ಬಾಗಲಕೋಟೆ ಜಿಲ್ಲೆ
ಅನಾಥ ಮಕ್ಕಳಿಗೆ ಆಹಾರ ವಿತರಿಸಿದ:; ಡಾ. ನಾಡಗೌಡಪಾಟೀಲ
ಬಾಗಲಕೋಟ ಜಿಲ್ಲೆಯ ಜಮಖಂಡಿಯ ಜೈನ ಅನಾಥಾಶ್ರಮದ ಮಕ್ಕಳಿಗೆ ಮತ್ತು ವೃದ್ಧರಿಗೆ ಅವಲಕ್ಕಿ. ರವಾ. ಶೇಂಗಾ ಸಾಬೂನು. ಪೇಸ್ಟ್ ಮುಂತಾದ ಆಹಾರ ನೀಡಿದ್ದರು.
ಜಮಖಂಡಿಯ ಜೈನ ಅನಾಥಾಶ್ರಮದಲ್ಲಿ 80ಕ್ಕೂ ಹೆಚ್ಚು ಅನಾಥ ಮಕ್ಕಳು ಮತ್ತು 10ಕ್ಕೂ ಹೆಚ್ಚು ವೃದ್ಧರು ಈ ಆಶ್ರಮದಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಇಂಥ ಮಕ್ಕಳು ಲಾಕ್ಡೌನ್ ಸಂದರ್ಭದಲ್ಲಿ ಹಸಿವಿನಿಂದ ಬಳಲಬಾರದು ಎಂದು ಮಾನವೀಯತೆಯ ದೃಷ್ಟಿಯಿಂದ ಮಕ್ಕಳಿಗೆ ಮತ್ತು ವೃದ್ಧರಿಗೆ ಆಹಾರವನ್ನು ವಿತರಿಸಿದ ರಬಕವಿಯ ನೇತ್ರತಜ್ಞ ಡಾ. ಪದ್ಮ ಜೀತ ನಾಡಗೌಡಪಾಟೀಲ.
ಇದೇ ಸಂದರ್ಭದಲ್ಲಿ ಶಂಕರ ಸೊರಗಾವಿ. ಕುಮಾರ ಬೆಳ್ಳೂರ. ಸಂಜೆಯ ಅಮ್ಮನಗಿಮಠ ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.
ವರದಿ : ಪ್ರಕಾಶ ಕುಂಬಾರ

Social Plugin