ಬೆಂಗಳೂರಿನ  JW Marriott ನಲ್ಲಿ ಆಯೋಜಿಸಲಾಗಿದ್ದ ಫ್ಯಾಶನ್ ಶೋನಲ್ಲಿ ಗೌರಿ ಚಿತ್ರದ ನಾಯಕನಟ ಸಮರ್ಜಿತ್ ಲಂಕೇಶ್ ಹಾಗೂ ಕಾಟೇರ ಚಿತ್ರದ ನಾಯಕಿ ಆರಾಧನಾ ಅವರು show stopper ಆಗಿ ಕಾಣಿಸಿಕೊಂಡು; ರ‍್ಯಾಂಪ್  ವಾಕ್ ಮಾಡುವ ಮೂಲಕ ನೆರೆದಿದ್ದ ಸಾವಿರಾರು ಮಂದಿ ಪ್ರೇಕ್ಷಕರ ಗಮನ ಸೆಳೆದರು. ಇಂದ್ರಜಿತ್ ಲಂಕೇಶ್ ನಿರ್ದೇಶನದ, ಸಮರ್ಜಿತ್ ಲಂಕೇಶ್ ನಾಯಕರಾಗಿ ಮತ್ತು ಸಾನ್ಯಾ ಅಯ್ಯರ್ ನಾಯಕಿಯಾಗಿ ನಟಿಸಿರುವ; ಬಹು ನಿರೀಕ್ಷೆಯ ಗೌರಿ ಚಿತ್ರ ಸದ್ಯದಲ್ಲೇ ನಿಮ್ಮ ನೆಚ್ಚಿನ ಚಿತ್ರಮಂದಿಗಳಲ್ಲಿ ತೆರೆ ಕಾಣಲಿದೆ.