ನಾವು ಈಗ ಹೇಳುತ್ತಿರುವ ಈ ಭಾಷೆ ತುಂಬಾ ಹಳೆಯದು .....!
 
ಹಿಬ್ರೂ ಭಾಷೆ ಜಗತ್ತಿನ ಪ್ರಾಚೀನತಮ
ಭಾಷೆಗಳಲ್ಲೊಂದಾಗಿದೆ. ಯಹೂದ್ಯರ ಆದ್ಯ
ಗ್ರಂಥವಾದ ಹಳೇ ಒಡಂಬಡಿಕೆಯ ಮೂಲ
ಇದೇ ಭಾಷೆಯಲ್ಲಿದೆ... ಆದರೆ ಅದು ಸುಮಾರು
೨,೦೦೦ ವರ್ಷಗಳಿಂದ ಅದು ನಿದ್ರಾವಸ್ಥೆಯಲ್ಲಿತ್ತು. ಏಸು ಕ್ರಿಸ್ತನ ಕಾಲದಲ್ಲಿಯೇ ಆ ಜನರಿಗೆ ಮರೆತು ಹೋಗಲಾರಂಭಿಸಿತ್ತು
ಕ್ರಿಸ್ತ ಕೂಡ ಅರಾಮಿಕ್ ಭಾಷೆಯನ್ನಾಡುತಿದ್ದ. ಅನಂತರ ಯಹೂದ್ಯರು ಪಾಲಿಸ್ತಾನದಿಂದ
ಹೊರತಳ್ಳಲ್ಪಟ್ಟು ಜಗತ್ತಿನಲ್ಲೆಲ್ಲ ಚದುರಿಹೋದಮೇಲಂತು
 ಹಿಬ್ರೂ ಭಾಷೆ. ಸಂಪೂರ್ಣ ಅಸ್ತಂಗತವಾಯಿತು


೧೮೮೦ ರಲ್ಲಿ ಹಿಬ್ರೂ ಭಾಷೆಯ ಪುನರುಜ್ಜೀವನದ ಪ್ರಯತ್ನ ಪ್ರಾರಂಭವಾದಾಗ ಪಾಲಿಸ್ತಾನದಲ್ಲಾಗಲಿ ಮತ್ತೆಲ್ಲಿಯಾಗಲಿ ಒಂದೇ ಒಂದು ಯಹೂದ್ಯ ಕುಟುಂಬ ಹಿಬ್ರೂವಿನಲ್ಲಿ ನಿತ್ಯ ವ್ಯವಹಾರ ಮಾಡುತ್ತಿದ್ದಿಲ್ಲ.

ಆದರೆ ಇಂದು ಅದೇ ಹಿಬ್ರೂ ಭಾಷೆ ಇಸ್ರೇಲ್
ದೇಶದ ರಾಷ್ಟ್ರಭಾಷೆಯಾಗಿದೆ. ಅದರಲ್ಲಿ ಅನೇಕ
ದೈನಿಕ ಪತ್ರಿಕೆಗಳೂ ಅಸಂಖ್ಯ ವಾರ, ಮಾಸಿಕ
ಪತ್ರಿಕೆಗಳೂ ಹೊರಡುತ್ತಿವೆ. ಪ್ರತಿ ವರ್ಷ ಹಿಬ್ರೂನಲ್ಲಿ ಸಹಸ್ರಾರು ಪುಸ್ತಕಗಳು ಪ್ರಕಟವಾಗುತ್ತಿವೆ. ಹಿಬ್ರೂ ಶಾಲೆ-ಕಾಲೇಜುವಿಶ್ವವಿದ್ಯಾಲಯವೂ ಆಗಿದೆ. 


ಹೀಗೆ ಸತ್ತುಹೋದ ಭಾಷೆ ಮತ್ತೆ ಜೀವಂತವಾಗಲು ಕಾರಣವಾಗಿದ್ದು  ಆ ಜನರಲ್ಲಿ ಸ್ಪೋಟಗೊಂಡ ಸ್ವಾಭಿಮಾನ, ಅಸ್ಮಿತೆ, ಆಕ್ರೋಶ, ಆತ್ಮವಿಶ್ವಾಸವೆ.

ನಮ್ಮ ಧರ್ಮ, ಸಂಸ್ಕೃತಿಯ ಮೂಲವಾದ ಸಂಸ್ಕೃತದ ಪ್ರಗತಿಗೆ ನಾವೇನು ಮಾಡಿದ್ದೇವೆ ? ರಾಮ, ಕೃಷ್ಣ, ಹನುಮಂತ, ಅಸಂಖ್ಯ ಋಷಿಮುನಿಗಳಾಡಿದ ಭಾಷೆಯನ್ನು ನಾವಿಂದು ಮರೆತೇಬಿಟ್ಟಿದೆವೆ........ಯಾಕೆ ನಾವು ನಮ್ಮ ಸಂಸ್ಕೃತ ಭಾಷೆಯನ್ನು ನಮ್ಮ ಶಾಲೆಗಳಲ್ಲಿ ಕಲಿಸಲು ಪ್ರಾರಂಭಿಸ ಬಾರದು ? .......