ರಬಕವಿ-ಬನಹಟ್ಟಿ ಅಗ್ನಿ ಶಾಮಕದಳದ ಅಧಿಕಾರಿಗಳಿಗೆ ಎನ್-95 ಮಾಸ್ಕ ವಿತರಿಸಿದ ಸೈದಾಪುರ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಮಹಾಲಿಂಗಪ್ಪ ಸನದಿ.

ಕೊರೊನಾ ವಾರಿಯರ್ಸ್‍ನ ಪಾತ್ರ ಪ್ರಮುಖ
ರಬಕವಿ-ಬನಹಟ್ಟಿ,ಮೇ27: ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ವಾರಿಯರ್ಸ್‍ನ ಪಾತ್ರ ಪ್ರಮುಖವಾಗಿದೆ ಅವರು ತಮ್ಮ ಸುರಕ್ಷತೆಯನ್ನು ಕಾಪಾಡಿಕೊಳ್ಳುವುದು ಅಷ್ಟೇ ಮುಖ್ಯ ಎಂದು ಸೈದಾಪುರ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಮಹಾಲಿಂಗಪ್ಪ ಸನದಿ ಹೇಳಿದರು.
ಅವರು ನಗರದ ಅಗ್ನಿಶಾಮಕದಳ ಮತ್ತು ಆಶಾ ಕಾರ್ಯಕರ್ತೆಯರಿಗೆ ಎನ್-95 ಮಾಸ್ಕ್ ವಿತರಿಸಿ ಪತ್ರಿಕೆ ಜೊತೆಗೆ ಮಾತನಾಡಿದರು. ದಿನನಿತ್ಯ ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಕೆಲಸ ಮಾಡುವ ಇಂತಹ ಕೊರೊನಾ ವಾರಿಯರ್ಸನ ಸುರಕ್ಷತೆ ದೃಷ್ಠಿಯಿಂದ ಮಾಸ್ಕ್‍ಗಳನ್ನು ವಿತರಿಸಲಾಗುತ್ತಿದೆ ಎಂದರು. 
ಈ ಸಂದರ್ಭದಲ್ಲಿ ಮಹಾಲಿಂಗೇಶ್ವರ ಅವರಾದಿ, ಅಲ್ಲಪ್ಪ ಮಾಂಗ, ಚನ್ನಪ್ಪ ಹೊಸಮನಿ, ಶಿವಾನಂದ ಚಿಚಕಂಡಿ ಸೇರಿದಂತೆ ಅನೇಕರು ಇದ್ದರು. 

- ತಪ್ಪದೇ ನಮ್ಮ "ಸ್ವರೂಪ ಸಂದರ್ಶನ " ಫೇಸ್ಬುಕ್ ಪೇಜ್ ಲೈಕ್ ಮಾಡಿ ಜೊತೆಗೆ ಯೌಟ್ಯೂಬ್ ಚಾನಲ್ ಸಬ್ಸ್ಕ್ರೈಬ್ ಮಾಡಿ.... 

ಸುದ್ದಿ ಹಾಗೂ ಜಾಹೀರಾತುಗಳಿಗಾಗಿ ಸಂಪರ್ಕಿಸಿ : 9902523698....