ತೇರದಾಳ ಪಟ್ಟಣದ ಮುಸ್ಲಿಂ ಬಾಂಧವರು ಇಂದು ರಂಜಾನ್ ಹಬ್ಬವನ್ನು ತಮ್ಮ ಮನೆಯಲ್ಲಿ ಸರಳವಾಗಿ ಆಚರಿಸಿದರು. ಮಸೀದಿಗಳಿಗೆ ತೆರಳದೆ ಮನೆಯಲ್ಲೇ ಇದ್ದು ತಮ್ಮ ಕುಟುಂಬಗಳ ಸಮೇತ ಪ್ರಾರ್ಥನೆ ಸಲ್ಲಿಸಿದರು.
ದೇಶದಲ್ಲಿ ಕೋರೋಣ ವೈರಸ್ ರೋಗ ಹರಡುವಿಕೆ ಹೆಚ್ಚಾಗಿದ್ದು ಇದರಿಂದ ದೇಶದಲ್ಲಿ ಲಾಕ್ಡೌನ್ ಆಗಿದ್ದು ಇಂದು ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದಂತೆ ಸರ್ಕಾರದ ಆದೇಶದಂತೆ ಇಂದು ಎಲ್ಲರೂ ತಮ್ಮ ಮನೆಯಲ್ಲಿ ಪ್ರಾರ್ಥನೆ ಸಲ್ಲಿಸುವ ಮೂಲಕ ಮನೆಯಲ್ಲಿ ಇದು ಹಬ್ಬವನ್ನು ಆಚರಿಸಿದರು. ಪ್ರತಿವರ್ಷ ಈದ್ಗಾ ಮೈದಾನಕ್ಕೆ ತೆರಳಿ ಸಾವಿರಾರು ಸಂಖ್ಯೆಯಲ್ಲಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸುತ್ತಿದ್ದರು. ರಾಜ್ಯದಲ್ಲಿ ಕೊರೋನಾ ವೈರಸ್ ತಡೆಗಟ್ಟಲು ರಾಜ್ಯ ಸರಕಾರ ಲಾಕ್ಡೌನ್ ಜಾರಿ ಮಾಡಿದ್ದು ಇದನ್ನು ಪಾಲಿಸುವ ಸಲುವಾಗಿ ಹಾಗೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಎಲ್ಲರೂ ಇಂದು ತಮ್ಮ ತಮ್ಮ ಮನೆಗಳಲ್ಲಿ ಪ್ರಾರ್ಥನೆಯನ್ನು ಸಲ್ಲಿಸಿದರು.
ಮನೆಯಲ್ಲಿ ತಮ್ಮ ಕುಟುಂಬದವರು ಎಲ್ಲರೂ ಒಂದೆಡೆ ಸೇರಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ ಜೊತೆಗೆ ಶುಭಾಶಯಗಳ ವಿನಿಮಯ ಮಾಡಿಕೊಂಡರು. ಪ್ರತಿವರ್ಷದಂತೆ ಈ ವರ್ಷ ಹಬ್ಬಕ್ಕೆ ಯಾವುದೇ ರೀತಿಯಾದಂತಹ ಕಳೆ ಕಂಡುಬರಲಿಲ್ಲ. ಲಾಕ್ಡೌನ್ ದಿಂದಾಗಿ ವಾಹನಗಳ ಸಂಚಾರ ನಿಷೇಧ ಇರುವುದರಿಂದ ಪರಸ್ಥಳದ ತಮ್ಮ ಸಂಬಂಧಿಕರು ಎಂದು ಇಲ್ಲಿ ತಮ್ಮ ತಮ್ಮ ಸಂಬಂಧಿಕರ ಮನೆಗೆ ಬರಲಿಲ್ಲ. ತಾವೇ ತಮ್ಮ ಮನೆಯಲ್ಲಿ ಹಬ್ಬವನ್ನು ಸರಳವಾಗಿ ಆಚರಿಸಿದರು.

Social Plugin