ಬಿಡಿಸಿಸಿ ಬ್ಯಾಂಕ್ ಚುನಾವಣೆ ಸ್ಪರ್ಧೆಗೆ ಶಾಸಕ ಸಿದ್ದು ಸವದಿಯವರಿಗೆ ಹೊಸೂರ ಪಟ್ಟಣದ ಸಾರ್ವಜನಿಕರು ಮನವಿ ಸಲ್ಲಿಸಿದರು. 
ಸುಭಾಸ ಚೋಳಿ ಅವರಿಗೆ ಬಿಡಿಸಿಸಿ ಬ್ಯಾಂಕ್ ಚುನಾವಣೆ: ಸ್ಪರ್ಧೆಗೆ ಅವಕಾಶ ನೀಡಿ
ರಬಕವಿ-ಬನಹಟ್ಟಿ,ಜೂ18: ಹೊಸೂರನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಸುಭಾಸ ಚೋಳಿ ಅವರಿಗೆ ಸದ್ಯದಲ್ಲಿಯೇ ನಡೆಯಲಿರುವ ಬಿಡಿಸಿಸಿ ಬ್ಯಾಂಕ ನಿರ್ದೇಶಕರ ಚುನಾವಣೆಗೆ ಈ ಭಾಗದಿಂದ ಸ್ಪಧಿಸಲು ಅವಕಾಶ ಮಾಡಿಕೊಡಬೇಕು ಎಂದು ಹೊಸೂರನ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಹೊಸೂರನ ಸುಭಾಸ ಚೋಳಿ ಬಿಜೆಪಿಯ ಮುಖಂಡರಾಗಿದ್ದು, ಸಹಕಾರಿ ರಂಗದಲ್ಲಿ ಕೆಲಸ ಮಾಡಿದ ಉತ್ತಮ ಅನುಭವಿಯಾಗಿರುವ ಅವರಿಗೆ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಮಾಡಿಕೊಡಬೇಕು ಎಂದು ನಗರದ ಬಿಜೆಪಿ ಕಾರ್ಯಾಲಯದಲ್ಲಿ ಶಾಸಕ ಸಿದ್ದು ಸವದಿಯವರಿಗೆ ಮನವಿ ಅರ್ಪಿಸಲಾಯಿತು.
ಈ ಸಂದರ್ಭದಲ್ಲಿ ಮಲ್ಲಪ್ಪ ಬಿಸನಾಳ, ಹಣಮಂತ ಕಳ್ಳಿಗುದ್ದಿ, ಮಹಾದೇವ ಬುಜರುಕ, ಕೃಷ್ಣಾ ಲೆಂಡಿ, ಮಾನಿಂಗ ಯಳಸಂಗ, ಮಲ್ಲಪ್ಪ ಜಗದಾಳ, ಮಹಾದೇವ ಚೋಳಿ, ಗಿರಮಲ್ಲಪ್ಪ ಬಾಗೇವಾಡಿ, ಮಲ್ಲು ನಾವಿ, ಮಂಜು ಲೆಂಡಿ, ವೆಂಕಣ್ಣ ಮೇಲಗಿರಿ ಸೇರಿದಂತೆ ಅನೇಕರು ಇದ್ದರು. 


      - FOR ADVERTISEMENT CONTACT  - 
                         - 9902523698 -