚೇರಿಗಳು ಈ ಮುಖ್ಯ ರಸ್ತೆಗೆ ಹೊಂದಿಕೊಂಡು ಇರುವದರಿಂದ ದಿನಾಲು ಲೆಕ್ಕವಿಲ್ಲದಷ್ಟು ಸಾರ್ವಜನಿಕರು ಇದೆ ರಸ್ತೆಯ ಮೂಲಕ ಬರುತ್ತಾರೆ ಹೋಗುತ್ತಾರೆ ಇದರಿಂದ ಈ ರಸ್ತೆ ಯಾವಾಗಲು ಜನಸಂದನಿಯಿಂದ ಕೂಡಿರುತ್ತದೆ, ಕಾರಣ ಪಟ್ಟಣದ ಮುಖ್ಯರಸ್ತೆಯ ಗತಿಯೇ ಹೀಗಾದರೆ ಹೇಗೆ ಎಂದು ಪಟ್ಟಣದ ಹಾಗೂ ಬೇರೆ ಗ್ರಾಮದಿಂದ ಬರುತ್ತಿರುವ ಸಾರ್ವಜನಿಕರು ಈ ರಸ್ತೆಯ ಅವ್ಯವಸ್ತೆಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮೊದಲೇ ಇಕ್ಕಟ್ಟಾಗಿರುವ ಈ ಮುಖ್ಯರಸ್ತೆಯಲ್ಲಿ ಅಲ್ಲಲ್ಲಿ ತಗ್ಗು ದಿನ್ನೆಗಳು ಬಿದ್ದು ವಾಹನಸವಾರರಿಗೆ ಹಾಗೂ ಪಾದಾಚಾರಿಗಳಿಗೆ ಸಂಚಾರ ಮಾಡಲು ತುಂಬಾ ತೊಂದರೆಯಾಗುತ್ತಲಿದೆ.
ಸರಕಾರವು ಪಟ್ಟದಲ್ಲಿರುವ ಸಾರ್ವಜನಿಕರಿಗೆ ನಿರಂತರವಾಗಿ 24 ತಾಸು ಕುಡಿಯುವ ನೀರಿನ ಸೌಲಭ್ಯ ಒದಗಿಸುವ ಉದ್ದೇಶದಿಂದ ಇಡಿ ಪಟ್ಟಣದ ತುಂಬಾ ಪ್ರತಿಮನೆಗೂ ನೀರು ಸರಬರಾಜು ಆಗುವ ನಿಟ್ಟಿನಲ್ಲಿ ಪಟ್ಟಣದ ಪ್ರತಿ ಸಂದಿಯನ್ನೂ ಬಿಡದೆ ಪೈಪುಗಳನ್ನು ಅಳವಡಿಸುವ ಕಾರ್ಯ ಮಾಡುತ್ತಿದ್ದಾರೆ.ಕಾರಣ ಈ ರಸ್ತೆಯಲ್ಲಿಯೂ ಸಹ ರಸ್ತೆ ಬಗೆದು ಪೈಪು ಅಳವಡಿಸುವ ಕಾರ್ಯ ನಡೆಯಬೇಕಾಗಿದ್ದು ಆದರೆ ಕೊವಿಡ್ 19 ಕಾರಣದಿಂದ ವಿಳಂಬವಾಗಿದೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ .ಕಾರಣ ಎಂದೋ ಮುಗಿಯಬೇಕಾದ ಈ ಕಾಮಗಾರಿಯು ಆಮೆಗತಿಯಲ್ಲಿ ಸಾಗುತ್ತಿರುವವದಕ್ಕೆ ಸಾರ್ವಜನಿಕರು ಆಕ್ರೋಶಪಡಿಸುತ್ತಿದ್ದಾರೆ. ಕಾರಣ ಸಂಬಂಧಪಟ್ಟ ಇಲಾಖೆಯವರು ಕೂಡಲೇ ಈ ಬಗ್ಗೆ ಕಾಳಜಿವಹಿಸಿ ಈ ಮುಖ್ಯರಸ್ತೆಗೆ ಮುಕ್ತಿ ನೀಡಬೇಕೆಂದು ಸಾರ್ವಜನಿಕರು ಈ ಮೂಲಕ ಇಲಾಖೆಯವರಿಗೆ ಆಗ್ರಹಿಸಿದ್ದಾರೆ.
- FOR ADVERTISEMENT CONTACT -
9902523698

Social Plugin