\


ಕೊವಿಡನ ಹಿಡಿತಕ್ಕೆ ಸಿಲುಕಿ ಇಡಿ ದೇಶವೆ ನಲುಗಿಹೋಗುತ್ತಲಿದೆ,ದೇಶದಲ್ಲಿಯ ಪ್ರಜೆಗಳ ರಕ್ಷಣೆಗಾಗಿ ಈಡಿ ಸರ್ಕಾರವೇ ಹಗಲಿರುಳು ಶ್ರಮಿಸುತ್ತಲಿದೆ.ಕೊರೋನಾ ಸೊಂಕಿತ ಎಂದ ಕೂಡಲೆ ಬೆಚ್ಚಿಬಿದ್ದು ಹೆದರಿ

ಅವರಿಂದ ದೂರ ಸರಿಯುತ್ತಿರುವಾಗ, ದೇಶದಲ್ಲಿಯ ಆರೋಗ್ಯ ಇಲಾಖೆ,ಪೌರಾಡಳಿತ ಇಲಾಖೆ,ಪೋಲಿಸ ಇಲಾಖೆ,ಕಂದಾಯ ಇಲಾಖೆಯವರು ಅವರನ್ನು ಹುಡುಕಿಕೊಂಡು ಹೋಗಿ ಹಿಡಿದು ಅವರಿಗೆ ಚಿಕಿತ್ಸೆ ನೀಡಿ ಮರುಜೀವ ನೀಡುತ್ತಿರುವ ಇವರ ಸೇವೆ ಅವಿಸ್ಮರಣಿಯವಾಗಿದೆ.ಸೊಂಕಿತರಿಗೆ ಜೀವ ನೀಡಲು ಹೋಗಿ ತಮ್ಮ ಜೀವವನ್ನೇ ತ್ಯಾಗ ಮಾಡಿದ ಮಹಾನುಭಾವರನ್ನು ನಾವೀಗ ನೋಡಿದ್ದೇವೆ.ಅದರಲ್ಲೂ ವೈದ್ಯರು  ಹಾಗೂ ಆಶಾಕಾರ್ಯಕರ್ತೆಯರು ಪೋಲಿಸ್ ಇಲಾಖೆಯವರು,ಪುರಸಬೆಯ ಪೌರಕಾರ್ಮಿಕರು ತಮ್ಮ ಜೀವದ ಹಂಗು ತೊರೆದು ಸೊಂಕಿತರ ಅತೀ ಹತ್ತಿರದಿಂದ ಕಾರ್ಯನಿರ್ವಹಿಸಿ ನಿಜವಾದ ಹೀರೊಗಳಾಗೆದ್ದಾರೆ.ಇವರ ಸೇವೆ ಎಂದೂ ಮರೆಯಲಾಗದಂತಹುದು.ಹೀಗಾಗಿ ಇವರ ರಕ್ಷಣೆ ಇಡಿ  ದೇಶದಲ್ಲಿರುವ ಪ್ರತಿಯೊಬ್ಬರದಾಗಿದೆ.ಇವರ ಈ ಹೋರಾಟದ ತ್ಯಾಗದಿಂದ ನಾವಿಂದು ಸುರಕ್ಷಿತವಾಗಿದ್ದೇವೆ.ಎಂದು ಹೇಳಬಹುದು.ಇಂತಹ ಅಪಾಯದ ಸುಳಿಯಲ್ಲಿ ಕರ್ತವ್ಯ ನಿರ್ವಹಿಸುವ ಇವರುಗಳ ಆರೋಗ್ಯ ಉತ್ತಮ ಸ್ಥಿತಿಯಲ್ಲಿರಲಿ ಎಂಬ ಸದುದ್ದೇಶದಿಂದ ತೇರದಾಳ ಪಟ್ಟಣದ ಶ್ರೀ ಬಾಹುಬಲಿ ವಿದ್ಯಾಪೀಠದ ಜಿನಸೇನಾಚಾರ್ಯ ವಿದ್ಯಾಮಂಡಳದ ಗ್ರಾಮೀಣ ಆಯುರ್ವೇದ ಮಹಾವಿದ್ಯಾಲಯ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದವರು ಆಯುಷ್ ಮಂತ್ರಾಲಯ ಭಾರತ ಸರ್ಕಾರ ನವದೆಹಲಿ ಇವರ ಮಾರ್ಗದರ್ಶನದಂತೆ "ಆಯುಷ್ ಕ್ವಾಥ ಚೂರ್ಣ" ಎಂಬ ರೋಗನಿರೋದಕ ಶಕ್ತಿ ವೃದ್ಧಿಸುವ ಚೂರ್ಣವನ್ನು ಕರೊನಾ ವಾರಿಯರ್ಸಗಳಾದ ಇವರಿಗೆ ಉಚಿತವಾಗಿ ನೀಡಿ ಅವರಿಗೆ ಆತ್ಮಸ್ಥೈರ್ಯವನ್ನು ತುಂಬಿದರು.ಈ ಗುರುಕುಲ ಸಂಸ್ಥೆಯು ತನ್ನತನದಲ್ಲಿ ಹೊಸತನವನ್ನು ಸೃಷ್ಠಿಸಿಕೊಂಡು ಸಾಕಷ್ಟು ಬಾರಿ ಸಮಾಜಮುಖಿ ಕೆಲಸ ಕಾರ್ಯಮಾಡಿ ಈ ನಾಡಿನಲ್ಲಿ ತನ್ನದೆ ಆದ ಹೊಸ ಛಾಪನ್ನು ಮೂಡಿಸಿಕೊಂಡಿದೆ. ಇತರರ ಪ್ರಾಣ ರಕ್ಷಣೆಗಾಗಿ ತಮ್ಮ ಪ್ರಾಣವನ್ನು ಪಣಕ್ಕಿಟ್ಟ ಇವರುಗಳು, ಆರೋಗ್ಯದಿಂದ ಇರಬೇಕೆನ್ನುವ ಸದುದ್ದೇಶವಿಟ್ಟುಕೊಂಡ ಕರೊನಾ ವಾರಿಯರ್ಸಗಳಿಗೆ ಈ ಚೂರ್ಣ ನೀಡಿದ್ದಕ್ಕಾಗಿ ಪಟ್ಟಣದ ನಾಗರಿಕರು ಈ ಕಾರ್ಯಕ್ಕೆ ಸಂಸ್ಥೆಯ ಚೇರಮನ್‍ರಾದ ಟಿ.ಸಿ.ಪಡಸಲಗಿ,ಕಾರ್ಯದರ್ಶಿಗಳದ ಜೆ.ಬಿ.ಆಲಗೂರ,ಕೋಶಾಧಿಕಾರಿಗಳಾದ ನೀಲೇಶ ದೇಸಾಯಿ,ಕಾಲೇಜಿನ ಪ್ರಾಚಾರ್ಯರಾದ ಡಾ: ಎಲ್.ಎಮ್.ಬಿರಾದಾರ, ಡಾ: ಅರುಣ ಅಂಬಲಿ ಹಾಗೂ ಸಿಬ್ಬಂದಿಯವರನ್ನು ಪಟ್ಟಣದ ನಾಗರಿಕರು ಇವರ ಕಾರ್ಯವನ್ನು ಪ್ರಶಂಶಿದ್ದಾರೆ.