ಪ್ರಭು ಮುಂಡ್ಕೂರ್, ರೋಶನಿ ಪ್ರಕಾಶ್, ಇಳಾ ವೀರ್ಮಲ್ಲ  ನಟಿಸಿರುವ ಮರ್ಫಿ ಚಿತ್ರ ಇದೇ ಸೆಪ್ಟೆಂಬರ್ ೨೭ ರಂದು ಬಿಡುಗಡೆಯಾಗಲಿದೆ.  ಬಿ.ಎಸ್.ಪಿ ವರ್ಮ ರವರ ನಿರ್ದೇಶನದ ಎರಡನೇ ಕನ್ನಡ ಚಿತ್ರವಾಗಿದ್ದು ಇದರ ಸಂಗೀತವನ್ನು ಅರ್ಜುನ ಜನ್ಯ, ಸಿಲ್ವೆಸ್ಟರ್ ಪ್ರದೀಪ್ ಹಾಗೂ ರಜತ್-ಕೀರ್ತನ್ ರವರು ಒದಗಿಸಿದ್ದಾರೆ. ಈ ಚಿತ್ರದ ಛಾಯಾಗ್ರಹಣೆಯನ್ನು ಆದರ್ಶ ಆರ್ ರವರು ಮಾಡಿ, ಬಿ ಎಸ್ ಪಿ ವರ್ಮ ರವರೊಡನೆ ಪ್ರಭು ಮುಂಡ್ಕೂರ್ ರವರು ಈ ಚಿತ್ರಕ್ಕೆ ಕಥೆ ಮತ್ತು ಚಿತ್ರಕಥೆಯನ್ನು ಬರೆದಿದ್ದಾರೆ. ಇನ್ನು ತಾರಾಬಳಗದಲ್ಲಿ ಹೆಚ್.ಜಿ.ದತ್ತಾತ್ರೇಯ(ದತ್ತಣ್ಣ), ಅಶ್ವಿನ್ ರಾವ್ ಪಲ್ಲಕ್ಕಿ, ಮಹಾಂತೇಶ ಹಿರೇಮಠ ಮತ್ತು ರಾಮಪ್ರಸಾದ್ ಬಾಣಾವರ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಾರೆ.

ನಾಲ್ಕು ವರ್ಷ ಪರಿಶ್ರಮದ ಈ ಚಲನಚಿತ್ರಕ್ಕೆ,  (ಕಾಂತಾರ, ಸಲಾರ್ ಹಾಗೂ ಸಪ್ತ ಸಾಗರದಾಚೆಯೆಲ್ಲೋ) ಖ್ಯಾತಿಯ ಎಂ ಆರ್ ರಾಜಕೃಷ್ಣನ್ ರವರ ಆಡಿಯೋಗ್ರಫಿ ಹಾಗೂ  ಶ್ರೀಜಿತ್ ಸಾರಂಗ್ ರವರ ಡಿ ಐ, ಚಿತ್ರದ ನಕ್ಷೆಯನ್ನು ಉನ್ನತ ರೀತಿಯಲ್ಲಿ ಬದಲಿಸಿದೆ. ಮರ್ಫಿ ಚಲನಚಿತ್ರವು ಇದೇ ಸೆಪ್ಟೆಂಬರ್ ೨೭/ ೨೦೨೨೪ ರಂದು ಕರ್ನಾಟಕಾದ್ಯಂತ ಬಿಡುಗಡೆಯಾಗಲಿದ್ದು ಎಲ್ಲರಿಗೂ ಕಥೆ,  ಕಾವ್ಯ, ಸಂಗೀತ, ನಟನೆ, ಹಾಗೂ ಭಾವನಾತ್ಮಕದ ರಸದೌತನ ನೀಡಲಿದೆ.