https://x.com/ikamalhaasan/status/1861254519792800177?t=EbjYaun6QpVKHd0DQzo-hA&s=19
ದೇಶದಲ್ಲಿ ಸಂವಿಧಾನ ಅಳವಡಿಕೆ ಮಾಡಿಕೊಂಡು 75 ವರ್ಷ ಪೂರ್ಣಗೊಂಡಿದೆ. ಇದೇ ನವೆಂಬರ್ 26, 1949 ರಂದು ಸಂವಿಧಾನವನ್ನು ಅಂಗೀಕರಿಸಲಾಯಿತು. ಜನವರಿ 26, 1950 ರಂದು ಜಾರಿಗೆ ತರಲಾಯಿತು. ಭಾರತೀಯ ಸಂವಿಧಾನದ ಪಿತಾಮಹ ಬಿಆರ್ ಅಂಬೇಡ್ಕರ್ ಅವರು 75 ವರ್ಷಗಳ ಹಿಂದೆ ಭಾರತೀಯ ಸಂವಿಧಾನದ ಕರಡನ್ನು ಮಂಡಿಸಿದರು. ಸಂವಿಧಾನದ 75 ನೇ ವಾರ್ಷಿಕೋತ್ಸವದ ಸ್ಮರಣಾರ್ಥವಾಗಿ ಮತ್ತು ಸಂವಿಧಾನದ ಜಾಗೃತಿ ಬಗ್ಗೆ ಮಕ್ಕಳ್ ನೀಧಿ ಮೈಯಂ (ಎಂಎನ್‌ಎಂ) ಸಂಸ್ಥಾಪಕ ಮತ್ತು ನಟ ಕಮಲ್ ಹಾಸನ್ ಪ್ರಯತ್ನ ಮಾಡಿದ್ದಾರೆ, ಭಾರತದ ಪ್ರತಿಯೊಬ್ಬ ನಾಗರಿಕರು ಭಾರತೀಯ ಸಂವಿಧಾನದ ಮೌಲ್ಯಗಳನ್ನು ಓದಲು, ಅರ್ಥಮಾಡಿಕೊಂಡು ಅದನ್ನು ಎತ್ತಿಹಿಡಿಯಲು ಒತ್ತಾಯಿಸಿದ್ದಾರೆ. ಈ ಕುರಿತು ಅವರು ಸುಧೀರ್ಘ ಪತ್ರವೊಂದನ್ನು ಬರೆದಿದ್ದಾರೆ.
'ನಮಗೆ ಸಂವಿಧಾನವನ್ನು ನೀಡಿದವರ ಪರಂಪರೆಯನ್ನು ಪ್ರತಿಯೊಬ್ಬರು ಗೌರವಿಸಬೇಕು. ನವ ಭಾರತದ ಅಪೂರ್ಣ ಕನಸುಗಳ ಕಡೆಗೆ ಕೆಲಸ ಮಾಡಬೇಕು. ಭಾರತದ ಪ್ರಾಚೀನ ನಾಗರಿಕ ಪರಂಪರೆಯ ಮೌಲ್ಯಗಳು, ಸ್ವಾತಂತ್ರ್ಯ ಹೋರಾಟದ ಕಲ್ಪನೆಗಳು ಮತ್ತು ಲಕ್ಷಾಂತರ ಜನರ ಆಶಯಗಳನ್ನು ಪ್ರತಿಬಿಂಬಿಸಲು ಸಂವಿಧಾನವನ್ನು ರಚಿಸಲಾಗಿದೆ. ಸಂವಿಧಾನದ ರಚನೆಕಾರರು ನಮಗೆ ಆಡಳಿತದ ನೀಲನಕ್ಷೆಯನ್ನು ಮಾತ್ರ ಬಿಟ್ಟು ಹೋಗಿಲ್ಲ. ಆದರೆ ಮುಕ್ತ ಮತ್ತು ಅಖಂಡ ಭಾರತಕ್ಕಾಗಿ ದೂರದೃಷ್ಟಿಯನ್ನು ಹೊಂದಿದ್ದಾರೆ' ಎಂದು ಪತ್ರದ ಮೂಲಕ ತಿಳಿಸಿದ್ದಾರೆ.
ವಿಕ್ರಮ್ ಸಿನಿಮಾ ಬಳಿಕ ಕಮಲ್ ಹಾಸನ್ ನಟಿಸುತ್ತಿರುವ ಬಹುನಿರೀಕ್ಷಿತ ಸಿನಿಮಾ ಥಗ್ಸ್ ಲೈಫ್. ಈ ಚಿತ್ರದ ಟೀಸರ್ ಈಗಾಗಲೇ ಬಹಳಷ್ಟು ಸದ್ದು ಮಾಡಿದೆ. 2025 ಜೂನ್ 5ರಂದು ಥಗ್ಸ್ ಆಫ್ ಲೈಫ್ ಚಿತ್ರ ವಿಶ್ವಾದ್ಯಂತ ರಿಲೀಸ್ ಆಗಲಿದೆ. ಈ ಸಿನಿಮಾದಲ್ಲಿ ಕಮಲ್ ಹಾಸನ್ ಹಿಂದೆಂದೂ ಕಾಣದ ರೀತಿಯಲ್ಲಿ ವಿಭಿನ್ನವಾಗಿ ಕಾಣಿಸಿಕೊಳ್ಳಲಿದ್ದಾರೆ. ಗ್ಯಾಂಗ್ ಸ್ಟರ್ ಸಿನಿಮಾವಾಗಿರುವ ಥಗ್ಸ್ ಲೈಫ್ ಗೆ ಮಣಿರತ್ನಂ ಆಕ್ಷನ್ ಕಟ್ ಹೇಳುತ್ತಿದ್ದಾರೆ.

Social Plugin