ರಬಕವಿ-ಬನಹಟ್ಟಿ ನಗರಸಭೆಯ ಆಶ್ರಯದಲ್ಲಿ ನಡೆದ ಮಾಸ್ಕ್ ದಿನಾಚರಣೆಯ ನಿಮಿತ್ತವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಯಿತು.
ಕೊರೊನಾ ಮುಂಜಾಗ್ರತೆಯ ಪರಿಹಾರ
ರಬಕವಿ-ಬನಹಟ್ಟಿ,ಜೂ18:ಕೊರೊನಾ ಬಾರದಂತೆ ತಡೆಯಲು ಮುಂಜಾಗ್ರತೆ ಮಾತ್ರ ಪರಿಹಾರ. ಅದಕ್ಕಾಗಿ ಜನರು ಮನೆಯಿಂದ ಹೊರಗೆ ಬರುವಾಗಿ ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಂಡು ಬರಬೇಕು ಎಂದು ರಬಕವಿ ಬನಹಟ್ಟಿ ತಹಶೀಲ್ದಾರ್ ಪ್ರಶಾಂತ ಚನಗೊಂಡ ಮಾತನಾಡಿದರು.
ಅವರು ಗುರುವಾರ ಸ್ಥಳೀಯ ನಗರಸಭೆಯ ಕಾರ್ಯಾಲಯದ ಮುಂಭಾಗದಲ್ಲಿ ಮಾಸ್ಕ್ ದಿನಾಚರಣೆಯ ನಿಮಿತ್ತವಾಗಿ ಹಮ್ಮಿಕೊಂಡ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು. ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುವ ಸಂದರ್ಭದಲ್ಲಿ ಕಡ್ಡಾಯವಾಗಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. ಸ್ಯಾನಿಟೈಸರ್ ಬಳಗೆ ಅಗತ್ಯವಾಗಿ ಬೇಕು ಎಂದು ತಹಶೀಲ್ದಾರ್ ಪ್ರಶಾಂತ ಚನಗೊಂಡ ತಿಳಿಸಿದರು.
ಇದೇ ಸಂದರ್ಭದಲ್ಲಿ ಪೌರಾಯುಕ್ತ ಶ್ರೀನಿವಾಸ ಜಾಧವ ಮಾತನಾಡಿ, ಕೋವಿಡ್-19 ಸಂದರ್ಭದಲ್ಲಿ ಜನರು ಸರ್ಕಾರ ಹಾಕಿಕೊಟ್ಟ ನಿಯಮಗಳನ್ನು ಪಾಲಿಸಬೇಕು. ಪ್ರರಿಯೊಬ್ಬರು ರೋಗ ನಿರೋಧಕ ಶಕ್ತಿ ವೃದ್ಧಿಸುವಂತಹ ಆಹಾರವನ್ನು ಸೇವಿಸಬೇಕು. ಸ್ವಚ್ಛತೆಯೆ ಕಡೆಗೆ ಹೆಚ್ಚಿನ ಮಹತ್ವ ನೀಡುವುದರ ಜೊತೆಗೆ ಮನೆಯಲ್ಲಿ ವೃದ್ಧ ಮತ್ತು ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು ಎಂದರು.
ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಭಿತ್ತಿ ಪತ್ರಗಳನ್ನು ಪ್ರದರ್ಶನ ಮಾಡಿ ಜನರಿಗೆ ಮಾಸ್ಕ್ ಧರಿಸುವಂತೆ ಅಧಿಕಾರಿಗಳು ತಿಳಿಸಿದರು. ಈ ಸಂದರ್ಭದಲ್ಲಿ ಸಿಪಿಐ ಜಿ.ಕರುಣೇಶಗೌಡ, ಪಿಎಸ್‍ಐ ರವಿಕುಮಾರ ಧರ್ಮಟ್ಟಿ, ಉಪ ತಹಶೀಲ್ದಾರ್ ಎಸ್.ಎಲ್.ಕಾಗಿಯವರ, ಶಿರಸ್ತೆದಾರ ಬಸವರಾಜ ಬಿಜ್ಜರಗಿ, ಎಂಜಿನಿಯರ್ ಬಸವರಾಜ ಶರಣಪ್ಪ, ಅಭಿನಂದನ ಸೋನಾರ, ರಮೇಶ ಮಳ್ಳಿ, ಸಹಾಯಕ ಆರೋಗ್ಯಾಧಿಕಾರಿ ರಾಜಕುಮಾರ ಹೊಸೂರ, ಎಎಸ್‍ಐ ಬಿ.ಎಸ್.ಪಾಟೀಲ, ನಿಂಗಪ್ಪ ಸಂತಿವೂರ, ಎಂ.ಎಸ್.ಮಠಪತಿ ಸೇರಿದಂತೆ ನಗರಸಭೆ, ತಹಶೀಲ್ದಾರ್ ಕಚೇರಿ ಮತ್ತು ಪೋಲೀಸ್ ಸಿಬ್ಬಂದಿ ವರ್ಗದವರು ಜಾಥಾದಲ್ಲಿ ಭಾಗವಹಿಸಿದ್ದರು.
- FOR ADVERTISEMENT CONTACT -
- 9902523698 -

Social Plugin