ರಬಕವಿ-ಬನಹಟ್ಟಿ ತಾಲೂಕಿಗೆ ಸಿಇಟಿ ಕೇಂದ್ರ ಸ್ಥಾಪನೆ ಹಾಗು ಸ್ವಯಂ ಘೋಷಿತ ಆಸ್ತಿ ತೆರಿಗೆ ದರ ರದ್ದುಪಡಿಸುವಂತೆ ಜಿಲ್ಲಾಧಿಕಾರಿ ಕೆ. ರಾಜೇಂದ್ರರಿಗೆ ಮನವಿ ಸಲ್ಲಿಸಲಾಯಿತು.

ಸಿಇಟಿ ಪರೀಕ್ಷಾ ಕೇಂದ್ರಕ್ಕೆ ಜಿಲ್ಲಾಧಿಕಾರಿಗೆ ಮನವಿ
*ಸ್ವಯಂ ಘೋಷಿತ ತೆರಿಗೆ ದರ ರದ್ದುಪಡಿಸಲು ಒತ್ತಾಯ
ರಬಕವಿ-ಬನಹಟ್ಟಿ,ಮೇ26: ತಾಲೂಕಾ ಕೇಂದ್ರವಾಗಿರುವ ರಬಕವಿ-ಬನಹಟ್ಟಿಯು ಶೈಕ್ಷಣಿಕವಾಗಿಯೂ ಅಭಿವೃದ್ಧಿ ಹೊಂದುತ್ತಿದೆ. ತಾಲೂಕಿನಾದ್ಯಂತ ಹಲವಾರು ವಿಜ್ಞಾನ ಪದವಿಪೂರ್ವ ಮಹಾವಿದ್ಯಾಲಯಗಳಿದ್ದು 1200 ರಷ್ಟು ವಿದ್ಯಾರ್ಥಿಗಳು ವಿಜ್ಞಾನ ವಿಭಾಗದಲ್ಲಿ ಓದುತ್ತಿದ್ದಾರೆ ಕಾರಣ ಸಿಇಟಿ ಪರೀಕ್ಷೆಗೆಂದು ರಬಕವಿ-ಬನಹಟ್ಟಿ ಕೇಂದ್ರವನ್ನಾಗಿಸಬೇಕೆಂದು ಜನತಾ ಶಿಕ್ಷಣ ಸಂಘದ ಕಾರ್ಯದರ್ಶಿ ಮಲ್ಲಿಕಾರ್ಜುನ ಬಾಣಕಾರ ಒತ್ತಾಯಿಸಿದರು.
ಮಂಗಳವಾರ ಜಿಲ್ಲಾಡಳಿತ ಕಚೇರಿಗೆ ತೆರಳಿ ಜಿಲ್ಲಾಧಿಕಾರಿ ಕ್ಯಾಪ್ಟನ್ ಕೆ. ರಾಜೇಂದ್ರರಿಗೆ ಮನವಿ ನೀಡಲಾಯಿತು. ರಬಕವಿ-ಬನಹಟ್ಟಿ ಪಟ್ಟಣದ ಜನತೆ ನೇಕಾರಿಕೆಯಿಂದ ಈಗಾಗಲೇ ಪ್ರವಾಹ ಹಾಗು ಸದ್ಯ ಕೊರೊನಾ ವೈರಸ್‍ನ ತೀವ್ರ ಸಂಕಷ್ಟದಲ್ಲಿದ್ದು, ಪ್ರಸಕ್ತ ವರ್ಷದಿಂದ ಶೇ.20 ರಷ್ಟು ಸ್ವಯಂ ಘೋಷಿತ ಆಸ್ತಿ ತೆರಿಗೆ ಹೆಚ್ಚಳಗೊಳಿಸಿದ್ದಕ್ಕೆ ತೀವ್ರ ಹೊರೆಯಾಗಿದೆ. ಕೂಡಲೇ ಇದನ್ನು ಕೈಬಿಟ್ಟು ಮೊದಲಿನ ತೆರಿಗೆ ಆಕರಣೆಯಲ್ಲಿಯೇ ದರ ನಿಗದಿಪಡಿಸಬೇಕೆಂದು ಒತ್ತಾಯಿಸಿದರು.
ಇದೇ ಸಂದರ್ಭ ಬನಹಟ್ಟಿ ಸಹಕಾರಿ ನೂಲಿನ ಗಿರಣಿ ನಿರ್ದೇಶಕ ರಾಜೇಂದ್ರ ಭದ್ರನ್ನವರ, ಕಾಡಸಿದ್ಧೇಶ್ವರ ಪಟ್ಟಣ ಸಹಕಾರಿ ಬ್ಯಾಂಕ್‍ನ ಓಂಪ್ರಕಾಶ ಕಾಬರಾ, ದುಂಡಪ್ಪ ಮಾಚಕನೂರ, ಮಹಾದೇವ ಚರ್ಕಿ, ರಾಮಣ್ಣ ಹುಲಕುಂದ, ಪರಪ್ಪ ಬಿಳ್ಳೂರ, ಬಸವಪ್ರಭು ಹಟ್ಟಿ ಹಾಜರಿದ್ದರು.

ತಪ್ಪದೇ ನಮ್ಮ "ಸ್ವರೂಪ ಸಂದರ್ಶನ " ಫೇಸ್ಬುಕ್ ಪೇಜ್ ಲೈಕ್ ಮಾಡಿ ಜೊತೆಗೆ ಯೌಟ್ಯೂಬ್ ಚಾನಲ್ ಸಬ್ಸ್ಕ್ರೈಬ್ ಮಾಡಿ.... 

ಸುದ್ದಿ ಹಾಗೂ ಜಾಹೀರಾತುಗಳಿಗಾಗಿ ಸಂಪರ್ಕಿಸಿ : 9902523698